ಕರ್ನಾಟಕ

karnataka

ETV Bharat / sports

ಸಿಬ್ಲಿ - ರೂಟ್​ ಬೊಂಬಾಟ್​ ಆಟಕ್ಕೆ ಭಾರತ ಸುಸ್ತು.. ಮೊದಲ ದಿನದಾಂತ್ಯಕ್ಕೆ ಇಂಗ್ಲೆಂಡ್​ 263ರನ್​ - ರೂಟ್ ಶತಕ ಸಾಧನೆ

ಭಾರತ - ಇಂಗ್ಲೆಂಡ್ ನಡುವೆ ಆರಂಭಗೊಂಡಿರುವ ಮೊದಲ ಟೆಸ್ಟ್​ ಪಂದ್ಯದಲ್ಲಿ ಇಂಗ್ಲೆಂಡ್ ಮೊದಲ ದಿನದಾಂತ್ಯಕ್ಕೆ 3ವಿಕೆಟ್​​ನಷ್ಟಕ್ಕೆ 263ರನ್​ಗಳಿಕೆ ಮಾಡಿದೆ.

Ind vs Eng 1st test
Ind vs Eng 1st test

By

Published : Feb 5, 2021, 5:29 PM IST

ಚೆನ್ನೈ:ಇಲ್ಲಿನ ಎಂ. ಚಿದಂಬರಂ ಮೈದಾನದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್​ ಪಂದ್ಯದ ಮೊದಲ ದಿನದ ಅಂತ್ಯಕ್ಕೆ ಇಂಗ್ಲೆಂಡ್ ತಂಡ ಸುಭದ್ರ ಸ್ಥಿತಿಯಲ್ಲಿದ್ದು, ಮೂರು ವಿಕೆಟ್​ ಕಳೆದುಕೊಂಡು 263ರನ್​ಗಳಿಕೆ ಮಾಡಿದೆ. ಅಜೇಯ 128ರನ್​ಗಳಿಕೆ ಮಾಡಿರುವ ಇಂಗ್ಲೆಂಡ್ ಕ್ಯಾಪ್ಟನ್​ ರೂಟ್ ನಾಳೆಗೆ ಬ್ಯಾಟಿಂಗ್ ಕಾಯ್ದಿರಿಸಿಕೊಂಡಿದ್ದಾರೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ಮುಂದಾದ ಇಂಗ್ಲೆಂಡ್ ಮೊದಲ ವಿಕೆಟ್​ನಷ್ಟಕ್ಕೆ 63ರನ್​ಗಳ ಜೊತೆಯಾಟ ಪಡೆದುಕೊಂಡಿತು. ಈ ವೇಳೆ ರೊರಿ ಬುರ್ನ್​​(33) ಅಶ್ವಿನ್​ ಓವರ್​ನಲ್ಲಿ ವಿಕೆಟ್​ ಒಪ್ಪಿಸಿದರು. ಇದರ ಬೆನ್ನಲ್ಲೇ ಡಾನೀಲ್ (0) ಬುಮ್ರಾ ಬಲೆಗೆ ಬಿದ್ದರು.

ಓದಿ: 100ನೇ ಟೆಸ್ಟ್​​ ಪಂದ್ಯದಲ್ಲಿ ಆಕರ್ಷಕ ಶತಕ​ ಸಿಡಿಸಿ ದಾಖಲೆ ಬರೆದ ರೂಟ್​!

ತಂಡದ ಸ್ಕೋರ್​ 63 ಆಗಿದ್ದ ವೇಳೆ ಡಾಮಿನಿಕ್​​ ಸಿಬ್ಲಿ ಸೇರಿಕೊಂಡ ನಾಯಕ ರೂಟ್​ ಇಂಗ್ಲೆಂಡ್ ತಂಡಕ್ಕೆ ಭದ್ರ ಬುನಾದಿ ಹಾಕಿದರು. ಇಬ್ಬರು ಪ್ಲೇಯರ್ಸ್ ಜವಾಬ್ದಾರಿಯುತ ಬ್ಯಾಟಿಂಗ್​ ಪ್ರದರ್ಶನ ನೀಡಿ, ಟೀಂ ಇಂಡಿಯಾ ವೇಗಿಗಳು ಹಾಗೂ ಸ್ಪಿನ್ನರ್​ಗಳನ್ನ ಸುಲಭವಾಗಿ ಎದುರಿಸಿದರು.

ಆಕರ್ಷಕ ಆಟವಾಡಿದ ಸಿಬ್ಲಿ - ರೂಟ್ ಜೋಡಿ ತಂಡವನ್ನ ಉತ್ತಮ ಸ್ಥಿತಿಗೆ ತೆಗೆದುಕೊಂಡು ಹೋಯಿತು. ದಿನದ ಕೊನೆಯವರೆಗೆ ಬ್ಯಾಟ್​ ಬೀಸಿದ ರೂಟ್​ ಅಜೇಯ 128ರನ್​ಗಳಿಕೆ ಮಾಡಿದ್ರೆ, 87ರನ್​​ಗಳಿಕೆ ಮಾಡಿದ್ದ ಸಿಬ್ಲಿ ಬುಮ್ರಾ ಮಾಡಿದ ಕೊನೆ ಓವರ್​ನಲ್ಲಿ ಎಲ್​ಬಿ ಬಲೆಗೆ ಬಿದ್ದರು. ಇಂಗ್ಲೆಂಡ್​ ಮೊದಲ ದಿನ ಒಟ್ಟು 89.3 ಓವರ್​ ಎದುರಿಸಿದ್ದು, ಮೂರು ವಿಕೆಟ್ ಕಳೆದುಕೊಂಡು 263ರನ್​ಗಳಿಕೆ ಮಾಡಿದೆ.

ಟೀಂ ಇಂಡಿಯಾ ಪರ ಬುಮ್ರಾ 2ವಿಕೆಟ್​ ಹಾಗೂ ಅಶ್ವಿನ್ 1 ವಿಕೆಟ್​ ಪಡೆದುಕೊಂಡಿದ್ದಾರೆ. ಉಳಿದಂತೆ ಯಾವೊಬ್ಬ ಬೌಲರ್ ಮಾರಕವಾಗಿ ಪರಿಣಮಿಸಲಿಲ್ಲ.

ABOUT THE AUTHOR

...view details