ಸಿಡ್ನಿ:ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಟೆಸ್ಟ್ನಲ್ಲಿ ಅಸೀಸ್ ಅಭಿಮಾನಿಗಳ ಕಿರಿಕ್ ತಣ್ಣಗಾದ ನಂತರ, ಇದೀಗ ಆಟಗಾರರು ಕಾಟ ಕೊಡಲು ಮುಂದಾಗಿದ್ದು, ಸ್ಟೀವ್ ಸ್ಮಿತ್ ಕೃತ್ಯಕ್ಕೆ ಅಭಿಮಾನಿಗಳು ಕಿಡಿ ಕಾರುತ್ತಿದ್ದಾರೆ.
ಸ್ಟಂಪ್ ಕ್ಯಾಮೆರದಲ್ಲಿ ಸೆರೆಯಾಯ್ತು ಆಸೀಸ್ ಕ್ರಿಕೆಟಿಗನ ವಿಕೃತಿ: ಸ್ಟೀವ್ ಸ್ಮಿತ್ ಕೃತ್ಯಕ್ಕೆ ಅಭಿಮಾನಿಗಳು ಕಿಡಿ! - ಸ್ಟೀವ್ ಸ್ಮಿತ್ ಲೇಟೆಸ್ಟ್ ನ್ಯೂಸ್
ಮೊದಲ ಸೆಷನ್ನ ಡ್ರಿಂಗ್ಸ್ ಬ್ರೇಕ್ನ ನಂತರ ಪಂದ್ಯ ಆರಂಭವಾಗುವುದಕ್ಕೂ ಮೊದಲು ಫೀಲ್ಡಿಂಗ್ ಮಾಡುತ್ತಿದ್ದ ಸ್ಟೀವ್ ಸ್ಮಿತ್ ಬ್ಯಾಟ್ಸ್ಮನ್ಗಳ ಗಾರ್ಡ್ (ಬ್ಯಾಟಿಂಗ್ ಮಾಡುವಾಗ ಗುರುತಿಗೆ ಹಾಕುವ ಗೆರೆ) ಅಳಿಸಿ ವಿಕೃತಿ ಮೆರೆದಿದ್ದಾರೆ.
ಸ್ಟೀವ್ ಸ್ಮಿತ್ ಕೃತ್ಯಕ್ಕೆ ಅಭಿಮಾನಿಗಳು ಕಿಡಿ
ಮೊದಲ ಸೆಷನ್ನ ಡ್ರಿಂಗ್ಸ್ ಬ್ರೇಕ್ನ ನಂತರ ಪಂದ್ಯ ಆರಂಭವಾಗುವುದಕ್ಕೂ ಮೊದಲು ಫೀಲ್ಡಿಂಗ್ ಮಾಡುತ್ತಿದ್ದ ಸ್ಟೀವ್ ಸ್ಮಿತ್ ಬ್ಯಾಟ್ಸ್ಮನ್ಗಳ ಗಾರ್ಡ್ (ಬ್ಯಾಟಿಂಗ್ ಮಾಡುವಾಗ ಗುರುತಿಗೆ ಹಾಕುವ ಗೆರೆ) ಅಳಿಸಿ ವಿಕೃತಿ ಮೆರೆದಿದ್ದಾರೆ.
ಮತ್ತೆ ಕ್ರೀಸ್ಗೆ ಬಂದ ರಿಷಭ್ ಪಂತ್ ಬ್ಯಾಟಿಂಗ್ ಗಾರ್ಡ್ಗಾಗಿ ಅಂಪೈರ್ ಅವರನ್ನು ಕೇಳುತ್ತಿರುವುದನ್ನು ಕಾಣಬಹುದಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸ್ಟೀವ್ ಸ್ಮಿತ್ ವಿರುದ್ಧ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.