ಕರ್ನಾಟಕ

karnataka

ETV Bharat / sports

ಭಾರತ-ದಕ್ಷಿಣ ಆಫ್ರಿಕಾ ಹಣಾಹಣಿ: ಏಕದಿನ ಕ್ರಿಕೆಟ್​ಗೆ ಪದಾರ್ಪಣ ಮಾಡಿದ್ದ ಮೈದಾನದಲ್ಲೇ ಪಾಂಡ್ಯ 'ಕಮ್​ಬ್ಯಾಕ್​'!

ಪ್ರವಾಸಿ ದಕ್ಷಿಣ ಆಫ್ರಿಕಾ ಹಾಗೂ ಟೀಂ ಇಂಡಿಯಾ ನಡುವೆ ಇಂದಿನಿಂದ ಮೂರು ಏಕದಿನ ಪಂದ್ಯಗಳ ಕ್ರಿಕೆಟ್​ ಸರಣಿ ಆರಂಭಗೊಳ್ಳಲಿದ್ದು, ವಿರಾಟ್​​ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಹರಿಣಗಳ ಸವಾಲು ಎದುರಿಸಲಿದೆ.

IND vs SA, 1st ODI
IND vs SA, 1st ODI

By

Published : Mar 12, 2020, 9:23 AM IST

Updated : Mar 12, 2020, 10:01 AM IST

ಧರ್ಮಶಾಲಾ:ಹಿಮಾಚಲ ಪ್ರದೇಶ ಕ್ರಿಕೆಟ್​ ಸಂಸ್ಥೆ ಕ್ರೀಡಾಂಗಣದಲ್ಲಿ ಇಂದು ದಕ್ಷಿಣ ಆಫ್ರಿಕಾ-ಭಾರತದ ನಡುವೆ ಮೊದಲ ಏಕದಿನ ಪಂದ್ಯ ನಡೆಯಲಿದ್ದು, ನಾಲ್ಕು ವರ್ಷಗಳ ಹಿಂದೆ ಟೀಂ ಇಂಡಿಯಾ ತಂಡಕ್ಕೆ ಪದಾರ್ಪಣೆ ಮಾಡಿದ್ದ ಮೈದಾನದಲ್ಲೇ ಇದೀಗ ಹಾರ್ದಿಕ್​ ಪಾಂಡ್ಯ ಕಮ್​ಬ್ಯಾಕ್​ ಮಾಡುತ್ತಿದ್ದಾರೆ.

ನ್ಯೂಜಿಲ್ಯಾಂಡ್​ ವಿರುದ್ಧದ ಏಕದಿನ ಸರಣಿ ಹಾಗೂ ಟೆಸ್ಟ್​ ಕ್ರಿಕೆಟ್​ನಲ್ಲಿ ಹೀನಾಯ ಸೋಲು ಕಂಡು ಮುಖಭಂಗ ಅನುಭವಿಸಿರುವ ಟೀಂ ಇಂಡಿಯಾ ಇದೀಗ ತವರಿನಲ್ಲಿ ಹರಿಣಗಳ ಸವಾಲು ಎದುರಿಸಲಿದೆ. ಗಾಯದಿಂದ ಚೇತರಿಸಿಕೊಂಡಿರುವ ಶಿಖರ್​ ಧವನ್​, ಮಧ್ಯಮವೇಗಿ ಭುವನೇಶ್ವರ್​ ಕುಮಾರ್​ ತಂಡಕ್ಕೆ ಮರಳಿದ್ದು, ರೋಹಿತ್​ ಶರ್ಮಾ ವಿಶ್ರಾಂತಿ ಪಡೆದುಕೊಂಡಿರುವ ಕಾರಣ ಪೃಥ್ವಿ ಶಾ ಹಾಗೂ ಶಿಖರ್​ ಧವನ್​ ಇನ್ನಿಂಗ್ಸ್​ ಆರಂಭಿಸುವುದು ಬಹುತೇಕ ಖಚಿತವಾಗಿದೆ.

ಕೆ.ಎಲ್.ರಾಹುಲ್​

ಈ ಹಿಂದಿನ ಪಂದ್ಯಗಳಲ್ಲಿ ವಿಕೆಟ್​ ಕೀಪರ್​ ಆಗಿ ಅದ್ಭುತ ಪ್ರದರ್ಶನ ನೀಡಿರುವ ಕೆ.ಎಲ್.ರಾಹುಲ್​ಗೆ ಮತ್ತೊಮ್ಮೆ ಅದೇ ಜವಾಬ್ದಾರಿ ನೀಡುವ ಸಾಧ್ಯತೆ ದಟ್ಟವಾಗಿರುವ ಕಾರಣ ರಿಷಭ್​ ಪಂತ್​ ಬೆಂಚ್​ ಕಾಯುವುದು ಪಕ್ಕಾ ಎನ್ನಲಾಗಿದೆ. ಉಳಿದಂತೆ ಮನೀಷ್ ಪಾಂಡೆ ಮಧ್ಯಮ ಕ್ರಮಾಂಕದಲ್ಲಿ ಚಾನ್ಸ್​ ಪಡೆದುಕೊಳ್ಳುವ ಸಾಧ್ಯತೆ ಇದೆ.

ದಕ್ಷಿಣ ಆಫ್ರಿಕಾ ಬ್ಯಾಟ್ಸಮನ್​

ಉಳಿದಂತೆ ಜಸ್​ಪ್ರೀತ್​ ಬುಮ್ರಾ, ಭುವನೇಶ್ವರ್​ ಕುಮಾರ್​ ಜತೆ ನವದೀಪ್​ ಸೈನಿ ಬೌಲಿಂಗ್​ ವಿಭಾಗದ ಶಕ್ತಿಯಾಗಲಿದ್ದು, ಆಲ್​ರೌಂಡರ್​ ರವೀಂದ್ರ ಜಡೇಜಾ ಸ್ಪಿನ್ ವಿಭಾಗದ ಜವಾಬ್ದಾರಿ ಹೊತ್ತುಕೊಳ್ಳಲಿದ್ದಾರೆ. ಇನ್ನು ಆಸ್ಟ್ರೇಲಿಯಾ ವಿರುದ್ಧ ಅದ್ಭುತ ಪ್ರದರ್ಶನ ನೀಡಿರುವ ದಕ್ಷಿಣ ಆಫ್ರಿಕಾ ತಂಡ ಕೂಡ ಧರ್ಮಶಾಲಾದಲ್ಲಿ ಮೊದಲ ಸಲ ಕ್ರಿಕೆಟ್​​ ಪಂದ್ಯ ಆಡುತ್ತಿದ್ದು, ಕೊಹ್ಲಿ ಪಡೆಗೆ ಪೆಟ್ಟು ನೀಡುವ ವಿಶ್ವಾಸದಲ್ಲಿದೆ.

ತಂಡ ಇಂತಿದೆ:ವಿರಾಟ್​ ಕೊಹ್ಲಿ(ಕ್ಯಾಪ್ಟನ್​), ಶಿಖರ್​ ಧವನ್​, ಪೃಥ್ವಿ ಶಾ, ಕೆ.ಎಲ್.ರಾಹುಲ್​, ಮನೀಷ್​ ಪಾಂಡೆ, ಶ್ರೇಯಸ್​ ಅಯ್ಯರ್, ರಿಷಭ್​ ಪಂತ್, ಹಾರ್ದಿಕ್​ ಪಾಂಡ್ಯ, ರವೀಂದ್ರ ಜಡೇಜಾ, ಭುವನೇಶ್ವರ್​ ಕುಮಾರ್​, ಯಜುವೇಂದ್ರ ಚಹಾಲ್​, ಜಸ್​ಪ್ರೀತ್​ ಬುಮ್ರಾ, ನವದೀಪ್​ ಸೈನಿ, ಕುಲ್​ದೀಪ್​ ಯಾದವ್​, ಶುಭಮನ್​ ಗಿಲ್.​

ದಕ್ಷಿಣ ಆಫ್ರಿಕಾ:ಕ್ವಿಂಟನ್​ ಡಿ ಕಾಕ್​(ಕ್ಯಾಪ್ಟನ್​), ತೆಂಬಾ ಬವುಮಾ, ರಾಸಿ ವ್ಯಾನ್​ ಡರ್​ ಡಸ್ಸೆ, ಫಾಫ್​ ಡು ಪ್ಲೆಸಿಸ್​, ಕೈಲ್​ ವೆರ್ರೇನ್​, ಹೆನ್ರಿಚ್​ ಕ್ಲಾಸೆನ್​, ಜೇನ್ಮನ್​ ಮಲಾನ್​, ಡೇವಿಡ್​ ಮಿಲ್ಲರ್, ಜಾನ್​ ಜಾನ್​ ಸ್ಮಟ್ಸ್​, ಆ್ಯಂಡಿಲ್​ ಫಿಶುವಾಯೋ, ಲುಂಗಿ ಎನ್ಗಿಡಿ, ಲುಥೋ ಸಿಪಾಮ್ಲಾ, ಬೇರನ್​ ಹೆನ್ರಿಕ್ಸ್​, ಎನ್ರಿಚ್​ ನೊರ್ಟೆ, ಜಾರ್ಜ್ ಲಿಂಡ್, ಕೇಶವ್ ಮಹಾರಾಜ್.​​

ಪಂದ್ಯ ಮಧ್ಯಾಹ್ನ 1:30ಕ್ಕೆ ಆರಂಭಗೊಳ್ಳಲಿದ್ದು, ಹಿಮಾಚಲ ಪ್ರದೇಶದ ಧರ್ಮಶಾಲಾ ಮೈದಾನದಲ್ಲಿ ನಡೆಯಲಿದೆ.

Last Updated : Mar 12, 2020, 10:01 AM IST

ABOUT THE AUTHOR

...view details