ಲೀಡ್ಸ್: ಆಲ್ರೌಂಡರ್ ಏಂಜೆಲೋ ಮ್ಯಾಥ್ಯೂಸ್ ಅವರ ಭರ್ಜರಿ ಶತಕದ ನೆರವಿನಿಂದ ಲಂಕಾ ತಂಡ 264 ರನ್ಗಳ ಸ್ಪರ್ಧಾತ್ಮಕ ಮೊತ್ತ ದಾಖಲಿಸಿದೆ.
ಟಾಸ್ ಗೆದ್ದ್ದು ಬ್ಯಾಟಿಂಗ್ ನಡೆಸಿದ ಶ್ರೀಲಂಕಾ ಆರಂಭಿಕ ಆಘಾತ ಅನುಭವಿಸಿತಾದರೂ ಏಂಜೆಲೋ ಮ್ಯಾಥ್ಯೂಸ್(113) ಶತಕ ಹಾಗೂ ಲಹಿರು ತಿರುಮನ್ನೆ(53) ಅರ್ಧಶತಕದ ನೆರವಿನಿಂದ 264 ರನ್ಗಳ ಸ್ಪರ್ಧಾತ್ಮಕ ಮೊತ್ತ ದಾಖಲಿಸಿದೆ.
ಆರಂಭಿಕರಾಗಿ ಕಣಕ್ಕಿಳಿ ಕರುಣರತ್ನೆ(10), ಕುಶಾಲ್ ಪೆರೆರಾ(18) ರನ್ನು ಬುಮ್ರಾ ಪವರ್ ಪ್ಲೇ ಒಳಗೆ ಪೆವಿಲಿಯನ್ಗಟ್ಟಿದರು. ನಂತರ ಇಂದೆ ತಮ್ಮ ಮೊದಲ ಪಂದ್ಯವಾಡಿದ ಜಡೇಜಾ 3 ರನ್ಗಳಿಸಿದ್ದ ಕುಶಾಲ್ ಮೆಂಡಿಸ್ರನ್ನು ಸ್ಟಂಪ್ ಬಲೆಗೆ ಬೀಳಿಸಿದರು. 20 ರನ್ಗಳಿಸಿದ್ದ ಫರ್ನಾಂಡೋರನ್ನು ಪಾಂಡ್ಯ ಪೆವಿಲಿಯನ್ಗಟ್ಟಿದರು.
ಈ ಹಂತದಲ್ಲಿ ಒಂದಾದ ಹಿರಿಯ ಆಟಗಾರ ಮ್ಯಾಥ್ಯೂಸ್ 128 ಎಸೆತಗಳಲ್ಲಿ 10 ಬೌಂಡರಿ , 2 ಸಿಕ್ಸರ್ಗಳ ನೆರವಿಂದ 113 ರನ್ಗಳಿಸಿದರು. ಇವರಿಗೆ ಸಾತ್ ನೀಡಿದ ಲಹಿರು ತಿರುಮನ್ನೆ 68 ಎಸೆತಗಳಲ್ಲಿ 53 ರನ್ ಸೇರಿಸಿದರು. ದನಂಜಯ್ ಡಿ ಸಿಲ್ವಾ 29 ರನ್ಗಳಿಸಿದರು.
ಭರ್ಜರಿ ಬೌಲಿಂಗ್ ದಾಳಿ ನಡೆಸಿದ ಬುಮ್ರಾ 37ಕ್ಕೆ 3, ಜಡೇಜಾ 40ಕ್ಕೆ 1, ಕುಲದೀಪ್ 58ಕ್ಕೆ 1, ಪಾಂಡ್ಯ 50ಕ್ಕೆ 1 ಹಾಗೂ ಭುವನೇಶ್ವರ್ 73 ರನ್ ನೀಡಿ ಒಂದು ವಿಕೆಟ್ ಪಡೆದರು.