ಕರ್ನಾಟಕ

karnataka

ETV Bharat / sports

ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ವಿಶೇಷ ಚೇತನ ಕ್ರಿಕೆಟ್ ಮಂಡಳಿಗೆ ಆಹ್ವಾನ ನೀಡಿದ ಬಿಸಿಸಿಐ - ಡಿಸಿಸಿಐ

ಕೊಹ್ಲಿ ನೇತೃತ್ವದ ಆರ್​ಸಿಬಿ ಶುಕ್ರವಾರ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್​ ತಂಡವನ್ನು 14ನೇ ಆವೃತ್ತಿಯ ಐಪಿಎಲ್​ನ ಉದ್ಘಾಟನಾ ಪಂದ್ಯದಲ್ಲಿ ಎದುರಿಸಲಿದೆ.

ವಿಕಲಚೇತನ ಕ್ರಿಕೆಟ್ ಮಂಡಳಿ
ವಿಕಲಚೇತನ ಕ್ರಿಕೆಟ್ ಮಂಡಳಿ

By

Published : Apr 8, 2021, 9:52 PM IST

ಚೆನ್ನೈ: ಶುಕ್ರವಾರದಿಂದ ಚೆನ್ನೈನಲ್ಲಿ ಆರಂಭವಾಗಲಿರುವ 14ನೇ ಆವೃತ್ತಿಯ ಐಪಿಎಲ್​ನ ಉದ್ಘಾಟನಾ ಪಂದ್ಯಕ್ಕೆ ಭಾರತ ವಿಶೇಷ ಚೇತನ ಕ್ರಿಕೆಟ್ ಮಂಡಳಿಯ ಪದಾಧಿಕಾರಿಗಳಿಗೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಆಹ್ವಾನ ನೀಡಿದ್ದಾರೆ.

ಕೊಹ್ಲಿ ನೇತೃತ್ವದ ಆರ್​ಸಿಬಿ ಶುಕ್ರವಾರ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್​ ತಂಡವನ್ನು 14ನೇ ಆವೃತ್ತಿಯ ಐಪಿಎಲ್​ನ ಉದ್ಘಾಟನಾ ಪಂದ್ಯದಲ್ಲಿ ಎದುರಿಸಲಿದೆ.

ವಿಶ್ವದ ಅತಿದೊಡ್ಡ ಟಿ-20 ಟೂರ್ನಮೆಂಟ್​ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲು ನಮ್ಮನ್ನು ಆಹ್ವಾನಿಸಿದ್ದಕ್ಕಾಗಿ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರಿಗೆ ನಾವು ತುಂಬಾ ಕೃತಜ್ಞರಾಗಿರುತ್ತೇವೆ. ಮೊದಲಿನಿಂದಲೂ ಅವರು ನಮ್ಮನ್ನು ಬಹಳ ಪ್ರೋತ್ಸಾಹಿಸುತ್ತಿದ್ದರು ಮತ್ತು ದೇಶದಲ್ಲಿ ವಿಶೇಷ ಚೇತನರ ಕ್ರಿಕೆಟ್​ಅನ್ನು ಉತ್ತೇಜಿಸುತ್ತಿದ್ದಾರೆ" ಎಂದು ಡಿಸಿಸಿಐ(ಡಿಫರೆಂಟ್ಲಿ ಏಬಲ್ಡ್​ ಕ್ರಿಕೆಟ್ ಅಸೋಸಿಯೇಷನ್) ಅಧ್ಯಕ್ಷ ಮಹಂತೇಶ್ ಜಿ.ಕೆ. ಕೃತಜ್ಞತೆ ತಿಳಿಸಿದ್ದಾರೆ.

ನಾಳೆ ಚೆನ್ನೈನಲ್ಲಿ ಆರಂಭವಾಗಲಿರುವ ಪಂದ್ಯಕ್ಕೆ ಮಹಂತೇಶ್ ಜಿ.ಕೆ. ಜೊತೆಗೆ ಉಪಾಧ್ಯಕ್ಷ ಸುಮಿನ್ ಜೈನ್, ಕಾರ್ಯದರ್ಶಿ ರವಿ ಚೌಹಾಣ್​, ಜಂಟಿ ಕಾರ್ಯದರ್ಶಿ ಅಭಯ್ ಪ್ರತಾಪ್ ಸಿಂಗ್ ಮತ್ತು ಖಜಾಂಚಿ ಜಾನ್ ಡೇವಿಡ್​ ಡಿಸಿಸಿಐ ಪರವಾಗಿ ಭಾಗವಹಿಸಲಿದ್ದಾರೆ.

ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ ಐಪಿಎಲ್ ಆರಂಭಿಕ ಪಂದ್ಯವನ್ನು ವೀಕ್ಷಿಸಲು ಕಳೆದ ವಾರ ಬಿಸಿಸಿಐ ಕಾರ್ಯದರ್ಶಿ ಮಂಡಳಿಯ ಎಲ್ಲಾ ರಾಜ್ಯ ಅಂಗ ಸಂಸ್ಥೆಗಳ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳನ್ನು ಆಹ್ವಾನಿಸಿದ್ದರು.

ABOUT THE AUTHOR

...view details