ಕರ್ನಾಟಕ

karnataka

ETV Bharat / sports

ಕ್ರೀಡಾ ಚಟುವಟಿಕೆ ಆದಷ್ಟು ಬೇಗ ಪುನಾರಂಭ: ಕಿರಣ್​ ರಿಜಿಜು  ವಿಶ್ವಾಸ

"ಕ್ರೀಡಾ ಚಟುವಟಿಕೆಗಳನ್ನು ಆದಷ್ಟು ಬೇಗನೆ ಆರಂಭಿಸಲು ಬಯಸಿದ್ದೇವೆ. ಮುಂದಿನ ಒಂದೆರಡು ತಿಂಗಳಲ್ಲಿ ಕನಿಷ್ಠ ಕೆಲವು ಸ್ಪರ್ಧೆಗಳನ್ನಾದರೂ ನಡೆಸುವ ವಿಶ್ವಾಸ ಹೊಂದಿದ್ದೇವೆ, ಆದಷ್ಟು ಬೇಗ ಕ್ರೀಡಾ ಸ್ಪರ್ಧೆಗಳಿಗೆ ಉತ್ತಮ ವಾತಾವರಣ ಕಲ್ಪಿಸಿಕೊಡಲು ನಾನು ಬೆಂಬಲ ನೀಡುತ್ತೇನೆ. ಈ ಸಾಂಕ್ರಾಮಿಕ ರೋಗ ನಮಗೆ ಬಹುದೊಡ್ಡ ಅಡಚಣೆಯಾಗಿದೆ" ಎಂದು ಕಿರಣ್​ ರಿಜಿಜು ಹೇಳಿದ್ದಾರೆ.

ಕ್ರೀಡಾ ಸಚಿವ ಕಿರಣ್​ ರಿಜಿಜು
ಕ್ರೀಡಾ ಸಚಿವ ಕಿರಣ್​ ರಿಜಿಜು

By

Published : Jun 8, 2020, 11:01 AM IST

ನವದೆಹಲಿ:ಮುಂದಿನ ಒಂದೆರಡು ತಿಂಗಳುಗಳಲ್ಲಿ ಭಾರತದಲ್ಲೂ ಕೂಡ ಕೆಲವು ಕ್ರೀಡಾ ಸ್ಪರ್ಧೆಗಳನ್ನು ಆರಂಭಿಸುವುದಕ್ಕೆ ಸಾಧ್ಯವಾಗಲಿದೆ ಎಂದು ಕೇಂದ್ರ ಕ್ರೀಡಾ ಹಾಗೂ ಯುವ ವ್ಯವಹಾರಗಳ ಸಚಿವಾ ಕಿರಣ್ ರಿಜಿಜು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಟೇಬಲ್​ ಟೆನ್ನಿಸ್ ಆಟಗಾರ್ತಿ ಮಾನಿಕಾ ಭಾತ್ರಾ ಅವರೊಂದಿಗೆ ನಡೆಸಿದ ಲೈವ್​ ಸೆಷನ್​ನಲ್ಲಿ ಮಾತನಾಡುವ ವೇಳೆ ಭಾರತದಲ್ಲಿ ಕ್ರೀಡಾ ಸ್ಪರ್ಧೆಗಳ ಪುನಾರಂಭದ ಬಗ್ಗೆ ಮಾತನಾಡಿದ್ದಾರೆ.

"ಕ್ರೀಡಾ ಚಟುವಟಿಕೆಗಳನ್ನು ಆದಷ್ಟು ಬೇಗನೆ ಆರಂಭಿಸಲು ಬಯಸಿದ್ದೇನೆ. ಮುಂದಿನ ಒಂದೆರಡು ತಿಂಗಳಲ್ಲಿ ಕನಿಷ್ಠ ಕೆಲವು ಸ್ಪರ್ಧೆಗಳನ್ನಾದರೂ ನಡೆಸುವ ವಿಶ್ವಾಸ ಹೊಂದಿದ್ದೇವೆ. ಆದಷ್ಟು ಬೇಗ ಕ್ರೀಡಾ ಸ್ಪರ್ಧೆಗಳಿಗೆ ಉತ್ತಮ ವಾತಾವರಣ ಕಲ್ಪಿಸಿಕೊಡಲು ನಾನು ಬೆಂಬಲ ನೀಡುತ್ತೇನೆ. ಈ ಸಾಂಕ್ರಾಮಿಕ ರೋಗ ನಮಗೆ ಬಹುದೊಡ್ಡ ಅಡಚಣೆಯಾಗಿದೆ" ಎಂದು ಕಿರಣ್​ ರಿಜಿಜು ಹೇಳಿದ್ದಾರೆ.

"ಅಗ್ರ ಕ್ರಮಾಂಕದ ಕ್ರೀಡಾಪಟುಗಳು ಮಾತ್ರವಲ್ಲದೇ ಎಲ್ಲ ಸಾಮಾನ್ಯ ಆಟಗಾರರು ಕೂಡ ಮೈದಾನಕ್ಕೆ ಬರಬೇಕು. ಇದಕ್ಕಾಗಿ ನಾನು ನನ್ನ ಎಲ್ಲ ರೀತಿಯ ಪ್ರಯತ್ಮ ಮಾಡುತ್ತಿದ್ದೇನೆ. ಆದಷ್ಟು ಬೇಗ ಪ್ರಾರಂಭಿಸಲು ಪ್ರಯತ್ನಿಸುತ್ತೇನೆ. ಅಭ್ಯಾಸ ಮತ್ತ ತರಬೇತಿಗೆ ಈಗಾಗಲೆ ಅನುಮತಿ ನೀಡಿದ್ದೇವೆ. ಆದರೆ, ಸ್ಪರ್ಧಾತ್ಮಕ ಕ್ರೀಡಾ ಚಟುವಟಿಕೆಗಳನ್ನು ಆರಂಭಿಸಲು ಇನ್ನು ಸ್ವಲ್ಪ ಸಮಯ ತೆಗೆದುಕೊಳ್ಳಲಿದೆ ಎಂದು ಅವರು ಹೇಳಿದ್ದಾರೆ.

ಇದಕ್ಕೂ ಮೊದಲು ಸಾಯ್​(SAI)ಅಥ್ಲೀಟ್​ಗಳಿಗೆ ತರಬೇತಿ ಪುನಾರಂಭಿಸಲು ತನ್ನ ಎಸ್​ಒಪಿ ವಿಧಾನವನ್ನು ಘೋಷಿಸಿತ್ತು. ಇದರಲ್ಲಿ ಆಟಗಾರರು ತರಬೇತಿ ವೇಳೆ ಅನುಸರಿಸಬೇಕಾ ಕೆಲವು ಮಾರ್ಗಸೂಚಿಗಳನ್ನು ಪಟ್ಟಿ ಮಾಡಲಾಗಿತ್ತು.

ABOUT THE AUTHOR

...view details