ಕರ್ನಾಟಕ

karnataka

ETV Bharat / sports

ಟೆಸ್ಟ್​​ ಕ್ರಿಕೆಟ್ ಹೇಗೆ​ ಜೀವಂತವಾಗಿರಿಸಿಕೊಳ್ಳಬೇಕು: ವಿರಾಟ್​ ಕೊಹ್ಲಿ ನೀಡಿದ್ರು ಈ ಎಲ್ಲ ಟಿಪ್ಸ್​​!

ಟೆಸ್ಟ್​ ಕ್ರಿಕೆಟ್​ ಮುಂದಿನ ಪೀಳಿಗೆಗಳಿಗೆ ಜೀವಂತವಾಗಿಡುವುದು ಹೇಗೆ ಎಂಬುದರ ಕುರಿತು ಟೀಂ ಇಂಡಿಯಾ ಕ್ಯಾಪ್ಟನ್​ ವಿರಾಟ್​ ಕೊಹ್ಲಿ ಮಾತನಾಡಿದ್ದಾರೆ.

ವಿರಾಟ್​​ ಕೊಹ್ಲಿ

By

Published : Oct 22, 2019, 4:00 PM IST

Updated : Oct 22, 2019, 8:12 PM IST

ರಾಂಚಿ:ದಕ್ಷಿಣ ಆಫ್ರಿಕಾ ವಿರುದ್ಧ ಮುಕ್ತಾಯಗೊಂಡ ಮೂರು ಟೆಸ್ಟ್​​ ಪಂದ್ಯಗಳ ಸರಣಿಯಲ್ಲಿ ಟೀಂ ಇಂಡಿಯಾ 3-0 ಅಂತರದಲ್ಲಿ ಗೆಲುವು ಸಾಧಿಸುವ ಮೂಲಕ ವೈಟ್​ವಾಶ್​ ಮಾಡಿದ್ದು, ನೂತನ ದಾಖಲೆ ನಿರ್ಮಾಣ ಮಾಡಿದೆ.

ಸರಣಿ ಗೆಲುವಿನ ಬಳಿಕ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿ ಮಾತನಾಡಿರುವ ಟೀಂ ಇಂಡಿಯಾ ಕ್ಯಾಪ್ಟನ್​ ವಿರಾಟ್​ ಕೊಹ್ಲಿ, ಟೆಸ್ಟ್​​ ಕ್ರಿಕೆಟ್​ಗಾಗಿ ಐದು ಬಲಿಷ್ಠ ಕೇಂದ್ರ ಹೊಂದಿರಬೇಕು. ಹೊರಗಡೆಯಿಂದ ಕ್ರಿಕೆಟ್​ ಆಡಲು ಬರುವ ತಂಡಗಳು ಆಯಾ ಮೈದಾನದ ಬಗ್ಗೆ ಸರಿಯಾಗಿ ತಿಳಿದುಕೊಳ್ಳಬೇಕು. ಹಾಗೂ ಅದೇ ಸ್ಥಳಗಳಲ್ಲಿ ಹೆಚ್ಚಿನ ಜನಸಂಖ್ಯೆ ಕ್ರಿಕೆಟ್​ ನೋಡುವಂತೆ ಬರುವ ಹಾಗೇ ಮಾಡಬೇಕು. ಇದರಿಂದ ಟೆಸ್ಟ್​​ನಲ್ಲೂ ಎರಡು ತಂಡಗಳ ನಡುವೆ ಜಿದ್ದಾಜಿದ್ದಿ ಸ್ಪರ್ಧೆ ಉಂಟಾಗಲು ಸಾಧ್ಯ ಎಂದು ತಿಳಿಸಿದ್ದಾರೆ.

ವಿರಾಟ್​ ಕೊಹ್ಲಿ

ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಮೂರು ಟೆಸ್ಟ್​ ಪಂದ್ಯಗಳ ಸ್ಥಳ ಹೊಸದು. ನಾವು ಉಹೆ ಮಾಡಿರುವಷ್ಟು ಕ್ರೀಡಾಭಿಮಾನಿಗಳು ಕ್ರಿಕೆಟ್​ ನೋಡಲು ಆಗಮಿಸಿರಲಿಲ್ಲ. ಆದರೆ, ಇಂಗ್ಲೆಂಡ್​,ಆಸ್ಟ್ರೇಲಿಯಾದಲ್ಲಿ ಈಗಲೂ ಹೆಚ್ಚಿನ ಪ್ರಮಾಣದಲ್ಲಿ ಟೆಸ್ಟ್​ ಕ್ರಿಕೆಟ್​ ಪಂದ್ಯ ನೋಡಲು ಮೈದಾನಕ್ಕಾಗಮಿಸುತ್ತಾರೆ, ನಮ್ಮಲ್ಲೂ ಅಂತಹ ಪರಿಸ್ಥಿತಿ ನಿರ್ಮಾಣಗೊಳ್ಳಬೇಕಾಗಿದೆ ಎಂದು ತಿಳಿಸಿದರು.

Last Updated : Oct 22, 2019, 8:12 PM IST

ABOUT THE AUTHOR

...view details