ಕರ್ನಾಟಕ

karnataka

ETV Bharat / sports

ಕೆಮರ್​ ರೋಚ್​ ಮಾರಕ ದಾಳಿ... 268 ರನ್​ಗಳ ಸಾಧಾರಣ ಮೊತ್ತ ದಾಖಲಿಸಿದ ಕೊಹ್ಲಿಪಡೆ - kohli

ನಾಯಕ ವಿರಾಟ್​ ಕೊಹ್ಲಿ ಹಾಗೂ ಧೋನಿ ಅರ್ಧಶತಕಗಳ ನೆರವಿನಿಂದ ಭಾರತ ತಂಡ 268 ರನ್​ಗಳ ಸಾಧಾರಣ ಮೊತ್ತ ಪೇರಿಸಿದೆ. ಆಕರ್ಷಕವಾಗಿ ಬೌಲಿಂಗ್​ ಮಾಡಿದ ಕೆಮರ್​ ರೋಚ್​ 3 ವಿಕೆಟ್​ ಪಡೆದು ಭಾರತ ಬೃಹತ್​ ಮೊತ್ತದ ಕನಸಿಗೆ ಮುಳ್ಳಾದರು.

ICC world cup

By

Published : Jun 27, 2019, 7:10 PM IST

ಮ್ಯಾಂಚೆಸ್ಟರ್​: ಕೊಹ್ಲಿ(72), ಧೋನಿ(56) ಅರ್ಧಶತಕದ ನೆರವಿನಿಂದ ಭಾರತ ತಂಡ ವಿಂಡೀಸ್​ ವಿರುದ್ಧ 268 ರನ್​ಗಳ ಸಾಧಾರಣ ಮೊತ್ತ ದಾಖಲಿಸಿದೆ.

ಟಾಸ್​​ ಗೆದ್ದು ಬ್ಯಾಟಿಂಗ್​ ಆಯ್ದುಕೊಂಡ ಕೊಹ್ಲಿ ಬಳಗ ಆರಂಭದಲ್ಲಿ 18 ರನ್​ಗಳಿಸಿದ್ದ ರೋಹಿತ್​ ಶರ್ಮಾ ವಿಕೆಟ್​ ಕಳೆದುಕೊಂಡು ಆಘಾತ ಅನುಭವಿಸಿತು. ಆದರೆ ನಾಯಕ ಕೊಹ್ಲಿ ಹಾಗೂ ರಾಹುಲ್​ ಎರಡನೇ ವಿಕೆಟ್​ ಜೊತೆಯಾಟದಲ್ಲಿ 69 ರನ್​ ಸೇರಿಸಿ ತಂಡವನ್ನು ಆಘಾತದಿಂದ ಪಾರು ಮಾಡಿದರು. 64 ಎಸೆತಗಳಲ್ಲಿ 6 ಬೌಂಡರಿ ಸಿಡಿಸಿದ್ದ ರಾಹುಲ್​ ಹೋಲ್ಡರ್​ ಬೌಲಿಂಗ್​ನಲ್ಲಿ ಬೋಲ್ಡ್​ ಆಗುವ ಮೂಲಕ ಮತ್ತೊಮ್ಮೆ ಅರ್ಧಶತಕಗಳಿಸುವಲ್ಲಿ ಎಡವಿದರು.

ರಾಹುಲ್​ ನಂತರ ಬಂದ ವಿಜಯ್​ ಶಂಕರ್​ 14 ರನ್​ಗಳಿಗೆ ಔಟಾದರೇ,ಜಾಧವ್​ ಆಟ ಕೇವಲ 7 ರನ್​ಗಳಿಗೆ ಸೀಮಿತವಾಯಿತು. ಈ ಇಬ್ಬರನ್ನು ಕೆಮರ್​ ರೋಚ್​ ಔಟ್​ ಮಾಡಿದರು. ಈ ಹಂತದಲ್ಲಿ ಅರ್ಧಶತಕಗಳಿಸಿ ಶತಕದತ್ತ ಮುನ್ನುಗ್ಗುತ್ತಿದ್ದ ಕೊಹ್ಲಿ(72) ಹೋಲ್ಡರ್​ ಬೌಲಿಂಗ್​ನಲ್ಲಿ ಬ್ರಾವೋಗೆ ಕ್ಯಾಚ್​ ನೀಡಿ ಔಟಾದರು.

ಧೋನಿ- ಪಾಂಡ್ಯ ಜುಗಲ್​ಬಂದಿ:

ತಂಡದ ಮೊತ್ತ 180-5 ಆಗಿದ್ದಾಗ ಕ್ರೀಸ್​ಗೆ ಆಗಮಿಸಿದ್ದಾಗ ಕ್ರೀಸ್​ಗೆ ಆಗಮಿಸಿದ ಹಾರ್ದಿಕ್​ ಪಾಂಡ್ಯ 6ನೇ ವಿಕೆಟ್​ ಜೊತೆಯಾಟದಲ್ಲಿ ರನ್​ಗಳ ಜೊತೆಯಾಟದಲ್ಲಿ 70 ರನ್​ ಸೇರಿಸಿದರು. 38 ಎಸೆತಗಳಲ್ಲಿ 5 ಬೌಂಡರಿ ಸಹಿತ 46 ರನ್​ಗಳಿಸಿದ್ದ ಪಾಂಡ್ಯ ಕಾಟ್ರೆಲ್​ಗೆ ಓವರ್​ನಲ್ಲಿ ಫೆಬಿಯಾನ್​ ಅಲೆನ್​ಗೆ ಕ್ಯಾಚ್​ ನೀಡಿ ಔಟಾದರು. ಕೊನೆಯಲ್ಲಿ ಅಬ್ಬರಿಸಿದ ಧೋನಿ ಥಾಮಸ್​ ಎಸೆದ ಕೊನೆಯ ಓವರ್​ನಲ್ಲಿ 1ಬೌಂಡರಿ ಮತ್ತು 2 ಸಿಕ್ಸರ್​ ಸಿಡಿಸಿದರು. ಒಟ್ಟಾರೆ 65 ಎಸೆತಗಳಲ್ಲಿ 3 ಬೌಂಡರಿ ಹಾಗೂ 2 ಸಿಕ್ಸರ್​ ಸಹಿತ 56 ರನ್​ ಸಿಡಿಸಿ ತಂಡದ ಮೊತ್ತ 250 ರ ಗಡಿ ದಾಟಲು ನೆರವಾದರು.

ABOUT THE AUTHOR

...view details