ಕರ್ನಾಟಕ

karnataka

ETV Bharat / sports

ಐಪಿಎಲ್ 2020: ಪಂಜಾಬ್ ವಿರುದ್ಧ ಟಾಸ್​ ಗೆದ್ದು ಬ್ಯಾಟಿಂಗ್ ಮಾಡಲು ನಿರ್ಧರಿಸಿದ ಹೈದರಾಬಾದ್​

ಐಪಿಎಲ್ ಟೂರ್ನಿಯಲ್ಲಿ ಉಭಯ ತಂಡಗಳು 14 ಬಾರಿ ಮುಖಾಮುಖಿಯಾಗಿದ್ದು, 10 ಪಂದ್ಯಗಳಲ್ಲಿ ಹೈದರಾಬಾದ್​ ಜಯದ ನಗೆ ಬೀರಿದ್ರೆ, 4 ಪಂದ್ಯಗಳಲ್ಲಿ ಪಂಜಾಬ್ ಗೆಲುವು ಸಾಧಿಸಿದೆ.

ಐಪಿಎಲ್ 2020
ಸನ್​ರೈಸರ್ಸ್​ ಹೈದರಾಬಾದ್​

By

Published : Oct 8, 2020, 7:14 PM IST

ದುಬೈ: ಸತತ ಸೋಲುಗಗಳಿಂದ ಕಂಟ್ಟಿರುವ ಕಿಂಗ್ಸ್​ ಇಲೆವೆನ್ ಪಂಜಾಬ್ ವಿರುದ್ಧ ಟಾಸ್ ಗೆದ್ದ ಸನ್​ರೈಸರ್ಸ್​ ಹೈದರಾಬಾದ್ ತಂಡದ ನಾಯಕ ವಾರ್ನರ್​ ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ.

ಪಂಜಾಬ್ ತಂಡ 5 ಪಂದ್ಯಗಳಲ್ಲಿ 4ರಲ್ಲಿ ಸೋಲು ಕಂಡಿದ್ದು, ಕೇವಲ ಒಂದು ಪಂದ್ಯ ಮಾತ್ರ ಗೆದ್ದಿದೆ. ಇತ್ತ ಡೇವಿಡ್ ವಾರ್ನರ್ ನಾಯಕತ್ವದ ಹೈದರಾಬಾದ್ ಕೂಡ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿಲ್ಲ. ಆಡಿದ 5 ಪಂದ್ಯಗಳಲ್ಲಿ 3 ಪಂದ್ಯ ಸೋತಿದ್ದು, 2ರಲ್ಲಿ ಜಯ ಸಾಧಿಸಿದ್ದು ಇಂದಿನ ಪಂದ್ಯದಲ್ಲಿ ಗೆಲುವು ಸಾಧಿಸಲು ಎದುರು ನೋಡುತ್ತಿದೆ.

ಸನ್​ರೈಸರ್ಸ್​ ಹೈದರಾಬಾದ್ ತಂಡ ಕಳೆದ ಪಂದ್ಯದಲ್ಲಿ ದುಬಾರಿಯಾಗಿದ್ದ ಸಿದ್ದಾರ್ಥ್​ ಕೌಲ್ ಬದಲಾಗಿ ಖಲೀಲ್​ ಅಹ್ಮದ್​ಗೆ ಮತ್ತೆ ಅವಕಾಶ ನೀಡಿದೆ.

ಕಿಂಗ್ಸ್​ ಇಲೆವೆನ್ ಪಂಜಾಬ್ ತಂಡದಲ್ಲಿ ಮೂರು ಬದಲಾವಣೆಯಾಗಿದ್ದು, ಪ್ರಭ್​ಸಿಮ್ರಾನ್ , ಅರ್ಷ್​​ದೀಪ್​ ಮತ್ತು ಮುಜೀಬ್ ಉರ್​ ರಹಮಾನ್​ ತಂಡಕ್ಕೆ ಸೇರ್ಪಡೆಗೊಂಡಿದ್ದರೆ, ಜೋರ್ಡಾನ್, ಬ್ರಾರ್​ ಹಾಗೂ ಸರ್ಫರಾಜ್ ಖಾನ್​ ತಂಡದಿಂದ ಹೊರಬಿದ್ದಿದ್ದಾರೆ.

ಐಪಿಎಲ್ ಟೂರ್ನಿಯಲ್ಲಿ ಉಭಯ ತಂಡಗಳು 14 ಬಾರಿ ಮುಖಾಮುಖಿಯಾಗಿದ್ದು, 10 ಪಂದ್ಯಗಳಲ್ಲಿ ಹೈದರಾಬಾದ್​ ಜಯದ ನಗೆ ಬೀರಿದ್ರೆ, 4 ಪಂದ್ಯಗಳಲ್ಲಿ ಪಂಜಾಬ್ ಗೆಲುವು ಸಾಧಿಸಿದೆ.

ಸನ್‌ರೈಸರ್ಸ್ ಹೈದರಾಬಾದ್ :ಡೇವಿಡ್ ವಾರ್ನರ್ (ನಾಯಕ), ಜಾನಿ ಬೈರ್ಸ್ಟೋವ್ (ವಿ.ಕೀ.), ಮನೀಶ್ ಪಾಂಡೆ, ಕೇನ್ ವಿಲಿಯಮ್ಸನ್, ಪ್ರಿಯಮ್ ಗರ್ಗ್, ಅಭಿಷೇಕ್ ಶರ್ಮಾ, ಅಬ್ದುಲ್ ಸಮದ್, ರಶೀದ್ ಖಾನ್, ಸಂದೀಪ್ ಶರ್ಮಾ, ಕೆ ಖಲೀಲ್ ಅಹ್ಮದ್, ಟಿ ನಟರಾಜನ್

ಕಿಂಗ್ಸ್​ ಇಲೆವೆನ್ ಪಂಜಾಬ್: ಕೆ.ಎಲ್. ರಾಹುಲ್ (ನಾಯಕ), ಮಯಾಂಕ್ ಅಗರ್ವಾಲ್, ಮಂದೀಪ್ ಸಿಂಗ್, ನಿಕೋಲಸ್ ಪೂರನ್ (ವಿ.ಕೀ),ಪ್ರಭಸಿಮ್ರಾನ್ ಸಿಂಗ್, ಗ್ಲೆನ್ ಮ್ಯಾಕ್ಸ್​ವೆಲ್, ರವಿ ಬಿಷ್ಣೋಯ್, ಅರ್ಷ್‌ದೀಪ್ ಸಿಂಗ್, ಮುಜೀಬ್ ಉರ್ ರಹಮಾನ್, ಮೊಹಮ್ಮದ್ ಶಮಿ, ಶೆಲ್ಡನ್ ಕಾಟ್ರೆಲ್

ABOUT THE AUTHOR

...view details