ಮೆಲ್ಬೋರ್ನ್: ಭಾರತೀಯ ಬೌಲರ್ಗಳು ತುಂಬಾ ನೇರವಾಗಿ ಬೌಲಿಂಗ್ ಮಾಡಿದ್ದರಿಂದ ರನ್ ಗಳಿಸಲು ತುಂಬಾ ಕಷ್ಟವಾಯಿತು ಎಂದು ಆಸ್ಟ್ರೇಲಿಯಾ ತಂಡದ ಆರಂಭಿಕ ಬ್ಯಾಟ್ಸ್ಮನ್ ಮ್ಯಾಥ್ಯೂ ವೇಡ್, ಟೀಮ್ ಇಂಡಿಯಾ ಬೌಲಿಂಗ್ ದಾಳಿಯನ್ನು ಶ್ಲಾಘಿಸಿದ್ದಾರೆ.
ಅವರು ತುಂಬಾ ಚೆನ್ನಾಗಿ ಬೌಲಿಂಗ್ ಮಾಡಿದರು, ಅವರು ವಿಕೆಟ್ಗೆ ನೇರವಾಗಿ ಬೌಲಿಂಗ್ ಮಾಡಿದ್ದರಿಂದ ನಮಗೆ ರನ್ ಗಳಿಸಲು ವೈಯಕ್ತಿಕವಾಗಿ ಮತ್ತು ಇತರ ಬ್ಯಾಟ್ಸ್ಮನ್ಗಳಿಗೂ ಕಷ್ಟವಾಯಿತು. ಆ ಸಮಯದಲ್ಲಿ ಅವರು ನಮಗೆ ತುಂಬಾ ಸವಾಲಾಗುತ್ತಿದ್ದರು" ಎಂದು 137 ಎಸೆತಗಳಲ್ಲಿ 40 ರನ್ ಗಳಿಸಿ ತಂಡವನ್ನು 100ರ ಗಡಿ ದಾಟಿಸಿದ ವೇಡ್ ತಿಳಿಸಿದ್ದಾರೆ.
ಅಲ್ಲದೆ ತುಂಬಾ ಆಳವಾಗಿ ಬ್ಯಾಟಿಂಗ್ ಮಾಡಲು ವಿಫಲವಾದ ತಮ್ಮ ತಂಡದ ಬ್ಯಾಟ್ಸ್ಮನ್ಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. 'ನಾವು ಬೌಲರ್ಗಳನ್ನು ದಣಿಸುವಷ್ಟು ಆಳವಾಗಿ ಬ್ಯಾಟಿಂಗ್ ಮಾಡಲಿಲ್ಲ. ನಾವು ಆಪಾದನೆಯನ್ನು ತೆಗೆದುಕೊಳ್ಳಬೇಕು. ಏಕೆಂದರೆ ಅವರು ನಮ್ಮನ್ನು ಆರಂಭದಿಂದಲೇ ಒತ್ತಡದಲ್ಲಿದ್ದದ್ದನ್ನು ಗುರುತಿಸಿಕೊಂಡಿದ್ದರು ಎಂದು ವೇಡ್ ಹೇಳಿದ್ದಾರೆ.
ಪಿಚ್ ಕಠಿತೆಯಿಂದ ಕೂಡಿರಲಿಲ್ಲ. ಬದಲಾಗಿ ಫ್ಲಾಟ್ ಆಗಿತ್ತು. ಆದರೆ ನನ್ನನ್ನು ಸೇರಿದಂತೆ ಬ್ಯಾಟ್ಸ್ಮನ್ಗಳು ತುಂಬಾ ನಿರಾಶೆ ಮೂಡಿಸಿದರು. ಅದರಲ್ಲೂ ಸ್ಪಿನ್ನರ್ಗಳಿಗೆ ವಿಕೆಟ್ ಒಪ್ಪಿಸುವುದು ಕೆಲವೊಮ್ಮೆ ನಿರಾಶೆ ತರುತ್ತದೆ. ಆದರೆ ಇದೆಲ್ಲಾ ಕ್ರಿಕೆಟ್ನಲ್ಲಿ ನಡೆಯುತ್ತದೆ ಎಂದು ವೇಡ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.