ಕರ್ನಾಟಕ

karnataka

ರಿಕಿ ಪಾಂಟಿಂಗ್​ ದಾಖಲೆ ಪುಡಿಗಟ್ಟಲು ಕೊಹ್ಲಿಗೆ ಬೇಕಿದೆ ಒಂದೇ ಒಂದು ಶತಕ

ಈಗಾಗಲೆ ವಿರಾಟ್​ ಕೊಹ್ಲಿ ನಾಯಕನಾಗಿ ಟೆಸ್ಟ್​ ಕ್ರಿಕೆಟ್​ನಲ್ಲಿ 19 ಶತಕ ಸಿಡಿಸಿ ರಿಕಿ ಪಾಂಟಿಂಗ್​(19)ರೊಂದಿಗೆ ಮೊದಲ ಸ್ಥಾನ ಹಂಚಿಕೊಂಡಿದ್ದಾರೆ. ಇನ್ನೊಂದು ಶತಕ ಸಿಡಿಸಿದರೆ ಕೊಹ್ಲಿ ಟೆಸ್ಟ್​ ಕ್ರಿಕೆಟ್​ನಲ್ಲಿ ನಾಯಕನಾಗಿ ಹೆಚ್ಚು ಶತಕ ಸಿಡಿಸಿದ ವಿಶ್ವದ ಎರಡನೇ ಬ್ಯಾಟ್ಸ್​ಮನ್​ ಎನಿಸಿಕೊಳ್ಳಲಿದ್ದಾರೆ.

By

Published : Oct 17, 2019, 6:01 PM IST

Published : Oct 17, 2019, 6:01 PM IST

ETV Bharat / sports

ರಿಕಿ ಪಾಂಟಿಂಗ್​ ದಾಖಲೆ ಪುಡಿಗಟ್ಟಲು ಕೊಹ್ಲಿಗೆ ಬೇಕಿದೆ ಒಂದೇ ಒಂದು ಶತಕ

India vs South Africa

ರಾಂಚಿ: ಶುಕ್ರವಾರದಿಂದ ರಾಂಚಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಅಂತಿಮ ಟೆಸ್ಟ್​ ಪಂದ್ಯ ನಡೆಯಲಿದ್ದು, ಭಾರತ ತಂಡದ ನಾಯಕ ಕೊಹ್ಲಿ ಇನ್ನೊಂದು ಶತಕ ದಾಖಲಿಸಿದರೆ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಗ್​ ದಾಖಲೆ ಮುರಿಯಲಿದ್ದಾರೆ.

ಈಗಾಗಲೆ ವಿರಾಟ್​ ಕೊಹ್ಲಿ ನಾಯಕನಾಗಿ ಟೆಸ್ಟ್​ ಕ್ರಿಕೆಟ್​ನಲ್ಲಿ 19 ಶತಕ ಸಿಡಿಸಿ ರಿಕಿ ಪಾಂಟಿಂಗ್​(19)ರೊಂದಿಗೆ ಮೊದಲ ಸ್ಥಾನ ಹಂಚಿಕೊಂಡಿದ್ದಾರೆ. ಇನ್ನೊಂದು ಶತಕ ಸಿಡಿಸಿದರೆ ಕೊಹ್ಲಿ ಟೆಸ್ಟ್​ ಕ್ರಿಕೆಟ್​ನಲ್ಲಿ ನಾಯಕನಾಗಿ ಹೆಚ್ಚು ಶತಕ ಸಿಡಿಸಿದ ವಿಶ್ವದ ಎರಡನೇ ಬ್ಯಾಟ್ಸ್​ಮನ್​ ಎನಿಸಿಕೊಳ್ಳಲಿದ್ದಾರೆ.

ದಕ್ಷಿಣ ಆಫ್ರಿಕಾದ ಗ್ರೇಮ್​ ಸ್ಮಿತ್​ ನಾಯಕನಾಗಿ 25 ಶತಕ ಸಿಡಿಸಿ ಮೊದಲ ಸ್ಥಾನದಲ್ಲಿದ್ದಾರೆ. ಇವರನ್ನು ಬಿಟ್ಟರೆ ಆಸ್ಟ್ರೇಲಿಯಾದ ಸ್ಟಿವ್​ ಸ್ಮಿತ್​ ಹಾಗೂ ಅಲೆನ್​ ಬಾರ್ಡರ್​ ತಲಾ 15 ಶತಕ ಸಿಡಿಸಿದ್ದು ಮೂರನೇ ಸ್ಥಾನದಲ್ಲಿದ್ದರೆ, ಟೆಸ್ಟ್​ ಕ್ರಿಕೆಟ್​ ಲೆಜೆಂಡ್​ ಡಾನ್​ ಬ್ರಾಡ್ಮನ್​ 14 ಶತಕ ಸಿಡಿಸಿದ್ದಾರೆ.

ಈಗಾಗಲೆ ವಿರಾಟ್​ ಕೊಹ್ಲಿ ನೇತೃತ್ವದ ಭಾರತ ತಂಡ ಆಫ್ರಿಕನ್ನರ ವಿರುದ್ಧ 3 ಪಂದ್ಯಗಳ ಟೆಸ್ಟ್​ ಸರಣಿಯನ್ನು 2-0ಯಲ್ಲಿ ಗೆದ್ದುಕೊಂಡಿದೆ. ಮೊದಲ ಟೆಸ್ಟ್​ ಪಂದ್ಯವನ್ನು 203 ರನ್​ಗಳಿಂದ ಗೆದ್ದರೆ, ಎರಡನೇ ಟೆಸ್ಟ್ ಪಂದ್ಯವನ್ನು ಇನ್ನಿಂಗ್ಸ್​ ಹಾಗೂ 137 ರಿಂದ ಗೆಲುವು ಸಾಧಿಸಿ ಸರಣಿಯನ್ನು 2-0ಯಲ್ಲಿ ಮುನ್ನಡೆ ಸಾಧಿಸಿತ್ತು.

ABOUT THE AUTHOR

...view details