ಕರ್ನಾಟಕ

karnataka

ETV Bharat / sports

'ನಮ್ಮ ನಡುವಿನ ಸಂಭಾಷಣೆ ಏನಿರಬಹುದು ಊಹಿಸಿ': ಪಂತ್, ಸೈನಿ ಜೊತೆ ಪಿಂಕ್ ಕ್ಯಾಪ್​ನಲ್ಲಿ ಗಿಲ್ - ಶುಬ್ಮನ್ ಗಿಲ್ ಲೇಟೆಸ್ಟ್ ನ್ಯೂಸ್

ಶುಬ್ಮನ್ ಗಿಲ್ ತಂಡದ ಆಟಗಾರರಾದ ರಿಷಭ್ ಪಂತ್ ಮತ್ತು ನವದೀಪ್ ಸೈನಿ ಅವರೊಂದಿಗೆ ತೆಗೆದಿರುವ ಚಿತ್ರಗಳನ್ನು ಹಂಚಿಕೊಂಡಿದ್ದು, ಮೂವರು ಆಟಗಾರರು ಮೆಕ್‌ಗ್ರಾತ್ ಫೌಂಡೇಶನ್​ ಅನ್ನು ಬೆಂಬಲಿಸುವ ಪಿಂಕ್ ಕ್ಯಾಪ್‌ಗಳನ್ನು ಧರಿಸಿದ್ದಾರೆ.

Shubman Gill
ಪಂತ್ ಮತ್ತು ಸೈನಿ ಜೊತೆ ಶುಬ್ಮನ್ ಗಿಲ್

By

Published : Jan 13, 2021, 8:17 AM IST

ಸಿಡ್ನಿ:ಆಸ್ಟ್ರೇಲಿಯಾ ವಿರುದ್ಧದ ಪಿಂಕ್ ಟೆಸ್ಟ್‌ನಲ್ಲಿ ಸ್ಪೂರ್ತಿದಾಯಕ ಪ್ರದರ್ಶನದ ನೀಡಿದ ಭಾರತ ಡ್ರಾ ಸಾಧಿಸುವಲ್ಲಿ ಯಶಸ್ವಿಯಾಗಿದ್ದು, ಪಂದ್ಯದ ನಂತರ ಸಹ ಆಟಗಾರರ ಜೊತೆ ತೆಗೆಸಿದ ಫೋಟೋವನ್ನು ಆರಂಭಿಕ ಆಟಗಾರ ಶುಬ್ಮನ್ ಗಿಲ್ ಹಂಚಿಕೊಂಡಿದ್ದಾರೆ.

ಶುಬ್ಮನ್ ಗಿಲ್ ತಂಡದ ಆಟಗಾರರಾದ ರಿಷಭ್ ಪಂತ್ ಮತ್ತು ನವದೀಪ್ ಸೈನಿ ಅವರೊಂದಿಗೆ ತೆಗೆದಿರುವ ಚಿತ್ರಗಳನ್ನು ಹಂಚಿಕೊಂಡಿದ್ದು, ಮೆಕ್‌ಗ್ರಾತ್ ಫೌಂಡೇಶನ್​ ಅನ್ನು ಬೆಂಬಲಿಸುವ ಪಿಂಕ್ ಕ್ಯಾಪ್‌ಗಳನ್ನು ಧರಿಸಿದ್ದಾರೆ.

ಎರಡು ಫೋಟೋಗಳನ್ನು ಪೋಸ್ಟ್ ಮಾಡಿರುವ ಗಿಲ್ "ಪಿಂಕ್ ಟೆಸ್ಟ್, ಎರಡನೇ ಚಿತ್ರದಲ್ಲಿ ಸಂಭಾಷಣೆ ಏನೆಂದು ಯಾರಾದರೂ ಊಹಿಸಬಹುದೇ" ಎಂದಿದ್ದಾರೆ.

ಪ್ರಮುಖ ವಿಕೆಟ್​ಗಳ ಪತನದ ನಂತರ ಗಾಯದ ನಡುವೆಯೂ ತಾಳ್ಮೆಯ ಆಟವಾಡಿದ ಹನುಮಾ ವಿಹಾರಿ ಮತ್ತು ರವಿಚಂದ್ರನ್ ಅಶ್ವಿನ್ ಮೂರನೇ ಟೆಸ್ಟ್ ಪಂದ್ಯವನ್ನು ಡ್ರಾ ಮಾಡುವಲ್ಲಿ ಯಶಸ್ವಿಯಾದ್ರು. 4 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಉಭಯ ತಂಡಗಳು ಒಂದೊಂದು ಅಂಕ ಪಡೆದಿದ್ದು, ಜ.15 ರಿಂದ ಬ್ರಿಸ್ಬೇನ್​ನಲ್ಲಿ ನಾಲ್ಕನೇ ಟೆಸ್ಟ್ ಪಂದ್ಯ ಆರಂಭವಾಗಲಿದೆ.

ABOUT THE AUTHOR

...view details