ಕರ್ನಾಟಕ

karnataka

ETV Bharat / sports

ಭಾರತದ ಗೆಲುವನ್ನು ಗ್ಯಾಲರಿಯಲ್ಲಿ ಕುಳಿತು ಧೋನಿ ಮಗಳ ಜೊತೆ ಸಂಭ್ರಮಿಸಿದ ರಿಷಭ್... ವಿಡಿಯೋ​ - ರಿಷಭ್

ವಿಶ್ವಕಪ್​ ಪ್ರಾಥಮಿಕ ತಂಡದ ಆಯ್ಕೆಯಲ್ಲಿ ನಿರಾಸೆಯನುಭವಿಸಿದ್ದ ಪಂತ್​ಗೆ ಧವನ್​ ಗಾಯಗೊಂಡಿರುವ ಹಿನ್ನಲೆ ಅದೃಷ್ಟ ಕೂಡಿಬಂದಿದ್ದು, ವಿಶ್ವಕಪ್​ ತಂಡದ ಸ್ಟ್ಯಾಂಡ್​ ಬೈ ಆಟಗಾರನಾಗಿ ಇಂಗ್ಲೆಂಡ್​ನಲ್ಲಿ ಭಾರತೀಯ ತಂಡ ಸೇರಿಕೊಂಡಿದ್ದಾರೆ.

pant

By

Published : Jun 17, 2019, 1:26 PM IST

Updated : Jun 17, 2019, 3:18 PM IST

ಮ್ಯಾಂಚೆಸ್ಟರ್: ಗಾಯಗೊಂಡಿರುವ ಶಿಖರ್​ ಧವನ್​ ಸ್ಥಾನ ತುಂಬಲು ಇಂಗ್ಲೆಂಡ್​ಗೆ ​ಹಾರಿರುವ ಯುವ ವಿಕೆಟ್​ ಕೀಪರ್ ರಿಷಭ್​ ಪಂತ್​ ಮೈದಾನದ ಹೊರಗಿದ್ದುಕೊಂಡು ತಮ್ಮ ಪುಟ್ಟ ಪಾರ್ಟ್ನ ರ್ ಜೊತೆಗೂಡಿ​ ಟೀಮ್​ ಇಂಡಿಯಾವನ್ನ ಹುರಿದುಂಬಿಸುತ್ತಿರುವ ವಿಡಿಯೋ ಶೇರ್​ ಮಾಡಿದ್ದು, ಸೋಷಿಯಲ್​ ಮೀಡಿಯಾಗಳಲ್ಲಿ ಈ ವಿಡಿಯೋ ವೈರಲ್​ ಆಗುತ್ತಿದೆ.

ವಿಶ್ವಕಪ್​ ಪ್ರಾಥಮಿಕ ತಂಡದ ಆಯ್ಕೆಯಲ್ಲಿ ನಿರಾಸೆಯನುಭವಿಸಿದ್ದ ಪಂತ್​ಗೆ ಧವನ್​ ಗಾಯಗೊಂಡಿರುವ ಹಿನ್ನೆಲೆ ಅದೃಷ್ಟ ಕೂಡಿಬಂದಿದ್ದು, ವಿಶ್ವಕಪ್​ ತಂಡದ ಸ್ಟ್ಯಾಂಡ್​ ಬೈ ಆಟಗಾರನಾಗಿ ಇಂಗ್ಲೆಂಡ್​ನಲ್ಲಿ ಭಾರತೀಯ ತಂಡ ಸೇರಿಕೊಂಡಿದ್ದಾರೆ.

ನಿನ್ನೆ ನಡೆದ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ವೀಕ್ಷಕರ ವಿಐಪಿ ಗ್ಯಾಲರಿಯಲ್ಲಿ ಕುಳಿತು ತಂಡವನ್ನು ಹುರಿದುಂಬಿಸುತ್ತಿದ್ದ ರಿಷಭ್​, ಧೋನಿ ಮಗಳ ಜೊತೆ ಕುಳಿತು- ಕೂಗಿ ಕಿರುಚುತ್ತಿರುವ ವಿಡಿಯೋವನ್ನು ಶೇರ್​ ಮಾಡಿಕೊಂಡಿದ್ದಾರೆ. ಈ ವಿಡಿಯೋಗೆ ’ಪಾರ್ಟ್ನರ್​ ಇನ್​ ಕ್ರೈಮ್’​ ಎಂದು ಬರೆದುಕೊಂಡಿದ್ದಾರೆ.

ಈ ವಿಡಿಯೋವನ್ನು 5 ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ್ದು, ಪಂತ್​ರನ್ನು ರಿಯಲ್​ ಬೇಬಿ ಸಿಟ್ಟರ್​ ಎಂದು ಕಾಲೆಳೆದರೆ, ಇದನ್ನು ಬದಿಗೊತ್ತಿದ ಕೆಲವರು ವಿಶ್ವಕಪ್​ ತಂಡದಲ್ಲಿ ನಿಮಗೆ ಆದಷ್ಟು ಬೇಗ ಅವಕಾಶ ಸಿಗುವಂತಾಗಲಿ ಎಂದು ಶುಭಕೋರಿದ್ದಾರೆ.

Last Updated : Jun 17, 2019, 3:18 PM IST

ABOUT THE AUTHOR

...view details