ಚೆನ್ನೈ:ಮೊದಲ ಪಂದ್ಯದಲ್ಲಿ ಬಲಿಷ್ಠ ಮುಂಬೈ ವಿರುದ್ಧ 5 ವಿಕೆಟ್ ಪಡೆದು ಆರ್ಸಿಬಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ಹರ್ಷಲ್ ಪಟೇಲ್ ತಾವು ಡೆಲ್ಲಿ ಕ್ಯಾಪಿಟಲ್ಸ್ನಿಂದ ವರ್ಗಾವಣೆಗೊಂಡಾಗಲೇ ತಂಡದಲ್ಲಿ ನನ್ನ ಪಾತ್ರವೇನು ಎಂದು ತಿಳಿಸಲಾಗಿದೆ ಎಂದು ಪಂದ್ಯ ಮುಗಿದ ನಂತರ ನಡೆದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಶುಕ್ರವಾರ ನಡೆದ ಮೊದಲ ಪಂದ್ಯದಲ್ಲಿ ಆರಂಭಿಕ ಓವರ್‌ಗಳಲ್ಲಿ ರನ್ ಬಿಟ್ಟು ಕೊಟ್ಟ ಹರ್ಷಲ್, ಡೆತ್ ಓವರ್ನಲ್ಲಿ ಅದ್ಭುತ ಬೌಲಿಂಗ್ ಮಾಡಿದರು. ಅದರಲ್ಲೂ ಕೊನೆಯ ಓವರ್ನಲ್ಲಿ ಕೇವಲ 1 ರನ್ ನೀಡಿ 4 ವಿಕೆಟ್ ಪಡೆದರು. ಒಟ್ಟಾರೆ 4 ಓವರ್‌ಗಳಲ್ಲಿ 27 ರನ್ ನೀಡಿ 5 ವಿಕೆಟ್ ಪಡೆದರು. ಇದು ಐಪಿಎಲ್ ಇತಿಹಾಸದಲ್ಲಿ ಬೌಲರ್ ಒಬ್ಬ 5 ವಿಕೆಟ್ ಪಡೆದ ಮೊದಲ ನಿದರ್ಶನವಾಯಿತು. ಜೊತೆಗೆ ಟಿ-20 ಕ್ರಿಕೆಟ್ನಲ್ಲಿ ಹರ್ಷಲ್ರ ಮೊದಲ 5 ವಿಕೆಟ್ ಗೊಂಚಲಾಗಿದೆ.
"ನಾನು ಯಾವಾಗ ಡೆಲ್ಲಿಯಿಂದ ವರ್ಗಾವಣೆಗೊಂಡು ಬಂದೆನೋ, ಅಂದೇ ಫ್ರಾಂಚೈಸಿಗಾಗಿ ನಾನು ಯಾವ ಜವಾಬ್ದಾರಿ(ಡೆತ್ ಓವರ್) ನಿರ್ವಹಿಸಬೇಕೆಂದು ತಿಳಿಸಿದೆ" ಎಂದು ಹರ್ಷಲ್ ಪಟೇಲ್ ತಿಳಿಸಿದ್ದಾರೆ.