ನವದೆಹಲಿ:ಸೆಪ್ಟೆಂಬರ್ 19ರಿಂದ ನವೆಂಬರ್ 5ರವರೆಗೆ ಯುಎಇಯಲ್ಲಿ ಪ್ರಸಕ್ತ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ನಡೆಸಲು ನಿರ್ಧರಿಸಲಾಗಿದೆ. ಈ ಟೂರ್ನಿಗಾಗಿ ಎಲ್ಲ ಕ್ರಿಕೆಟ್ ತಂಡಗಳ ಫ್ರಾಂಚೈಸಿಗಳು ಈಗಿನಿಂದಲೇ ಭರದ ತಯಾರಿಯಲ್ಲಿ ತೊಡಗಿವೆ.
ಈ ನಿಟ್ಟಿನಲ್ಲಿ ಒಂದು ಹೆಜ್ಜೆ ಮುಂದಿಟ್ಟಿರುವ ದೆಹಲಿ ಕ್ಯಾಪಿಟಲ್ಸ್, ಪ್ಲೇಯರ್ಸ್ಗೆ ದೆಹಲಿಯಲ್ಲಿಯೇ ಶಿಬಿರ ಆಯೋಜಿಸಲು ನಿರ್ಧರಿಸಿದೆ. ಆದ್ರೆ, ಈ ಬಗ್ಗೆ ಇನ್ನೂ ಅಂತಿಮ ನಿರ್ಧಾರ ಕೈಗೊಂಡಿಲ್ಲ. ನಾಳೆ ಬಿಸಿಸಿಐ ಆಡಳಿತ ಮಂಡಳಿ ಸಭೆ ಸೇರಲಿದ್ದು, ಪಂದ್ಯಾವಳಿಯ ವೇಳಾಪಟ್ಟಿ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಇದರ ಜತೆಗೆ ತಂಡಗಳ ಮಾಲೀಕರು ಯಾವೆಲ್ಲಾ ಕ್ರಮ ಕೈಗೊಳ್ಳಬಹುದು ಎಂಬ ಮಾಹಿತಿಯನ್ನೂ ನೀಡುವ ಸಾಧ್ಯತೆಯೂ ಇದೆ.