ನವದೆಹಲಿ:ಶ್ರೀಮಂತ ಕ್ರಿಕೆಟ್ ಲೀಗ್ನಲ್ಲಿ ಆಡುವುದಕ್ಕೆ ವಿಶ್ವದ ನಾನಾ ರಾಷ್ಟ್ರಗಳ ಕ್ರಿಕೆಟಿಗರು ಮುಂದೆ ಬರುತ್ತಿದ್ದಾರೆ. ಮೊದಲು ಐಪಿಎಲ್ ಎಂದರೆ ಮೂಗು ಮುರಿದಿದ್ದ ಇಂಗ್ಲೆಂಡ್ ತಂಡದೇ ಬಹುಪಾಲು ಆಟಗಾರರು ಐಪಿಎಲ್ನ ಭಾಗವಾಗುತ್ತಿದ್ದಾರೆ. ಆದರೆ ಕೆಲವು ಆಟಗಾರರು ಐಪಿಎಲ್ನಲ್ಲಿ ಅವಕಾಸ ಸಿಕ್ಕರೂ ಕೆಲವು ನಿಯಮ ಹಾಗೂ ತಂಡ ಆಯ್ಕೆಯ ಗೊಂದಲಗಳಿಂದ ಕಡೆಗಣಿಸಲ್ಪಡುತ್ತಿದ್ದಾರೆ.
ಭಾರತ ತಂಡದ ಮಾಜಿ ಆರಂಭಿಕ ಬ್ಯಾಟ್ಸ್ಮನ್ ಗೌತಮ್ ಗಂಭೀರ್ ಪ್ರಕಾರ ಅಫ್ಘಾನಿಸ್ತಾನದ ಆಲ್ರೌಂಡರ್ ಮೊಹಮ್ಮದ್ ನಬಿ ಟಿ20 ಕ್ರಿಕೆಟ್ನಲ್ಲಿ ಕಡೆಗಣಿಸಲ್ಪಡುತ್ತಿರುವ ಆಟಗಾರ ಎಂದಿದ್ದಾರೆ.
ಮೊಹಮ್ಮದ್ ನಬಿ ಇತ್ತೀಚೆಗೆ ಮುಗಿದ ಕೆರಿಬಿಯನ್ ಪ್ರೀಮಿಯರ್ ಲೀಗ್ನಲ್ಲಿ ಸೇಂಟ್ ಲೂಸಿಯಾ ಜೌಕ್ಸ್ ಪರ 12 ವಿಕೆಟ್ ಹಾಗೂ 156 ರನ್ ಸಿಡಿಸುವ ಮೂಲಕ ತಂಡ ಫೈನಲ್ಗೇರಲು ಪ್ರಮುಖ ಪಾತ್ರವಹಿಸಿದ್ದರು. ಅವರು ಐಪಿಎಲ್ ಹೊರೆತುಪಡಿಸಿದರೆ ಪಿಎಸ್ಎಲ್, ಬಿಬಿಎಲ್ ಹಾಗೂ ಬಿಪಿಎಲ್ಗಳಲ್ಲಿ ಖಾಯಂ ಆಟಗಾರರಾಗಿದ್ದಾರೆ. ಆದರೆ 2017ರಲ್ಲಿ ಐಪಿಎಲ್ಗೆ ಪದಾರ್ಪಣೆ ಮಾಡಿದರೂ ಇನ್ನು ಸನ್ರೈಸರ್ಸ್ ತಂಡದಲ್ಲಿ ಖಾಯಂ ಹೆಚ್ಚು ಅವಕಾಸ ಸಿಗುತ್ತಿಲ್ಲ. ಅವರನ್ನು ಕಡೆಗಣಿಸಲಾಗುತ್ತಿದೆ ಎಂದು ಗಂಭೀರ್ ತಿಳಿಸಿದ್ದಾರೆ.