ಕರ್ನಾಟಕ

karnataka

ETV Bharat / sports

ಈ ಆಟಗಾರ ಅಂದ್ರೆ ನನ್ನ ತಾಯಿಗೆ ಪಂಚಪ್ರಾಣ: ಲೈವ್​ ಕಾಮೆಂಟ್ರಿಯಲ್ಲಿ ಹೃತಿಕ್​ ಮನದಾಳದ ಮಾತು - news kannada

ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಇತ್ತೀಚಿನ ಕಳೆಪೆ ಆಟ ಕೆಲವರಿಗೆ ಇಷ್ಟವಾಗದೇ ಇರಬಹುದು. ಆದ್ರೆ ಹಲವರಿಗೆ ಅವರೊಬ್ಬ ಸ್ಫೂರ್ತಿದಾಯಕ ಆಟಗಾರ ಎನ್ನೋದ್ರರಲ್ಲಿ ಅನುಮಾನವೇ ಇಲ್ಲ. ಹಾಗೆ ಧೋನಿಯನ್ನು ಬಾಲಿವುಡ್​ ನಟರೊಬ್ಬರು ಹಾಡಿ ಹೊಗಳಿದ್ದಾರೆ.

ಹೃತಿಕ್ ಲೈವ್​ ಕಾಮೆಂಟ್ರಿಯಲ್ಲಿ ತೂರಿಬಂದ ಮನದಾಳದ ಮಾತು

By

Published : Jul 1, 2019, 8:12 AM IST

Updated : Jul 1, 2019, 8:54 AM IST

ಬಾಲಿವುಡ್​ನ ಸ್ಟೈಲಿಶ್ ಸ್ಟಾರ್​ ಹೃತಿಕ್ ರೋಷನ್​ ಭಾರತೀಯ ಕ್ರಿಕೆಟ್​ ತಂಡದ ವಿಕೆಟ್ ಕೀಪರ್ ಮಹೇಂದ್ರ ಸಿಂಗ್ ಧೋನಿ ಅವರನ್ನು ತಮ್ಮ ಅಚ್ಚುಮೆಚ್ಚಿನ ಆಟಗಾರ ಎಂದು ಬಣ್ಣಿಸಿದ್ದಾರೆ.

ಮಹೇಂದ್ರ ಸಿಂಗ್ ಧೋನಿ

ಹೃತಿಕ್ ತನ್ನ ಮುಂಬರುವ ಸೂಪರ್ 30 ಚಿತ್ರದ ಪ್ರಚಾರದ ನಿಮಿತ್ತ ನಿನ್ನೆ ನಡೆಯುತ್ತಿದ್ದ ಹಾಲಿ ಐಸಿಸಿ ವಿಶ್ವಕಪ್ ಟೂರ್ನಿಯ ಇಂಗ್ಲೆಂಡ್ ವಿರುದ್ಧದ ಪಂದ್ಯದ ಲೈವ್​ನಲ್ಲಿ ಈ ಹೊಗಳಿಕೆಯ ಮಾತುಗಳನ್ನಾಡಿದ್ದಾರೆ.

ಮಹೇಂದ್ರ ಸಿಂಗ್ ಧೋನಿ ಓರ್ವ ಅನುಭವಿ ಮತ್ತು ಸ್ಫೂರ್ತಿದಾಯಕ ಆಟಗಾರ ಅನ್ನೋದ್ರರಲ್ಲಿ ಸಂಶಯವೇ ಇಲ್ಲ. ನಾನು ಮತ್ತು ನನ್ನ ತಾಯಿ ಇಬ್ಬರೂ ಧೋನಿ ಅವರ ಫ್ಯಾನ್. ಅವರೆಂದ್ರೆ ನಮ್ಮಿಬ್ಬರಿಗೂ ಇಷ್ಟ. ನಾನು ಅವರ ಹೆಸರು ತೆಗೆದರೆ ಸಾಕು ನನ್ನ ತಾಯಿಯ ಮುಖದಲ್ಲಿ ಖುಷಿ ಕಾಣುತ್ತದೆ. ಧೋನಿ ಓರ್ವ ಶಿಕ್ಷಕ, ಜೊತೆಗೆ ಉತ್ತಮ ಚಿಂತಕರು ಹೌದು ಎಂದು ಗುಣಗಾನ ಮಾಡಿದ್ದಾರೆ. ಇದೇ ವೇಳೆ ತಮ್ಮ ಸಿನಿಮಾ ಜರ್ನಿ ಬಗ್ಗೆಯೂ ಮಾತನಾಡಿದ್ದಾರೆ.

Last Updated : Jul 1, 2019, 8:54 AM IST

ABOUT THE AUTHOR

...view details