ಕರ್ನಾಟಕ

karnataka

By

Published : Nov 21, 2019, 8:30 PM IST

Updated : Nov 21, 2019, 8:38 PM IST

ETV Bharat / sports

ವಿಂಡೀಸ್ ಸರಣಿಗೆ ಇಬ್ಬರು ಕನ್ನಡಿಗರಿಗೆ ಮಣೆ... ಸ್ಯಾಮ್ಸನ್​ ಕೈಬಿಟ್ಟು, ಕೇದಾರ್ ಬಿಗಿದಪ್ಪಿದ ಆಯ್ಕೆ ಸಮಿತಿ

ಆಯ್ಕೆ ಸಮಿತಿ ಮುಖ್ಯಸ್ಥ ಎಂ.ಎಸ್​.ಕೆ ಪ್ರಸಾದ್ ನೇತೃತ್ವದಲ್ಲಿ ನಡೆದ ತಂಡದ ಆಯ್ಕೆ ಸಭೆಯಲ್ಲಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಕಾರ್ಯದರ್ಶಿ ಜಯ್ ಶಾ, ಟೀಂ ಇಂಡಿಯಾ ಕಪ್ತಾನ ವಿರಾಟ್ ಕೊಹ್ಲಿ ಭಾಗಿಯಾಗಿದ್ದರು.

ವಿಂಡೀಸ್ ಸರಣಿ

ಮುಂಬೈ: ಮುಂದಿನ ತಿಂಗಳ ಮೊದಲ ವಾರದಲ್ಲಿ ವಿಂಡೀಸ್ ವಿರುದ್ಧ ತವರಿನಲ್ಲಿ ನಡೆಯಲಿರುವ ನಿಗದಿತ ಓವರ್​ಗಳ ಟೂರ್ನಿಗೆ ಟೀಂ ಇಂಡಿಯಾ ಪ್ರಕಟವಾಗಿದೆ.

ಆಯ್ಕೆ ಸಮಿತಿ ಮುಖ್ಯಸ್ಥ ಎಂ.ಎಸ್​.ಕೆ ಪ್ರಸಾದ್ ನೇತೃತ್ವದಲ್ಲಿ ನಡೆದ ತಂಡದ ಆಯ್ಕೆ ಸಭೆಯಲ್ಲಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಕಾರ್ಯದರ್ಶಿ ಜಯ್ ಶಾ, ಟೀಂ ಇಂಡಿಯಾ ಕಪ್ತಾನ ವಿರಾಟ್ ಕೊಹ್ಲಿ ಭಾಗಿಯಾಗಿದ್ದರು.

ಸರಣಿಯಲ್ಲಿ ಸತತವಾಗಿ ಪಾಲ್ಗೊಂಡ ಕಾರಣದಿಂದ ಹಿಟ್​ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾರಿಗೆ ಕೆರಬಿಯನ್ನರ ಸರಣಿಯಿಂದ ವಿಶ್ರಾಂತಿ ನೀಡಲಿದ್ದಾರೆ ಎನ್ನುವ ಸುದ್ದಿ ಹರಿದಾಡಿತ್ತು. ಇನ್ನೋರ್ವ ಆರಂಭಿಕ ಆಟಗಾರ ಶಿಖರ್ ಧವನ್​ ಕಳಪೆ ಫಾರ್ಮ್ ಕಾರಣ ಕೊಕ್ ನೀಡುತ್ತಾರೆ ಎನ್ನುವ ಲೆಕ್ಕಾಚಾರಗಳಿದ್ದವು. ಆದರೆ, ಇವೆಲ್ಲವೂ ತಲೆಕೆಳಗಾಗಿದ್ದು, ಈ ಇಬ್ಬರೂ ಆಟಗಾರರು ವಿಂಡೀಸ್ ಸರಣಿಗೆ ಪ್ರಕಟವಾದ ತಂಡದಲ್ಲಿದ್ದಾರೆ.

ಎರಡೂ ಮಾದರಿಗೂ ವಿರಾಟ್ ಕೊಹ್ಲಿಯೇ ನಾಯಕರಾಗಿದ್ದಾರೆ. ನಿಗದಿತ ಓವರ್​ಗಳ ತಂಡಕ್ಕೆ ವೇಗಿ ಭುವನೇಶ್ವರ್ ಕುಮಾರ್ ಮರಳಿದ್ದಾರೆ. 2017ರ ಬಳಿಕ ಸದ್ಯದ ಸೆನ್ಸೇಷನಲ್ ಸೀಮರ್​​ ಮೊಹಮ್ಮದ್ ಶಮಿ ಟಿ-20 ತಂಡಕ್ಕೆ ಕಂಬ್ಯಾಕ್ ಮಾಡಿದ್ದಾರೆ. ಕೇದಾರ್ ಜಾಧವ್​ ಅಚ್ಚರಿಯ ಆಯ್ಕೆಯಾಗಿದ್ದು, ಸಂಜು ಸ್ಯಾಮ್ಸನ್​ರನ್ನು ಕೈಬಿಡಲಾಗಿದೆ.

ಏಕದಿನ ಹಾಗೂ ಟಿ-20 ಎರಡೂ ತಂಡದಲ್ಲೂ ಇಬ್ಬರು ಕನ್ನಡಿಗರು ಸ್ಥಾನ ಪಡೆದಿದ್ದಾರೆ. ದೇಶೀಯ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಕರ್ನಾಟಕ ಆಟಗಾರರಾದ ಕೆ.ಎಲ್​ ರಾಹುಲ್ ಹಾಗೂ ಮನೀಷ್ ಪಾಂಡೆ ರಾಷ್ಟ್ರೀಯ ತಂಡಕ್ಕೆ ಮರಳಿದ್ದಾರೆ. ಹ್ಯಾಟಿಕ್ ಹೀರೋ ದೀಪಕ್ ಚಹರ್ ಹಾಗೂ ಶಿವಂ ದುಬೆ ಹಾಗೂ ಶ್ರೇಯಸ್ ಅಯ್ಯರ್ ಎರಡೂ ತಂಡದಲ್ಲಿ ಸ್ಥಾನ ಉಳಿಸಿಕೊಂಡಿದ್ದಾರೆ.

ಏಕದಿನ ತಂಡ:

ವಿರಾಟ್ ಕೊಹ್ಲಿ(ನಾಯಕ), ರೋಹಿತ್ ಶರ್ಮಾ, ಶಿಖರ್ ಧವನ್, ಕೆ.ಎಲ್​.ರಾಹುಲ್.ಶ್ರೇಯಸ್ ಅಯ್ಯರ್, ಮನೀಷ್ ಪಾಂಡೆ, ರಿಷಭ್ ಪಂತ್, ಶಿವಂ ದುಬೆ, ಕೇದಾರ್ ಜಾಧವ್, ರವೀಂದ್ರ ಜಡೇಜಾ, ಯುಜ್ವೇಂದ್ರ ಚಹಲ್, ಕಲ್ದೀಪ್ ಯಾದವ್, ದೀಪಕ್ ಚಹರ್​​, ಮೊಹಮ್ಮದ್ ಶಮಿ, ಭುವನೇಶ್ವರ್ ಕುಮಾರ್

ಟಿ-20 ತಂಡ:

ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ, ಶಿಖರ್ ಧವನ್, ಕೆ.ಎಲ್​.ರಾಹುಲ್, ಶ್ರೇಯಸ್ ಅಯ್ಯರ್, ಮನೀಷ್ ಪಾಂಡೆ, ರಿಷಭ್ ಪಂತ್, ಶಿವಂ ದುಬೆ, ವಾಷಿಂಗ್ಟನ್ ಸುಂದರ್, ರವೀಂದ್ರ ಜಡೇಜಾ, ಯುಜ್ವೇಂದ್ರ ಚಹಲ್, ಕುಲ್ದೀಪ್ ಯಾದವ್, ದೀಪಕ್ ಚಹರ್​​, ಮೊಹಮ್ಮದ್ ಶಮಿ, ಭುವನೇಶ್ವರ್ ಕುಮಾರ್

Last Updated : Nov 21, 2019, 8:38 PM IST

ABOUT THE AUTHOR

...view details