ಪ್ಲೋರಿಡಾ:ಪದಾರ್ಪಣೆ ಪಂದ್ಯವಾಡಿದ ನವ್ದೀಪ್ ಸೈನಿ (3 ವಿಕೆಟ್) ಮಾರಕ ಬೌಲಿಂಗ್ ದಾಳಿ ಹಾಗೂ ಸಂಘಟಿತ ಬ್ಯಾಟಿಂಗ್ ನೆರವಿನಿಂದ ಭಾರತ ತಂಡ ವಿಂಡೀಸ್ ಮಣಿಸಿ ಸರಣಿಯಲ್ಲಿ 1-0 ಅಂತರದಿಂದ ಮುನ್ನಡೆ ಸಾಧಿಸಿದೆ.
ಟಾಸ್ ಸೋತು ಬ್ಯಾಟಿಂಗ್ ನಡೆಸಿದ್ದ ವಿಂಡೀಸ್ 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 95 ರನ್ಗಳನ್ನಷ್ಟೇ ಗಳಿಸಲು ಶಕ್ತವಾಯಿತು. ಉತ್ತಮ ಬೌಲಿಂಗ್ ದಾಳಿ ನಡೆಸಿದ ಸೈನಿ 3 ವಿಕೆಟ್, ಭುವನೇಶ್ವರ್ 2 , ಜಡೇಜಾ, ವಾಷಿಂಗ್ಟನ್ ಸುಂದರ್,ಕೃನಾಲ್ ಹಾಗೂ ಖಲೀಲ್ ಅಹ್ಮದ್ ತಲಾ ಒಂದು ವಿಕೆಟ್ ಪಡೆದು ವಿಂಡೀಸ್ ತಂಡವನ್ನು 100 ಗಡಿಯೊಳಗೆ ಬಂಧಿಸಿದರು.
ಇನ್ನು 96 ರನ್ಗಳ ಗುರಿ ಪಡೆದ ಭಾರತ 17.2 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು ತಲುಪಿತು. ಸುಲಭದ ಗುರಿ ಬೆನ್ನತ್ತಿದ್ದ ಭಾರತ ತಂಡ 4 ರನ್ಗಳಾಗುವಷ್ಟರಲ್ಲಿ ಧವನ್(1) ವಿಕೆಟ್ ಕಳೆದುಕೊಂಡಿತು. ನಂತರ ರೋಹಿತ್ ಹಾಗೂ ಕೊಹ್ಲಿ ಜೊತೆಗೂಡಿ 28 ರನ್ಗಳ ಜೊತೆಯಾಟ ನೀಡಿದರು. ಈ ಹಂತದಲ್ಲಿ ದಾಳಿಗಿಳಿದ ನರೈನ್ 24 ರನ್ಗಳಿಸಿದ್ದ ರೋಹಿತ್ ಹಾಗೂ ಶೂನ್ಯಕ್ಕೆ ಪಂತ್ರನ್ನು ಸತತ ಎರಡು ಎಸೆತಗಳಲ್ಲಿ ಪೆವಿಲಿಯನ್ಗಟ್ಟಿದರು.