ಕರ್ನಾಟಕ

karnataka

ETV Bharat / sports

ಭಾರತ - ಇಂಗ್ಲೆಂಡ್​ ಟೆಸ್ಟ್​ ಸರಣಿ: ಮೊದಲೆರಡು ಪಂದ್ಯಗಳಿಗೆ ಪ್ರೇಕ್ಷಕರಿಗಿಲ್ಲ ಅವಕಾಶ

ಕ್ರಿಕೆಟಿಗರ ಸುರಕ್ಷತೆಯು ಈ ಸಮಯದಲ್ಲಿ ಆದ್ಯತೆಯಾಗಿರುವುದರಿಂದ ಇಂಗ್ಲೆಂಡ್ ವಿರುದ್ಧದ ಮೊದಲ ಎರಡು ಟೆಸ್ಟ್ ಪಂದ್ಯಗಳಿಗೆ ಪ್ರೇಕ್ಷಕರಿಗೆ ಅವಕಾಶ ನೀಡುವುದಿಲ್ಲ ಎಂದು ಟಿಎನ್‌ಸಿಎ ಅಧಿಕಾರಿಯೊಬ್ಬರು ಹೇಳಿದ್ದಾರೆ.

India vs England test
ಭಾರತ-ಇಂಗ್ಲೆಂಡ್​ ಟೆಸ್ಟ್​ ಸರಣಿ

By

Published : Jan 21, 2021, 7:54 AM IST

ಹೈದರಾಬಾದ್:ಚೆನ್ನೈನ ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯಲಿರುವ ಭಾರತ - ಇಂಗ್ಲೆಂಡ್ ಸರಣಿಯ ಮೊದಲ ಎರಡು ಟೆಸ್ಟ್ ಪಂದ್ಯಗಳಿಗೆ ಪ್ರೇಕ್ಷಕರ ಹಾಜರಾತಿಗೆ ಅವಕಾಶವಿಲ್ಲ. ಕೊರೊನಾ ವೈರಸ್ ಸಾಂಕ್ರಾಮಿಕದಿಂದ ಜಗತ್ತು ಚೇತರಿಸಿಕೊಳ್ಳುತ್ತಿದ್ದಂತೆ ಅಭಿಮಾನಿಗಳು ದೂರದರ್ಶನದಲ್ಲಿ ಆಟಗಳನ್ನು ಆನಂದಿಸಬೇಕಾಗುತ್ತದೆ ಎಂದು ತಮಿಳುನಾಡು ಕ್ರಿಕೆಟ್ ಅಸೋಸಿಯೇಷನ್ ಸ್ಪಷ್ಟಪಡಿಸಿದೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಟಿಎನ್‌ಸಿಎ ಅಧಿಕಾರಿಯೊಬ್ಬರು, ಕ್ರಿಕೆಟಿಗರ ಸುರಕ್ಷತೆಯು ಈ ಸಮಯದಲ್ಲಿ ಆದ್ಯತೆಯಾಗಿರುವುದರಿಂದ ಮೊದಲ ಎರಡು ಪಂದ್ಯಗಳಿಗೆ ಪ್ರೇಕ್ಷಕರಿಗೆ ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದಾರೆ. ಮೊದಲ ಎರಡು ಪಂದ್ಯಗಳಲ್ಲಿ ಅಭಿಮಾನಿಗಳು ಇರುವುದಿಲ್ಲ. ಕ್ರಿಕೆಟ್ ಪ್ರಿಯರು ತಮ್ಮ ನೆಚ್ಚಿನ ತಾರೆಗಳನ್ನು ಟೆಲಿವಿಷನ್ ಮೂಲಕ ನೋಡಬೇಕಾಗಿದೆ ಎಂದಿದ್ದಾರೆ.

ಮೊದಲ ಟೆಸ್ಟ್ ಫೆಬ್ರವರಿ 5 ರಿಂದ 9 ರವರೆಗೆ ಮತ್ತು ಎರಡನೇ ಟೆಸ್ಟ್ ಫೆಬ್ರವರಿ 13 ರಿಂದ 17 ರವರೆಗೆ ನಡೆಯಲಿದೆ. ಸರಣಿಯ ದ್ವಿತೀಯಾರ್ಧದಲ್ಲಿ ಅಭಿಮಾನಿಗಳು ಬರುವ ಸಾಧ್ಯತೆ ಇದೆ ಎನ್ನಲಾಗಿದೆ.

ತವರಿನಲ್ಲಿ ನಡೆಯಲಿರುವ ಇಂಗ್ಲೆಂಡ್​ ವಿರುದ್ಧದ ಮೊದಲೆರಡು ಟೆಸ್ಟ್​ ಸರಣಿಗೆ 18 ಸದಸ್ಯರ ತಂಡವನ್ನು ಬಿಸಿಸಿಐ ಆಯ್ಕೆ ಮಾಡಿದೆ.

18 ಸದಸ್ಯರ ಭಾರತ ತಂಡ

ಆರಂಭಿಕರು :ರೋಹಿತ್ ಶರ್ಮಾ, ಶುಭಮನ್ ಗಿಲ್​, ಮಯಾಂಕ್ ಅಗರ್​ವಾಲ್​

ಮಧ್ಯಮ ಕ್ರಮಾಂಕ :ಚೇತೇಶ್ವರ್​ ಪೂಜಾರ, ವಿರಾಟ್ ಕೊಹ್ಲಿ(ನಾಯಕ), ಅಜಿಂಕ್ಯ ರಹಾನೆ, ರಿಷಭ್ ಪಂತ್, ವೃದ್ಧಿಮಾನ್ ಸಹಾ, ಹಾರ್ದಿಕ್ ಪಾಂಡ್ಯ, ಕೆ ಎಲ್ ರಾಹುಲ್​(ಫಿಟ್​ ಆದ್ರೆ ಮಾತ್ರ)

ಫಾಸ್ಟ್​ ಬೌಲರ್ಸ್​ :ಜಸ್ಪ್ರೀತ್ ಬುಮ್ರಾ, ಇಶಾಂತ್​ ಶರ್ಮಾ, ಮೊಹಮ್ಮದ್ ಸಿರಾಜ್, ಶಾರ್ದುಲ್ ಠಾಕೂರ್​

ಸ್ಪಿನ್​ ಬೌಲರ್ :ಆರ್​.ಅಶ್ವಿನ್, ಕುಲ್ದೀಪ್ ಯಾದವ್​, ವಾಷಿಂಗ್ಟನ್ ಸುಂದರ್​, ಅಕ್ಸರ್ ಪಟೇಲ್​

ಸ್ಟ್ಯಾಂಡ್​ ಬೈ ಆಟಗಾರರು :ಕೆ ಎಸ್ ಭರತ್​(ವಿ.ಕೀ), ಅಭಿಮನ್ಯು ಈಶ್ವರನ್​, ಶಹ್ಬಾಜ್ ನದೀಮ್​, ರಾಹುಲ್​ ಚಹಾರ್​

ನೆಟ್​ ಬೌಲರ್ಸ್​ : ಅಂಕಿತ್ ರಜಪೂತ್​, ಅವೇಶ್​ ಖಾನ್​, ಸಂದೀಪ್ ವಾರಿಯರ್, ಕೆ. ಗೌತಮ್​, ಸೌರಭ್ ಕುಮಾರ್​

ABOUT THE AUTHOR

...view details