ಕರ್ನಾಟಕ

karnataka

ETV Bharat / sports

ಸಿಎಸ್​ಕೆ​ ಅಭಿಮಾನಿಗಳಿಗೆ ಖುಷಿ ಸುದ್ದಿ: ಮುಂದಿನ ಪಂದ್ಯಕ್ಕೆ ಬ್ರಾವೋ, ರಾಯುಡು ಫಿಟ್​ - Dwane Bravo return

ಆಡಿರುವ 10 ಆವೃತ್ತಿಗಳಲ್ಲೂ ಪ್ಲೇ ಆಫ್ ತಲುಪಿರುವ ಏಕೈಕ ತಂಡವಾಗಿರುವ ಚೆನ್ನೈ ಸೂಪರ್​ ಕಿಂಗ್ಸ್ ತಂಡ ಈ ಬಾರಿ ಸತತ ಎರಡು ಸೋಲಿನಿಂದ ಕಂಗೆಟ್ಟಿದೆ. ಮೊದಲ ಪಂದ್ಯ ಗೆದ್ದ ಬಳಿಕ, ಮುಂದಿನ ಎರಡೂ ಪಂದ್ಯಗಳಲ್ಲೂ ಬ್ಯಾಟಿಂಗ್ ವೈಫಲ್ಯ ಅನುಭವಿಸಿ ಸೋಲುಕಂಡಿದೆ.

ಅಂಬಾಟಿ ರಾಯುಡು
ಅಂಬಾಟಿ ರಾಯುಡು

By

Published : Sep 30, 2020, 5:20 PM IST

ದುಬೈ:ಉದ್ಘಾಟನಾ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್​ ವಿರುದ್ಧದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ರಾಯುಡು ಹಾಗೂ ಆಲ್​ರೌಂಡರ್​ ಡ್ವೇನ್​ ಬ್ರಾವೋ ಸಂಪೂರ್ಣ ಫಿಟ್ ಆಗಿದ್ದು, ಮುಂದಿನ ಪಂದ್ಯಕ್ಕೆ ಲಭ್ಯವಾಗಲಿದ್ದಾರೆ ಎಂದು ಸಿಎಸ್​ಕೆ ಮೂಲಗಳಿಂದ ತಿಳಿದು ಬಂದಿದೆ.

ಆಡಿರುವ 10 ಆವೃತ್ತಿಗಳಲ್ಲೂ ಪ್ಲೇ ಆಫ್ ತಲುಪಿರುವ ಏಕೈಕ ತಂಡವಾಗಿರುವ ಚೆನ್ನೈ ಸೂಪರ್​ ಕಿಂಗ್ಸ್ ತಂಡ ಈ ಬಾರಿ ಸತತ ಎರಡು ಸೋಲಿನಿಂದ ಕಂಗೆಟ್ಟಿದೆ. ಮೊದಲ ಪಂದ್ಯ ಗೆದ್ದ ಬಳಿಕ, ಮುಂದಿನ ಎರಡೂ ಪಂದ್ಯಗಳಲ್ಲೂ ಬ್ಯಾಟಿಂಗ್ ವೈಫಲ್ಯ ಅನುಭವಿಸಿ ಸೋಲುಕಂಡಿದೆ.

ಮೊದಲ ಪಂದ್ಯದಲ್ಲಿ ಮುಂಬೈ ವಿರುದ್ಧ ಆಕರ್ಷಕ 71 ರನ್​ ಸಿಡಿಸಿದ್ದ ರಾಯುಡು ತಂಡಕ್ಕೆ ಗೆಲುವು ತಂದುಕೊಡುವಲ್ಲಿ ಯಶಸ್ವಿಯಾಗಿದ್ದರು. ಆದೆ ಮಂಡಿರಜ್ಜು ಗಾಯಕ್ಕೆ ತುತ್ತಾಗಿದ್ದ ಅವರು ರಾಜಸ್ಥಾನ್ ಹಾಗೂ ಡೆಲ್ಲಿ ಕ್ಯಾಪಿಟಲ್ ವಿರುದ್ಧದ ಪಂದ್ಯದಿಂದ ಹೊರಗುಳಿದಿದ್ದರು ಮತ್ತು ತಂಡ ಹೀನಾಯ ಸೋಲುಕಂಡಿತ್ತು. ಬ್ರಾವೋ ಕೂಡ ಫಿಟ್​ ಆಗದಿರುವುದರಿಂದ ಟೂರ್ನಿಯಲ್ಲಿ ಇನ್ನೂ ಕಾಣಿಸಿಕೊಂಡಿಲ್ಲ.

ಡ್ವೇನ್ ಬ್ರಾವೋ

ಬ್ರಾವೋಈ ಮತ್ತು ರಾಯುಡು ಸಂಪೂರ್ಣ ಫಿಟ್​ ಆಗಿದ್ದಾರೆ. ಅವರು ಮುಂದಿನ ಪಂದ್ಯದಲ್ಲಿ ಸಿಎಸ್​ಕೆ ತಂಡಕ್ಕೆ ಮರಳಲಿದ್ದಾರೆ ಎಂದು ಸಿಎಸ್​ಕೆ ಸಿಇಒ ಕೆಎಸ್​ ವಿಶ್ವನಾಥನ್​ ಹೇಳಿದ್ದಾರೆ. ರಾಯುಡು ಅಭ್ಯಾಸದ ಸಂದರ್ಭದಲ್ಲಿ ನೆಟ್​ನಲ್ಲಿ ಚೆನ್ನಾಗಿ ಬ್ಯಾಟಿಂಗ್ ನಡೆಸಿದ್ದಾರೆ. ಬ್ರಾವೋ ಕೂಡ ಫಿಟ್​ ಆಗಿದ್ದು, ಈಗಾಗಲೇ ಬೌಲಿಂಗ್ ಅಭ್ಯಾಸ ನಡೆಸುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಅಂಕ ಪಟ್ಟಿಯಲ್ಲಿ 1 ಗೆಲುವು ಮತ್ತು 2 ಸೋಲುಕಂಡಿರುವ ಸಿಎಸ್​ಕೆ ಕೊನೆಯ ಸ್ಥಾನಕ್ಕೆ ಕುಸಿದಿದೆ. ಆದರೆ ಚೆನ್ನೈ ತಂಡ ಟೂರ್ನಿಯಲ್ಲಿ ತಿರುಗಿ ಬೀಳಲಿದೆ ಎಂದು ವಿಶ್ವನಾಥನ್​ ಹೇಳಿದ್ದಾರೆ.

ABOUT THE AUTHOR

...view details