ಕರ್ನಾಟಕ

karnataka

ETV Bharat / sports

ಈ ಜೋಡಿಯಿಂದ ಭಾರತೀಯ ಕ್ರಿಕೆಟ್ ಉತ್ತುಂಗದ ಶಿಖರಕ್ಕೆ ಹೋಗುವುದು ಕನ್ಫರ್ಮ್​: ರಹಾನೆ - ಬಿಸಿಸಿಐ ಅಧ್ಯಕ್ಷ ಸೌರವ್​ ಗಂಗೂಲಿ

ಭಾರತೀಯ ಕ್ರಿಕೆಟ್​​ ಬರುವ ದಿನಗಳಲ್ಲಿ ಮತ್ತಷ್ಟು ಎತ್ತರದ ಮಟ್ಟಕ್ಕೆ ಹೋಗಲಿದೆ ಎಂದು ಹೇಳಿರುವ ಅಜಿಂಕ್ಯ ರಹಾನೆ, ಅದಕ್ಕೆ ಈ ಇಬ್ಬರು ವ್ಯಕ್ತಿಗಳು ಕಾರಣ ಎಂದು ಹೇಳಿದ್ದಾರೆ.

Ajinkya Rahane
ಅಜಿಂಕ್ಯ ರಹಾನೆ

By

Published : Jan 1, 2020, 5:34 PM IST

ಮುಂಬೈ: ಟೀಂ ಇಂಡಿಯಾ ಟೆಸ್ಟ್​​ನ ಉಪನಾಯಕ ಅಜಿಂಕ್ಯ ರಹಾನೆ ಭಾರತೀಯ ಕ್ರಿಕೆಟ್​ ಭವಿಷ್ಯದ ಬಗ್ಗೆ ಮಾತನಾಡಿದ್ದು, ಈ ಇಬ್ಬರಿಂದ ಇಂಡಿಯನ್​ ಕ್ರಿಕೆಟ್ ಬರುವ ದಿನಗಳಲ್ಲಿ​ ಉತ್ತುಂಗದ ಶಿಖರಕ್ಕೆ ಏರಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಬಿಸಿಸಿಐ ಅಧ್ಯಕ್ಷ ಸೌರವ್​ ಗಂಗೂಲಿ ಹಾಗೂ ಇಂಡಿಯಾ ಎನ್​​ಸಿಎ ಅಧ್ಯಕ್ಷ​ ರಾಹುಲ್​ ದ್ರಾವಿಡ್​ ಭಾರತೀಯ ಕ್ರಿಕೆಟ್​​ನ್ನ ಯಾರು ಊಹೇ ಮಾಡದಂತಹ ಎತ್ತರಕ್ಕೆ ತೆಗೆದುಕೊಂಡು ಹೋಗಲಿದ್ದಾರೆ ಎಂದು ತಿಳಿಸಿದ್ದಾರೆ.

ಗಂಗೂಲಿ, ದ್ರಾವಿಡ್​​

ಮುಂದಿನ ತಿಂಗಳು ಟೀಂ ಇಂಡಿಯಾ ನ್ಯೂಜಿಲ್ಯಾಂಡ್​ ವಿರುದ್ಧ ಎರಡು ಟೆಸ್ಟ್​​ ಪಂದ್ಯ, ಮೂರು ಏಕದಿನ ಹಾಗೂ ಐದು ಟಿ-20 ಪಂದ್ಯಗಳಲ್ಲಿ ಭಾಗಿಯಾಗಲಿದ್ದು, ಅದಕ್ಕೂ ಮುಂಚಿತವಾಗಿ ರಹಾನೆ ತಮ್ಮ ಮನದಾಳದ ಮಾತು ಹೊರಹಾಕಿದ್ದಾರೆ.

ದಾದಾ ಹಾಗೂ ರಾಹುಲ್​ ಬಾಯ್ ಇಬ್ಬರು ಭಾರತೀಯ ಕ್ರಿಕೆಟ್​ಗೆ ಒಟ್ಟಿಗೆ ಶ್ರಮ ವಹಿಸಿ ದುಡಿಯುತ್ತಿದ್ದು, 2014ರಿಂದ ಇತ್ತೀಚಿನ ದಿನಗಳಲ್ಲಿ ತಂಡ ಸದೃಢಗೊಂಡಿದೆ ಎಂದು ತಿಳಿಸಿದರು. ಇದೇ ವೇಳೆ, ತಂಡದ ಕ್ಯಾಪ್ಟನ್​ ವಿರಾಟ್​ ಕೊಹ್ಲಿ ಕೋಚ್​ ರವಿಶಾಸ್ತ್ರಿ ಡ್ರೆಸ್ಸಿಂಗ್​ ರೂಂನಲ್ಲಿನ ವಾತಾವರಣ ಸಂಪೂರ್ಣವಾಗಿ ಚೇಂಜ್​ ಮಾಡಿದ್ದು, ಎಲ್ಲರೂ ಸಮಾನ ರೀತಿಯಲ್ಲಿ ವಿಚಾರ ಮಾಡುವಂತೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.​

ABOUT THE AUTHOR

...view details