ಕರ್ನಾಟಕ

karnataka

ETV Bharat / sports

ಜೋಫ್ರಾ ಆರ್ಚರ್​ ಬೌಲಿಂಗ್​ ಆ್ಯಕ್ಷನ್​​ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ ಇಯಾನ್​ ಬಿಷಪ್​!

"ಪ್ರಸ್ತುತ ಬೌಲರ್​ಗಳ ಬೌಲಿಂಗ್​ ತಂತ್ರಗಳ ಬಗ್ಗೆ ಮಾತನಾಡುವುದಾದರೆ, ಜೋಫ್ರಾ ಆರ್ಚರ್​ ಬೌಲಿಂಗ್​ ಮೈಕಲ್​ ಹೋಲ್ಡಿಂಗ್​ ಬೌಲಿಂಗ್​ಅನ್ನು ನೆನಪಿಸುತ್ತದೆ ಹೋಲ್ಡಿಂಗ್ ಮತ್ತು ಆರ್ಚರ್​ ಅವರ ಬೌಲಿಂಗ್​ ಆ್ಯಕ್ಷನ್​ ನಾನು ನೋಡಿದ ಅತ್ಯಂತ ಸುಲಭವಾದ, ಸಾಂಪ್ರದಾಯಿಕ ಆ್ಯಕ್ಷನ್​ಗಳಾಗಿವೆ. ಆದರೆ ನಾನು ಆರ್ಚರ್​ ಅವರ ಸಾಮರ್ಥ್ಯಕ್ಕೆ ಹೆಚ್ಚು ರೇಟ್​ ನೀಡುತ್ತೇನೆ ಎಂದು ಬಿಷಪ್​​ ಐಸಿಸಿ ಪಾಡ್​ಕಾಸ್ಟ್​ನಲ್ಲಿ ಹೇಳಿಕೊಂಡಿದ್ದಾರೆ.

Holding & Archer's bowling actions
ಜೋಫ್ರಾ ಆರ್ಚರ್ ಮತ್ತು ಮೈಕೆಲ್ ಹೋಲ್ಡಿಂಗ್

By

Published : Jul 5, 2020, 4:49 PM IST

ನವದೆಹಲಿ: ಜೋಫ್ರಾ ಆರ್ಚರ್ ಮತ್ತು ಮೈಕೆಲ್ ಹೋಲ್ಡಿಂಗ್ ಅವರ ಬೌಲಿಂಗ್​ ತಾವು ಕಂಡ ಅತ್ಯಂತ ಸುಲಭ ಹಾಗೂ ಸಾಪ್ರದಾಯಿಕ ಬೌಲಿಂಗ್​ ಕ್ರಮಗಳನ್ನು ಹೊಂದಿದ್ದಾರೆ ಎಂದು ಮಾಜಿ ವೆಸ್ಟ್ ಇಂಡೀಸ್ ಕ್ರಿಕೆಟಿಗ ಇಯಾನ್ ಬಿಷಪ್ ಭಾನುವಾರ ತಿಳಿಸಿದ್ದಾರೆ. ಅದರಲ್ಲೂ ಆರ್ಚ ಬೌಲಿಂಗ್​ಗೆ ಹೆಚ್ಚು ರೇಟ್ ಕೊಡಬಹುದು ಎಂದು ಹೇಳಿದ್ದಾರೆ.

"ಪ್ರಸ್ತುತ ಬೌಲರ್​ಗಳ ಬೌಲಿಂಗ್​ ತಂತ್ರಗಳ ಬಗ್ಗೆ ಮಾತನಾಡುವುದಾದರೆ, ಜೋಫ್ರಾ ಆರ್ಚರ್​ ಬೌಲಿಂಗ್​ ಮೈಕಲ್​ ಹೋಲ್ಡಿಂಗ್​ ಬೌಲಿಂಗ್​ಅನ್ನು ನೆನಪಿಸುತ್ತದೆ ಹೋಲ್ಡಿಂಗ್ ಮತ್ತು ಆರ್ಚರ್​ ಅವರ ಬೌಲಿಂಗ್​ ಆ್ಯಕ್ಷನ್​ ನಾನು ನೋಡಿದ ಅತ್ಯಂತ ಸುಲಭವಾದ, ಸಾಂಪ್ರದಾಯಿಕ ಆ್ಯಕ್ಷನ್​ಗಳಾಗಿವೆ. ಆದರೆ ನಾನು ಆರ್ಚರ್​ ಅವರ ಸಾಮರ್ಥ್ಯಕ್ಕೆ ಹೆಚ್ಚು ರೇಟ್​ ನೀಡುತ್ತೇನೆ ಎಂದು ಬಿಷಪ್​​ ಐಸಿಸಿ ಪಾಡ್​ಕಾಸ್ಟ್​ನಲ್ಲಿ ಹೇಳಿಕೊಂಡಿದ್ದಾರೆ.

ಇಯಾನ್​ ಬಿಷಪ್​

ಆರ್ಚರ್ ತಮ್ಮ ವೃತ್ತಿಜೀವನದಲ್ಲಿ ಇದುವರೆಗೆ 7 ಟೆಸ್ಟ್, 14 ಏಕದಿನ ಮತ್ತು 1 ಟಿ 20 ಪಂದ್ಯವನ್ನಾಡಿದ್ದು 55 ವಿಕೆಟ್ ಕಬಳಿಸಿದ್ದಾರೆ. ಈ ವೇಗದ ಬೌಲರ್ ಕಳೆದ ವರ್ಷ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪಾದಾರ್ಪಣೆ ಮಾಡಿದರು ಮತ್ತು ಶೀಘ್ರದಲ್ಲೇ ತಮ್ಮ ವೇಗ ಮತ್ತು ಆಕ್ರಮಣಶೀಲತೆಯ ಮೂಲಕ ವಿಶ್ವಕ್ರಿಕೆಟ್​ನ ಮನೆ ಮಾತಾದರು.

25 ರ ಹರೆಯದವರು ಆರ್ಚರ್​ 2019 ರ ವಿಶ್ವಕಪ್‌ನ ಫೈನಲ್‌ನಲ್ಲಿ 'ಸೂಪರ್ ಓವರ್' ನಲ್ಲಿ ಬೌಲಿಂಗ್​ ಮಾಡುವ ಮೂಲಕ ಇಂಗ್ಲೆಂಡ್​ಗೆ ಮೊದಲ ಏಕದಿನ ವಿಶ್ವಕಪ್​ ಪ್ರಶಸ್ತಿಯನ್ನು ತಂಡದುಕೊಡುವಲ್ಲಿ ಯಶಸ್ವಿಯಾಗಿದ್ದರು. ನಂತರ ಆ್ಯಶಸ್​ ಸರಣಿಯಲ್ಲೂ ಅವಕಾಶ ಪಡೆದು ಸ್ಟಿವ್ ಸ್ಮಿತ್​ ಅವರೊ0ಂದಿಗೆ ಅತ್ಯುತ್ತಮ ಕಾದಾಟ ನಡೆಸಿದ್ದರು. ಇದೀಗ ಮೂರು ತಿಂಗಳ ನಂತರ ಕ್ರಿಕೆಟ್​ಗೆ​ ಮರಳಿದ್ದು, ಜುಲೈ 8ರಂದು ವಿಂಡೀಸ್​ ವಿರುದ್ಧ ಇಂಗ್ಲೆಂಡ್​ ತಂಡ ಕಣಕ್ಕಿಳಿಯುತ್ತಿದೆ. ಮೂಲ ನೆಲೆ ವಿಂಡೀಸ್​ ಆಗಿರುವ ಆರ್ಚರ್​ ತನ್ನ ತವರಿನ ತಂಡದ ವಿರುದ್ಧ ಯಾವ ರೀತಿ ಆಡಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

ABOUT THE AUTHOR

...view details