ಧರ್ಮಶಾಲಾ(ಹಿಮಾಚಲ ಪ್ರದೇಶ):ಹರಿಣಗಳ ವಿರುದ್ಧ ಸೆಪ್ಟೆಂಬರ್ 15ರಿಂದ ಆರಂಭಗೊಳ್ಳಲಿರುವ ಟಿ-20 ಕ್ರಿಕೆಟ್ ಸರಣಿಗಾಗಿ ಟೀಂ ಇಂಡಿಯಾ ಪೂರ್ವತಯಾರಿ ನಡೆಸುತ್ತಿದೆ. ಈ ಮಧ್ಯೆ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಿಂದ ಹೊರಗುಳಿದಿದ್ದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ನೆಟ್ನಲ್ಲಿ ಬೆವರು ಹರಿಸುತ್ತಿದ್ದಾರೆ.
ಟಿ-20 ಸರಣಿ ಆರಂಭಗೊಳ್ಳಲು 4 ದಿನಗಳು ಬಾಕಿ ಉಳಿದಿವೆ. ಈಗಾಗಲೇ ನೆಟ್ನಲ್ಲಿ ಬ್ಯಾಟಿಂಗ್ ನಡೆಸುವ ಮೂಲಕ ಆಟಗಾರರು ಪ್ರಾಕ್ಟಿಸ್ ನಡೆಸಿದರು. ಹಾರ್ದಿಕ್ ಪಾಂಡ್ಯಗೆ ಸಹೋದರ ಕೃನಾಲ್ ಪಾಂಡ್ಯ ಬೌಲಿಂಗ್ ಮಾಡಿ ಗಮನ ಸೆಳೆದರು. ಈ ವೇಳೆ ಹಾರ್ದಿಕ್ ಭಾರಿ ಹೊಡೆತಕ್ಕೆ ಮುಂದಾಗುತ್ತಿದ್ದರು. ಜತೆಗೆ ಎಂಎಸ್ ಧೋನಿಯವರ ಆಕರ್ಷಕ ಹೆಲಿಕಾಪ್ಟರ್ ಶಾಟ್ ಸಿಡಿಸಿದ್ರು.