ಹೈದರಾಬಾದ್:ಇಸ್ರೋ ಮಹತ್ವಾಕಾಂಕ್ಷಿ ಯೋಜನೆ ಚಂದ್ರಯಾನ - 2 ಯಶಸ್ವಿ ಉಡಾವಣೆಯಾಗಿದ್ದು, ಈ ಮೂಲಕ ಭಾರತ ಮತ್ತೊಮ್ಮೆ ಚಂದಿರನ ಅಂಗಳಕ್ಕಿಳಿಯಲು ಸಜ್ಜಾಗಿದೆ.
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಐತಿಹಾಸಿಕ ಹೆಜ್ಜೆಯನ್ನು ಇಡೀ ವಿಶ್ವವೇ ಕೊಂಡಾಡಿದೆ. ಇದರ ನಡುವೆ ಟೀಮ್ ಇಂಡಿಯಾದ ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್ ಪಾಕಿಸ್ತಾನವನ್ನು ಚಂದ್ರಯಾನದ ನೆಪದಲ್ಲಿ ವ್ಯಂಗ್ಯ ಮಾಡಿದ್ದಾರೆ.
ಕೆಲವು ದೇಶಗಳು ತಮ್ಮ ಧ್ವಜದಲ್ಲಿ ಚಂದ್ರನನ್ನು ಹೊಂದಿವೆ. ಆದರೆ, ಇನ್ನೂ ಕೆಲ ದೇಶಗಳು ಚಂದ್ರನಲ್ಲಿ ತಮ್ಮ ಧ್ವಜ ನೆಟ್ಟಿವೆ ಎಂದು ಭಜ್ಜಿ ಟ್ವೀಟ್ ಮಾಡಿದ್ದಾರೆ.
ಹರ್ಭಜನ್ ಟ್ವೀಟ್ನಲ್ಲಿ ಪಾಕಿಸ್ತಾನ, ಅಲ್ಜೀರಿಯಾ, ಟರ್ಕಿ, ಮಾಲ್ಡೀವ್ಸ್,ಮೌರಿಟೇನಿಯಾ, ಟ್ಯುನೀಷಿಯಾ, ಲಿನಿಯಾ, ಮಲೇಷಿಯಾ ಹಾಗೂ ಅಜೆರ್ಬೈಜಾನ್ ದೇಶಗಳ ಧ್ವಜವನ್ನು ಟ್ವೀಟ್ನಲ್ಲಿ ಉಲ್ಲೇಖಿಸಿದ್ದು, ಈ ದೇಶಗಳ ಧ್ವಜದಲ್ಲಿ ಮಾತ್ರ ಚಂದ್ರನಿದ್ದಾನೆ ಎಂದಿದ್ದಾರೆ.
ಮತ್ತೊಂದೆಡೆ ಭಾರತ, ಅಮೆರಿಕ, ಚೀನಾ ಹಾಗೂ ರಷ್ಯಾ ದೇಶಗಳ ಧ್ವಜವನ್ನು ಉಲ್ಲೇಖ ಮಾಡಿ ಈ ದೇಶಗಳ ಧ್ವಜ ಚಂದ್ರನಲ್ಲಿದೆ ಎಂದಿದ್ದಾರೆ.