ಕರ್ನಾಟಕ

karnataka

ETV Bharat / sports

ಕೋಟಿ ಬೆಲೆಗೆ ಹರಾಜುಗೊಂಡ ವಿಶ್ವಕಪ್​ ಫೈನಲ್​​ನಲ್ಲಿ ಧೋನಿ ಆಡಿದ ರೀಬಾಕ್​ ಬ್ಯಾಟ್​!

28 ವರ್ಷಗಳ ನಂತರ ವಿಶ್ವಕಪ್​ ಗೆದ್ದ ಭಾರತ ತಂಡದ ನಾಯಕನಾಗಿದ್ದ ಎಂಎಸ್​ ಧೋನಿ ಫೈನಲ್​ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಆಡಿದ್ದ ಬ್ಯಾಟ್​ 1.1 ಕೋಟಿಗೆ ಹರಾಜುಗೊಂಡಿದೆ.

Guinness Book

By

Published : Apr 4, 2019, 8:09 PM IST

ಮುಂಬೈ: ಶ್ರೀಲಂಕಾ ವಿರುದ್ಧ ಐಸಿಸಿ ಏಕದಿನ ವಿಶ್ವಕಪ್​ ಫೈನಲ್​ನಲ್ಲಿ ಧೋನಿ ಬ್ಯಾಟಿಂಗ್​ ನಡೆಸಿದ ರೀಬಾಕ್​ ಬ್ಯಾಟ್​ ಬರೋಬ್ಬರಿ 1.1 ಕೋಟಿಗೆ ಹರಾಗೊಳ್ಳುವ ಮೂಲಕ ಗಿನ್ನೆಸ್ ರೆಕಾರ್ಡ್​ಗೆ ಸೇರಿಕೊಂಡಿದೆ.

2011 ರ ವಿಶ್ವಕಪ್​ ಫೈನಲ್​ನಲ್ಲಿ 85 ಎಸೆತಗಳಲ್ಲಿ 91 ರನ್​ಗಳಿಸಿ ಭಾರತಕ್ಕೆ 28 ವರ್ಷಗಳ ನಂತರ ವಿಶ್ವಕಪ್​ ತಂದುಕೊಟ್ಟಿದ್ದರು. ನುವಾನ್ ಕುಲಶೇಖರ್​ ಓವರ್​ನಲ್ಲಿ ಧೋನಿ ಸಿಕ್ಸರ್​ಗಟ್ಟಿ ಗೆಲುವಿನ ರನ್​ ಬಾರಿಸಿದ್ದರು.

2011ರಲ್ಲಿ ಲಂಡನ್​​ನಲ್ಲಿ ನಡೆದ ಹರಾಜು ಪ್ರತಿಕ್ರಿಯೆಯಲ್ಲಿ ಆರ್ ಕೆ ಗ್ಲೋಬಾಲ್ ಶೇರ್ಸ್ ಅಂಡ್ ಸೆಕ್ಯೂರಿಟಿ ಲಿಮಿಟೆಡ್ ಕಂಪನಿ ಈ ಬ್ಯಾಟ್​ ಖರೀದಿಸಿತ್ತು. ಇದೀಗ ಧೋನಿಯ ಆ ರೀಬಾಕ್ ಬ್ಯಾಟ್ 1,61,295 ಯುಎಸ್ ಡಾಲರ್ (ಸುಮಾರು 1.1 ಕೋಟಿ ರೂ.) ಗಳಿಗೆ ಹರಾಜುಗೊಳ್ಳುವ ಮೂಲಕ ಧೋನಿಯ ಬ್ಯಾಟ್​ ವಿಶ್ವದ ಅತ್ಯಂತ ದುಬಾರಿ ಬ್ಯಾಟ್​ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಹರಾಜಿನಿಂದ ಬಂದ ಹಣವನ್ನು ಭಾರತದಲ್ಲಿರುವ ಅನಾಥ ಮಕ್ಕಳ ಅಭಿವೃದ್ಧಿಗೆ ಬಳಕೆ ಮಾಡಲು ವಿನಿಯೋಗಿಸಲಾಗುತ್ತದೆ ಎಂಬ ಮಾಹಿತಿ ತಿಳಿದು ಬಂದಿದೆ.

ಏಪ್ರಿಲ್ 2, 2011 ರಂದು ನಡೆದ ಫೈನಲ್ ಪಂದ್ಯದಲ್ಲಿ ಧೋನಿ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಸಿಕ್ಸರ್ ಸಿಡಿಸಿ ಭಾರತಕ್ಕೆ ವಿಶ್ವಕಪ್​ ಗೆದ್ದುಕೊಟ್ಟಿದ್ದರು. ಈ ಮೂಲಕ ಭಾರತ 28 ವರ್ಷಗಳ ಬಳಿಕ ವಿಶ್ವಕಪ್‍ಗೆ ಮುತ್ತಿಟ್ಟಿತ್ತು. ಈ ಸಾಧನೆಗೆ ಸದ್ಯ 8 ವರ್ಷ ಪೂರ್ಣಗೊಂಡಿದ್ದು, ಈ ವೇಳೆಯೇ ಒಂದು ವಿಶೇಷ ಸಾಧನೆಯನ್ನು ಗಿನ್ನಿಸ್ ಬುಕ್ ಆಫ್ ವರ್ಲ್ಡ್​ ರೆಕಾರ್ಡ್​ಮತ್ತೊಮ್ಮೆ ರಿವೀಲ್​ ಮಾಡಿದೆ.

ABOUT THE AUTHOR

...view details