ಕರ್ನಾಟಕ

karnataka

ETV Bharat / sports

'ಹೊಸ ವರ್ಷ, ಹೊಸ ಶಕ್ತಿ'.. 3ನೇ ಟೆಸ್ಟ್ ಪಂದ್ಯಕ್ಕಾಗಿ ಟೀಂ ಇಂಡಿಯಾ ಕಠಿಣ ಅಭ್ಯಾಸ - ಭಾರತ vs ಆಸ್ಟ್ರೇಲಿಯಾ 3ನೇ ಟೆಸ್ಟ್

ಮೂರನೇ ಟೆಸ್ಟ್ ಪಂದ್ಯಕ್ಕಾಗಿ ಟೀಂ ಇಂಡಿಯಾ ಆಟಗಾರರು ಅಭ್ಯಾಸ ನಡೆಸುತ್ತಿರುವ ವಿಡಿಯೋವನ್ನು ಬಿಸಿಸಿಐ ಹಂಚಿಕೊಂಡಿದೆ.

Rahane-led squad sweat it out to prepare for 3rd Test
ಮೂರನೇ ಟೆಸ್ಟ್ ಪಂದ್ಯಕ್ಕಾಗಿ ಟೀಂ ಇಂಡೀಯಾ ಕಠಿಣ ಅಭ್ಯಾಸ

By

Published : Jan 2, 2021, 11:29 AM IST

Updated : Jan 2, 2021, 11:36 AM IST

ಮೆಲ್ಬೋರ್ನ್ (ಆಸ್ಟ್ರೇಲಿಯಾ): ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ಮೇಲೆ ಕಣ್ಣಿಟ್ಟಿರುವ ರಹಾನೆ ನಾಯಕತ್ವದ ಟೀಂ ಇಂಡಿಯಾ, ಮೆಲ್ಬೋರ್ನ್​ನಲ್ಲಿ ಭರ್ಜರಿ ತಾಲೀಮು ನಡೆಸುತ್ತಿದೆ.

ಬಾಕ್ಸಿಂಗ್ ಡೇ ಟೆಸ್ಟ್​​ನ ಜಯದ ನಂತರ ಟೀಂ ಇಂಡಿಯಾ ಆಟಗಾರರ ಆತ್ಮವಿಶ್ವಾಸ ಹೆಚ್ಚಾಗಿದೆ. ಈ ಮಧ್ಯೆ ಹಿಟ್​ಮ್ಯಾನ್ ರೋಹಿತ್ ಶರ್ಮಾ ಆಗಮಿಸಿರುವುದು ತಂಡದ ಶಕ್ತಿಯನ್ನು ಹೆಚ್ಚಿಸಿದೆ.

ಸಿಡ್ನಿ ಟೆಸ್ಟ್ ಪಂದ್ಯಕ್ಕೆ ಈಗಾಗಲೇ ತಾಲೀಮು ಆರಂಭಿಸಿರುವ ರಹಾನೆ ನೇತೃತ್ವದ ತಂಡವು ಶನಿವಾರ ಮೈದಾನಕ್ಕಿಳಿದಿದ್ದು, ಪೀಲ್ಡಿಂಗ್ ಮತ್ತು ಥ್ರೋ ಎಸೆಯುವ ತಾಲೀಮು ನಡೆಸುತ್ತಿದೆ. ಆಸ್ಟ್ರೇಲಿಯಾದ ದೊಡ್ಡ ಮೈದಾನಗಳಲ್ಲಿ ಉತ್ತಮ ಕ್ಷೇತ್ರ ರಕ್ಷಣೆ ಮತ್ತು ನಿಖರವಾಗಿ ಥ್ರೋ ಎಸೆಯುವ ಅವಶ್ಯಕತೆಯಿದೆ.

ಆಟಗಾರರು ಅಭ್ಯಾಸ ನಡೆಸುತ್ತಿರುವ ವಿಡಿಯೋವನ್ನು ಟ್ವಿಟರ್​ನಲ್ಲಿ ಹಂಚಿಕೊಂಡಿರುವ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ "ಹೊಸ ವರ್ಷ, ಹೊಸ ಶಕ್ತಿ. ಆ ಜೋಶ್ ಹೇಗಿದೆ?" ಎಂದು ಪ್ರಶ್ನಿಸಿದೆ.

ಓದಿಸಿಡ್ನಿಯಲ್ಲಿ ಹೆಚ್ಚುತ್ತಿರುವ ಕೊರೊನಾ: ಮೂರನೇ ಟೆಸ್ಟ್ ಪಂದ್ಯಕ್ಕೆ ಎದುರಾದ ಆತಂಕ

4 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಲಾ ಒಂದೊಂದು ಪಂದ್ಯ ಗೆದ್ದಿದ್ದು, ಜ.7ರಿಂದ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಮೂರನೇ ಪಂದ್ಯ ಆರಂಭವಾಗಲಿದೆ.

Last Updated : Jan 2, 2021, 11:36 AM IST

ABOUT THE AUTHOR

...view details