ಹೈದರಾಬಾದ್:ಶ್ರೀಲಂಕಾ ವಿರುದ್ಧದ ಕ್ರಿಕೆಟ್ ಟೂರ್ನಿಯ ಪ್ರವಾಸ ಮುಂದೂಡಿಕೆ ಬೆನ್ನಲ್ಲೇ, ಜಿಂಬಾಬ್ವೆ ವಿರುದ್ಧದ ಟೂರ್ನಿ ಕೂಡ ಇದೀಗ ಬಿಸಿಸಿಐನಿಂದ ರದ್ದುಗೊಂಡಿದೆ. ಆಗಸ್ಟ್ ತಿಂಗಳಲ್ಲಿ ಟೂರ್ ಕೈಗೊಳ್ಳಬೇಕಾಗಿದ್ದ ಟೀಂ ಇಂಡಿಯಾ ಕೊರೊನಾ ಕಾರಣ ಮನೆಯಲ್ಲೇ ಉಳಿದು ಕೊಳ್ಳಬೇಕಾಗಿದೆ.
ಪ್ರಪಂಚದಾದ್ಯಂತ ಕೊರೊನಾ ವೈರಸ್ ಹರಡುವಿಕೆ ಇದೀಗ ಮತ್ತಷ್ಟು ವೇಗ ಪಡೆದುಕೊಂಡಿದ್ದು, ಹೀಗಾಗಿ ಭಾರತೀಯ ಕ್ರಿಕೆಟ್ ಮಂಡಳಿ ಈ ಮಹತ್ವದ ನಿರ್ಧಾರ ಕೈಗೊಂಡಿದೆ. ಶ್ರೀಲಂಕಾ ವಿರುದ್ಧ ಜೂನ್ - ಜುಲೈನಲ್ಲಿ ನಡೆಯಬೇಕಾಗಿದ್ದ ಕ್ರಿಕೆಟ್ ಸರಣಿ ಮುಂದೂಡಿಕೆಯಾಗಿದ್ದು, ಅದರ ಬೆನ್ನಲ್ಲೇ ಇಂದು ಈ ನಿರ್ಧಾರ ಹೊರಹಾಕಿ ಬಿಸಿಸಿಐ ಸೆಕ್ರೆಟರಿ ಜಯ್ ಶಾ ತಿಳಿಸಿದ್ದಾರೆ. ಶ್ರೀಲಂಕಾ ವಿರುದ್ಧ ಟೀಂ ಇಂಡಿಯಾ ಮೂರು ಏಕದಿನ ಹಾಗೂ ಮೂರು ಟಿ-20 ಪಂದ್ಯಗಳಲ್ಲಿ ಭಾಗಿಯಾಗಬೇಕಾಗಿತ್ತು.