ಶಾರ್ಜಾ: ಇಂಡಿಯನ್ ಪ್ರೀಮಿಯರ್ ಲೀಗ್ 28ನೇ ಪಂದ್ಯದಲ್ಲಿ ಟಾಸ್ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.
ಬ್ಯಾಟ್ಸ್‌ಮನ್‌ಗಳ ನೆಚ್ಚಿನ ತಾಣ ಶಾರ್ಜಾದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡುವ ನಿರ್ಧಾರವನ್ನು ಕೊಹ್ಲಿ ತೆಗೆದುಕೊಂಡಿದ್ದಾರೆ.
ಎರಡು ತಂಡಗಳಲ್ಲೂ ಒಂದು ಬದಲಾವಣೆಯಾಗಿದೆ. ಆರ್ಸಿಬಿಯಲ್ಲಿ ಗುರುಕಿರಾತ್ ಬದಲು ಮೊಹಮ್ಮದ್ ಸಿರಾಜ್ ಹಾಗೂ ಕೆಕೆಆರ್ ಬಳಗದಲ್ಲಿ ನರೈನ್ ಬದಲು ಟಾಮ್ ಬಾಂಟನ್ ಇಂದಿನ ಪಂದ್ಯದಲ್ಲಿ ಕಣಕ್ಕಿಳಿಯುತ್ತಿದ್ದಾರೆ.
ಎರಡು ತಂಡಗಳು ತಲಾ 6 ಪಂದ್ಯಗಳನ್ನಾಡಿದ್ದು 4 ಪಂದ್ಯಗಳ ಗೆಲುವು ಹಾಗೂ 2 ಸೋಲು ಕಂಡಿವೆ. ಆದರೆ ರನ್ ರೇಟ್ ಆಧಾರದ ಮೇಲೆ ಕೋಲ್ಕತ್ತಾ 3ನೇ ಸ್ಥಾನದಲ್ಲಿದ್ದರೆ, ಆರ್‌ಸಿಬಿ 4 ನೇ ಸ್ಥಾನದಲ್ಲಿದೆ. ಇಂದಿನ ಪಂದ್ಯದಲ್ಲಿ ಗೆಲ್ಲುವ ತಂಡಗಳು 2ನೇ ಸ್ಥಾನಕ್ಕೇರಲಿವೆ.
ಕೆಕೆಆರ್ ಮತ್ತು ಆರ್‌ಸಿಬಿ ಐಪಿಎಲ್ ಇತಿಹಾಸದಲ್ಲಿ 25 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು 15ರಲ್ಲಿ ಕೆಕೆಆರ್ ಹಾಗೂ 10ರಲ್ಲಿ ಆರ್‌ಸಿಬಿ ಗೆಲುವು ದಾಖಲಿಸಿದೆ.
ಆರ್‌ಸಿಬಿ ತಂಡ: ದೇವದತ್ ಪಡಿಕ್ಕಲ್, ಆಯರನ್ ಫಿಂಚ್, ವಿರಾಟ್ ಕೊಹ್ಲಿ (ನಾಯಕ), ಎಬಿ ಡಿವಿಲಿಯರ್ಸ್ (ವಿ.ಕೀ), ಶಿವಂ ದೂಬೆ, ಕ್ರಿಸ್ ಮೋರಿಸ್, ಮೊಹಮ್ಮದ್ ಸಿರಾಜ್, ವಾಷಿಂಗ್ಟನ್ ಸುಂದರ್, ಇಸುರು ಉದಾನಾ, ನವದೀಪ್ ಸೈನಿ, ಯುಜ್ವೇಂದ್ರ ಚಾಹಲ್.
ಕೆಕೆಆರ್ ತಂಡ: ಶುಬ್ಮನ್ ಗಿಲ್, ರಾಹುಲ್ ತ್ರಿಪಾಠಿ, ನಿತೀಶ್ ರಾಣಾ, ಇಯಾನ್ ಮಾರ್ಗನ್, ದಿನೇಶ್ ಕಾರ್ತಿಕ್ (ನಾಯಕ/ವಿ.ಕೀ), ಆಂಡ್ರೆ ರಸ್ಸೆಲ್ , ಟಾಮ್ ಬಾಂಟನ್, ಪ್ಯಾಟ್ ಕಮ್ಮಿನ್ಸ್, ಕಮಲೇಶ್ ನಾಗರ್ಕೋಟಿ, ಪ್ರಸಿದ್ ಕೃಷ್ಣ, ವರುಣ್ ಚಕ್ರವರ್ತಿ.