ಕರ್ನಾಟಕ

karnataka

ETV Bharat / sports

ಬ್ಯಾಟಿಂಗ್​,ಬೌಲಿಂಗ್​​ನಲ್ಲಿ ಮಿಂಚಿದ ರಸೆಲ್... ಪಂಜಾಬ್​ ವಿರುದ್ಧ ಗೆದ್ದ ಕೆಕೆಆರ್​ - ಕೋಲ್ಕತ್ತಾ ನೈಟ್​ ರೈಡರ್ಸ್​

ಇಂಡಿಯನ್​ ಪ್ರೀಮಿಯರ್​ ಲೀಗ್​ನ ಮತ್ತೊಂದು ಪಂದ್ಯದಲ್ಲಿ ಕೆಕೆಆರ್​ ಗೆಲುವು ದಾಖಲು ಮಾಡಿದೆ. ಈ ಪಂದ್ಯದಲ್ಲೂ ಆಲ್​ರೌಂಡರ್​ ಆಂಡ್ರೆ ರೆಸಲ್​ ಬ್ಯಾಟಿಂಗ್​,ಬೌಲಿಂಗ್​​​ನಲ್ಲಿ ಅಬ್ಬರಿಸಿದ್ದು, ತಂಡಕ್ಕೆ 2ನೇ ಗೆಲುವು ಉಡುಗೊರೆ ನೀಡಿದ್ದಾರೆ.

ರಸೆಲ್​ ಸಂಭ್ರಮ

By

Published : Mar 28, 2019, 4:39 AM IST

ಕೋಲ್ಕತ್ತಾ: ಇಂಡಿಯನ್​ ಪ್ರೀಮಿಯರ್​ ಲೀಗ್​​ನ ಮತ್ತೊಂದು ಪಂದ್ಯದಲ್ಲಿ ಕಿಂಗ್ಸ್​ ಇಲೆವೆನ್​ ಪಂಜಾಬ್​ ವಿರುದ್ಧ ಕೋಲ್ಕತ್ತಾ ನೈಟ್​ ರೈಡರ್ಸ್​ ತಂಡ 28ರನ್​ಗಳ ಜಯ ಸಾಧಿಸಿದೆ. ಇದರಿಂದ ತಾನು ಆಡಿರುವ ಎರಡು ಪಂದ್ಯದಲ್ಲಿ ಗೆಲುವು ದಾಖಲಿಸಿದೆ.

ಈಡನ್​ ಗಾರ್ಡನ್​ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಸೋತು ಕೆಕೆಅರ್ ಮೊದಲು ಬ್ಯಾಟ್ ನಡೆಸಿತ್ತು. ರಾಬಿನ್​ ಉತ್ತಪ್ಪ(67), ನಿತೀಶ್ ರಾಣಾ (63) ಹಾಗೂ ಆಂಡ್ರೆ ರಸೆಲ್ (48) ರನ್​ಗಳ ನೇರವಿನಿಂದ 20 ಓವರ್​ಗಳಲ್ಲಿ 4ವಿಕೆಟ್​ ಕಳೆದುಕೊಂಡು 218ರನ್​ಗಳಿಕೆ ಮಾಡಿತು.

219ರನ್​ಗಳ ಬೃಹತ್​ ಟಾರ್ಗೆಟ್​ ಬೆನ್ನತ್ತಿದ್ದ ಪಂಜಾಬ್​ ಆರಂಭದಲ್ಲೇ ಮುಗ್ಗರಿಸಿತು. ಆರಂಭಿಕರಾಗಿ ಕಣಕ್ಕಿಳಿದ ರಾಹುಲ್​(1)ರನ್​ಗಳಿಕೆ ಮಾಡಿ ವಿಕೆಟ್​ ಒಪ್ಪಿಸಿದರು. ಇತ್ತ ಗೇಲ್ ಕೂಡ 20ರನ್​ಗಳಿಕೆ ಮಾಡಿ ಪೆವಿಲಿಯನ್​ ಸೇರಿಕೊಂಡರು. ಇತ್ತ ಸರ್ಫರಾಜ್​ ಖಾನ್​(13)ರನ್​ಗಳಿಸಿ ವಿಕೆಟ್​ ಒಪ್ಪಿಸಿದರಿಂದ ತಂಡಕ್ಕೆ ಹಿನ್ನಡೆಯಾಯಿತು.

ಇದಾದ ಬಳಿಕ ಒಂದಾದ ಮಯಾಂಕ್​-ಡೇವಿಡ್​ ಮಿಲ್ಲರ್​ ಉತ್ತಮ ಆಟವಾಡಿದರು ತಂಡವನ್ನ ಗೆಲುವಿನ ದಡ ಸೇರಿಸುವಲ್ಲಿ ಯಶಸ್ವಿಯಾಗಲಿಲ್ಲ. ಮಯಾಂಕ್​ 58ರನ್​, ಮಿಲ್ಲರ್​ ಅಜೇಯ 59ರನ್​ ಹಾಗೂ ಮನ್ದೀಪ್ ಸಿಂಗ್​ ಅಜೇಯ 33ರನ್​ಗಳಿಕೆ ಮಾಡಿದರು.ತಂಡ ಕೊನೆಯದಾಗಿ 20 ಓವರ್​ಗಳಲ್ಲಿ 4ವಿಕೆಟ್​ ಕಳೆದುಕೊಂಡು 190ರನ್​ಗಳಿಸಲು ಮಾತ್ರ ಶಕ್ತವಾಯಿತು. ಹೀಗಾಗಿ 28ರನ್​ಗಳ ಸೋಲು ಕಾಣುವಂತಾಯಿತು.

ABOUT THE AUTHOR

...view details