ಕರ್ನಾಟಕ

karnataka

ETV Bharat / sports

ಧೋನಿ - ರೋಹಿತ್​ ಇದ್ದಿದ್ರಿಂದಲೇ  ಯಶಸ್ವಿ ನಾಯಕ ಅನ್ನಿಸ್ಕೊಂಡ್ರು... ಇಲ್ಲಾಂದ್ರೆ RCB ಗತಿ ಆಗ್ತಿತ್ತು!

ಭಾರತದ ಮಾಜಿ ಆಟಗಾರ ಗಂಭೀರ್​ಗೂ ಪ್ರಸ್ತುತ ಭಾರತ ತಂಡದ ನಾಯಕ ವಿರಾಟ್​ ಕೊಹ್ಲಿ ನಡುವಣ ಮನಸ್ಥಾಪ ಮುಗಿಯುತ್ತಿಲ್ಲ. ದಶಕಗಳ ಹಿಂದಿನಿಂದಲೂ ಇವರಿಬ್ಬರ ನಡುವೆ ಕೋಳಿ ಜಗಳ ನಡೆಯುತ್ತಲೇ ಇದೆ. ಇದೀಗ ಕೊಹ್ಲಿ ಯಶಸ್ವಿ ನಾಯಕನಾಗಲು ಬೇರೆಯವರನ್ನು ಅವಲಂಬಿಸಿದ್ದಾರೆ ಎಂದು ಗಂಭೀರ್​ ಹೇಳಿಕೆ ನೀಡುವ ಮೂಲಕ ವಿವಾದ ಎಬ್ಬಿಸಿದ್ದಾರೆ.

Gautam Gambhir

By

Published : Sep 21, 2019, 2:59 PM IST

ನವದೆಹಲಿ: ಭಾರತದ ಮಾಜಿ ಆಟಗಾರ ಗಂಭೀರ್​ಗೂ ಪ್ರಸ್ತುತ ಭಾರತ ತಂಡದ ನಾಯಕ ವಿರಾಟ್​ ಕೊಹ್ಲಿ ನಡುಣ ಮುಸುಕಿನ ಗುದ್ದಾಟ ಮುಂದುವರೆದಿದೆ. ದಶಕಗಳ ಹಿಂದಿನಿಂದಲೂ ಇವರಿಬ್ಬರ ನಡುವೆ ಕೋಳಿ ಜಗಳ ನಡೆಯುತ್ತಲೇ ಇದೆ. ಇದೀಗ ಕೊಹ್ಲಿ ಯಶಸ್ವಿ ನಾಯಕನಾಗಲು ಬೇರೆಯವರನ್ನು ಅವಲಂಬಿಸಿದ್ದಾರೆ ಎಂದು ಗಂಭೀರ್​ ಹೇಳಿಕೆ ನೀಡುವ ಮೂಲಕ ವಿವಾದ ಎಬ್ಬಿಸಿದ್ದಾರೆ.

ಇಬ್ಬರು ದೆಹಲಿಯಿಂದಲೇ ಬಂದವರಾದರೂ ಯಾಕೋ ಇಬ್ಬರೂ ಹಾವು ಮುಂಗಿಸಿಯಂತಾಗಿದ್ದಾರೆ. ಕೊಹ್ಲಿ - ಗಂಭೀರ್​ ತಂಟೆಗೆ ಹೋಗದಿದ್ದರೂ ಗಂಭೀರ್​ ಮಾತ್ರ ಕೊಹ್ಲಿ ಯಶಸ್ಸನ್ನು ಹೊಗಳುವ ಮನಸ್ಸು ಮಾಡುತ್ತಿಲ್ಲ. ಆದರೆ, ಇದೀಗ ಭಾರತ ತಂಡದ ಯಶಸ್ವಿ ನಾಯಕನಾಗಿ ದಾಖಲೆಗಳ ಮೇಲೆ ದಾಖಲೆ ಬರೆಯುತ್ತಿದ್ದರೂ, ಕೊಹ್ಲಿ ಸಾಧನೆಯ ಹಿಂದೆ ಎಂಎಸ್​ ಧೋನಿ ಹಾಗೂ ರೋಹಿತ್​ ಇರುವುದರಿಂದಲೇ ಅವರೊಬ್ಬ ಯಶಸ್ವಿ ನಾಯಕ ಎನಿಸಿಕೊಳ್ಳುತ್ತಿದ್ದಾರೆ ಎಂದು ಹೇಳುವ ಮೂಲಕ ಮತ್ತೊಮ್ಮೆ ವಿರಾಟ್​ ವಿರುದ್ಧ ಹೇಳಿಕೆ ನೀಡಿದ್ದಾರೆ.

ಪ್ರಸ್ತುತ ಎಲ್ಲಾ ವಿಭಾಗದ ಕ್ರಿಕೆಟ್​ನಲ್ಲಿ ನಾಯಕನ ಜವಾಬ್ದಾರಿ ವಹಿಸಿರುವ ವಿರಾಟ್ ಕೊಹ್ಲಿ, ನಾಯಕತ್ವದಲ್ಲಿ ದ್ರಾವಿಡ್​, ಗಂಗೂಲಿ ಹಾಗೂ ಧೋನಿಯನ್ನು ಮೀರಿಸಿದ್ದಾರೆ. ಆದರೆ, ಕೊಹ್ಲಿ ಯಶಸ್ವಿ ನಾಯಕನಾಗಲು ಎಂ.ಎಸ್.ಧೋನಿ ಮತ್ತು ರೋಹಿತ್ ಶರ್ಮಾ ಕಾರಣ. ಧೋನಿ-ರೋಹಿತ್ ಇಲ್ಲದೇ ಇದ್ರೆ ಕೊಹ್ಲಿ ನಾಯಕನಾಗಿ ಈ ಮಟ್ಟಕ್ಕೆ ಬೆಳೆಯುತ್ತಿರಲಿಲ್ಲ ಎಂದು ಗಂಭೀರ್​ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇಷ್ಟೇ ಅಲ್ಲದೆ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಳ್ಳುವುದಕ್ಕೆ ಗಂಭೀರ್​ ಉದಾಹರಣೆ ನೀಡಿದ್ದು ಕೊಹ್ಲಿಯ ಐಪಿಎಲ್​ ನಾಯಕತ್ವದ ಉದಾಹರಣೆ ನೀಡಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಕೊಹ್ಲಿ ನಾಯಕನಾಗಿ ಸಕ್ಸಸ್​ ಕಾಣುತ್ತಿರುವುದಕ್ಕೆ, ರೋಹಿತ್ ಶರ್ಮಾ ಮತ್ತು ಮಹೇಂದ್ರ ಸಿಂಗ್ ಧೋನಿ ಕಾರಣ. ಆದ್ರೆ ಐಪಿಎಲ್​ನಲ್ಲಿ ಆರ್​ಸಿಬಿ ನಾಯಕನಾಗಿ ಕೊಹ್ಲಿ ಯಾಕೆ ಯಶಸ್ಸು ಕಾಣಲಿಲ್ಲ.? ಯಾಕಂದ್ರೆ ಆರ್​ಸಿಬಿ ತಂಡದಲ್ಲಿ ರೋಹಿತ್-ಧೋನಿ ಇಲ್ಲ ಅದಕ್ಕೆ ಎಂದಿದ್ದಾರೆ.

ಫ್ರಾಂಚೈಸಿ ತಂಡವನ್ನು ಮುನ್ನಡೆಸುವಾಗ ನಾಯಕತ್ವದ ನೈಜ ಪರೀಕ್ಷೆಯಾಗಲಿದೆ. ಯಾಕೆಂದರೆ ಅಲ್ಲಿ ನಾಯಕನನ್ನು ಬೆಂಬಲಿಸಲು ರೋಹಿತ್​-ಧೋನಿಯಂತಹ ಸ್ಟಾರ್​ ಆಟಗಾರರ ನೆರವು ಸಿಗಲಾರದು. ಮುಂಬೈ ಇಂಡಿಯನ್ಸ್‌ನಲ್ಲಿ ರೋಹಿತ್ ಶರ್ಮಾ, ಚೆನ್ನೈ ಸೂಪರ್ ಕಿಂಗ್ಸ್‌ನಲ್ಲಿ ಮಹೇಂದ್ರ ಸಿಂಗ್ ಧೋನಿ ಗಳಿಸಿರುವ ಸಾಧನೆಯನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಜೊತೆಗೆ ಹೋಲಿಕೆ ಮಾಡಲು ಸಾಧ್ಯವಿಲ್ಲ ಎಂದಿರುವ ಗಂಭೀರ್, ​ ಕೊಹ್ಲಿ ನಾಯಕತ್ವದಲ್ಲಿ ಇನ್ನಷ್ಟು ಪಳಗಬೇಕು ಎಂಬುದನ್ನು ಮಾರ್ಮಿಕವಾಗಿ ತಿಳಿಸಿದ್ದಾರೆ.

ABOUT THE AUTHOR

...view details