ಕರ್ನಾಟಕ

karnataka

ETV Bharat / sports

ದಕ್ಷಿಣ ಆಫ್ರಿಕಾ ವಿರುದ್ಧ ಟಿ-20 ಸರಣಿಯಿಂದಲೂ ಧೋನಿ ಕೈಬಿಡಲು ಆಯ್ಕೆ ಸಮಿತಿ ನಿರ್ಧಾರ?

ಮುಂಬರುವ ಟಿ-20 ವಿಶ್ವಕಪ್​ ಮೇಲೆ ಕಣ್ಣಿಟ್ಟಿರುವ ಆಯ್ಕೆ ಸಮಿತಿ ಅದಕ್ಕಾಗಿ ಯುವ ಪ್ರತಿಭೆಗಳಿಗೆ ಚಾನ್ಸ್​ ನೀಡಲು ಮುಂದಾಗಿದ್ದು, ಹೀಗಾಗಿ ತಂಡದ ಹಿರಿಯ ಆಟಗಾರ ಎಂಎಸ್​ ಧೋನಿಗೆ ದಕ್ಷಿಣ ಆಫ್ರಿಕಾ ವಿರುದ್ಧದ ಟಿ-20 ಕ್ರಿಕೆಟ್​ ಸರಣಿಯಿಂದ ಕೈಬಿಡಲು ನಿರ್ಧಾರ ಮಾಡಿದೆ ಎಂಬ ಮಾತು ಕೇಳಿ ಬಂದಿದೆ.

ರಿಷಭ್​ ಪಂತ್​​-ಧೋನಿ

By

Published : Aug 28, 2019, 6:09 PM IST

ಮುಂಬೈ: ವೆಸ್ಟ್​ ಇಂಡೀಸ್​ ವಿರುದ್ಧದ ಕ್ರಿಕೆಟ್​ ಸರಣಿ ಬಳಿಕ ಭಾರತದಲ್ಲೇ ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ನಡೆಯಲಿರುವ ಕ್ರಿಕೆಟ್​ ಸರಣಿಯ ಟಿ-20ಯಲ್ಲಿ ಮಹೇಂದ್ರ ಸಿಂಗ್​ ಧೋನಿ ಆಡುವ ಸಾಧ್ಯತೆ ಕಡಿಮೆ ಇದೆ ಎಂಬ ಮಾತು ಕೇಳಿ ಬರುತ್ತಿವೆ.

ದಕ್ಷಿಣ ಆಫ್ರಿಕಾ ವಿರುದ್ಧದ ಕ್ರಿಕೆಟ್​ ಸರಣಿಯಾಗಿ ಸೆಪ್ಟೆಂಬರ್​​ 4ರಂದು ತಂಡ ಆಯ್ಕೆಗೊಳ್ಳಲಿದೆ. ಇಲ್ಲಿ ಧೋನಿ ಬದಲಿತೆ ಉದಯೋನ್ಮುಖ ವಿಕೆಟ್​ ಕೀಪರ್​ ಬ್ಯಾಟ್ಸಮನ್​ ರಿಷಭ್​ ಪಂತ್​ಗೆ ಆಯ್ಕೆ ಸಮಿತಿ ಚಾನ್ಸ್​ ನೀಡುವ ಸಾಧ್ಯತೆ ದಟ್ಟವಾಗಿದೆ ಎಂಬ ಮಾತು ಕೇಳಿ ಬರುತ್ತಿದೆ.

ಮೂರು ಟಿ-20 ಪಂದ್ಯಗಳ ವೇಳಾಪಟ್ಟಿ

  • ಮೊದಲ ಟಿ20: ಸೆಪ್ಟೆಂಬರ್ 15
  • ದ್ವಿತೀಯ ಟಿ20: ಸೆಪ್ಟೆಂಬರ್ 18
  • ತೃತೀಯ ಟಿ20: ಸೆಪ್ಟೆಂಬರ್ 22

ಮುಂಬರುವ 2020ರ ಟಿ-20 ವಿಶ್ವಕಪ್​ ಗಮನದಲ್ಲಿಟ್ಟುಕೊಂಡು ಆಯ್ಕೆ ಸಮಿತಿ ಈ ನಿರ್ಧಾರ ಕೈಗೊಳ್ಳುವ ಸಾಧ್ಯತೆ ದಟ್ಟವಾಗಿದೆ ಎಂದು ಹೇಳಲಾಗುತ್ತಿದ್ದು, ಈಗಾಗಲೇ ವೆಸ್ಟ್​ ಇಂಡೀಸ್​​ನಲ್ಲಿ ಟಿಇ20 ಸರಣಿಯಲ್ಲಿ ಕಣಕ್ಕಿಳಿದಿದ್ದ ತಂಡವನ್ನೇ ದಕ್ಷಿಣ ಆಫ್ರಿಕಾ ವಿರುದ್ಧ ಇಳಿಸಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿದು ಬಂದಿದೆ. ಇದರ ಜತೆಗೆ ವಿಕೆಟ್​ ಕೀಪಿಂಗ್​ಗಾಗಿ ಸಂಜು ಸ್ಯಾಮ್ಸನ್​ ಹಾಗೂ ಇಶಾನ್​ ಕಿಶನ್​ ಮೇಲೂ ಆಯ್ಕೆ ಸಮಿತಿ ಕಣ್ಣಿಟ್ಟಿದೆ ಎಂದು ತಿಳಿದು ಬಂದಿದೆ.

ABOUT THE AUTHOR

...view details