ಕರ್ನಾಟಕ

karnataka

ETV Bharat / sports

ಕ್ರಿಕೆಟ್‌ ಫ್ಯಾನ್ಸ್‌ಗೆ ಖುಷಿ ಸುದ್ದಿ.. ಸೆ.26ರಿಂದ ನ.7ರವರೆಗೆ ಯುಎಇನಲ್ಲಿ ಐಪಿಎಲ್​ ಆಯೋಜನೆ?

ಟಿ20 ವಿಶ್ವಕಪ್​ ಭವಿಷ್ಯದ ಬಗ್ಗೆ ಸಾಕಷ್ಟು ಗೊಂದಲದ ನಂತರ ಬಿಸಿಸಿಐ 2020ರ ಐಪಿಎಲ್​ ನಡೆಸಲು ತೀರ್ಮಾನಿಸಿದೆ. ಈಗಾಗಲೇ ಬಿಸಿಸಿಐ ಐಪಿಎಲ್​ವೇಳಾಪಟ್ಟಿಯನ್ನು ಸಂಪೂರ್ಣ ಅಂತಿಮಗೊಳಿಸಿದೆ. ಸೆಪ್ಟೆಂಬರ್​ 26ರಿಂದ ನವೆಂಬರ್​ 7ರ ನಡುವೆ ಟೂರ್ನಿ ನಡೆಯಲಿದೆ ಎನ್ನಲಾಗುತ್ತಿದೆ..

IPL 2020
2020ರ ಆವೃತ್ತಿಯ ಐಪಿಎಲ್ ಟೂರ್ನಿ

By

Published : Jul 19, 2020, 2:27 PM IST

ಮುಂಬೈ :ಐಪಿಎಲ್​13ನೇ ಆವೃತ್ತಿ ಕೋವಿಡ್​-19 ಕಾರಣ ಅನಿರ್ದಿಷ್ಟಾವಧಿಗೆ ಮುಂದೂಡಲ್ಪಟ್ಟಿತ್ತು. ಆದರೆ, ಇದೀಗ ಯುಎಇನಲ್ಲಿ ಸೆಪ್ಟೆಂಬರ್​ 26ರಿಂದ ನವೆಂಬರ್​ 7ರ ಮಧ್ಯದಲ್ಲಿ ಶ್ರೀಮಂತ ಕ್ರಿಕೆಟ್​ ಲೀಗ್ ನಡೆಸಲು ಮುಂದಾಗಿದೆ ಎಂದು ಬಿಸಿಸಿಐ ಮೂಲಗಳಿಂದ ತಿಳಿದು ಬಂದಿದೆ.

2020ರ ಆವೃತ್ತಿಯ ಟೂರ್ನಿ ಮಾರ್ಚ್​ 29ರಿಂದ ಶುರುವಾಗಬೇಕಿತ್ತು. ಆದರೆ, ಕೊವೀಡ್​ ಸಾಂಕ್ರಾಮಿಕ ಕಾರಣದಿಂದ ಮುಂದೂಡಲ್ಪಟ್ಟಿತ್ತು. ಆದರೂ ಬಿಸಿಸಿಐ ಐಪಿಎಲ್​ ನಡದೇ ನಡೆಯುತ್ತದೆ ಎಂಬ ವಿಶ್ವಾಸ ಮಾತ್ರ ಕಳೆದುಕೊಂಡಿರಲಿಲ್ಲ. ಒಂದು ವೇಳೆ ಐಪಿಎಲ್​ ನಡೆಯದೇ ಹೋದಲ್ಲಿ ಬಿಸಿಸಿಐಗೆ ಸುಮಾರು 4000 ಕೋಟಿ ನಷ್ಟವಾಗಲಿದೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್​ ಗಂಗೂಲಿ ಹೇಳಿದ್ದರು.

ಟಿ20 ವಿಶ್ವಕಪ್​ ಭವಿಷ್ಯದ ಬಗ್ಗೆ ಸಾಕಷ್ಟು ಗೊಂದಲದ ನಂತರ ಬಿಸಿಸಿಐ 2020ರ ಐಪಿಎಲ್​ ನಡೆಸಲು ತೀರ್ಮಾನ ಮಾಡಿದೆ. ಈಗಾಗಲೇ ಬಿಸಿಸಿಐ ಐಪಿಎಲ್​ನ ವೇಳಾಪಟ್ಟಿಯನ್ನು ಸಂಪೂರ್ಣ ಅಂತಿಮಗೊಳಿಸಿದೆ ಎನ್ನಲಾಗುತ್ತಿದೆ. ಸೆಪ್ಟೆಂಬರ್​ 26ರಿಂದ ನವೆಂಬರ್​ 7ರ ನಡುವೆ ಟೂರ್ನಿ ನಡೆಯಲಿದೆ ಎನ್ನಲಾಗುತ್ತಿದೆ.

'ಬಿಸಿಸಿಐ ಮುಂದೆ ಇರುವ ಏಕೈಕ ಆಯ್ಕೆ ಇದಾಗಿದೆ(ದಿನಾಂಕ). ಈಗಾಗಲೇ ಶೇ.80ರಷ್ಟು ವೇಳಾಪಟ್ಟಿ ಮುಗಿದಿದೆ. ಈ ವಿಚಾರವಾಗಿ ಬಿಸಿಸಿಐ ಎಲ್ಲಾ ವಿಭಾಗದಿಂದಲೂ ಅನುಮೋದನೆ ಪಡೆಯುತ್ತಿದೆ' ಎಂದು ಬಿಸಿಸಿಐ ಮೂಲಗಳಿಂದ ತಿಳಿದು ಬಂದಿದೆ.

ABOUT THE AUTHOR

...view details