ಸಿಡ್ನಿ:ಐಸಿಸಿ ಏಕದಿನ ವಿಶ್ವಕಪ್ ತಂಡದ ಕ್ಯಾಪ್ಟನ್ ಆಗಿದ್ದ ಮೈಕಲ್ ಕ್ಲಾರ್ಕ್ ಹಾಗೂ ಹೆಂಡತಿ ಕೈಲಿ ಇದೀಗ ಬೇರೆ ಬೇರೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಗುಡ್ಬೈ ಹೇಳಲು ಮುಂದಾಗಿದ್ದಾರೆ. 2012ರಲ್ಲಿ ಮದುವೆಯಾಗಿದ್ದ ಈ ಜೋಡಿ ಇದೀಗ ಬೇರೆ ಬೇರೆ ವಾಸ ಮಾಡಲು ನಿರ್ಧರಿಸಿದೆ.
ಹೆಂಡ್ತಿಗೆ ವಿಚ್ಛೇದನ ನೀಡಿದ ವಿಶ್ವಕಪ್ ವಿಜೇತ ತಂಡದ ಕ್ಯಾಪ್ಟನ್... ಏಳೇ ವರ್ಷಕ್ಕೆ ದಾಂಪತ್ಯದಲ್ಲಿ ಬಿರುಕು!
ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ಕ್ಯಾಪ್ಟನ್ ಮೈಕಲ್ ಕ್ಲಾರ್ಕ್ ದಾಂಪತ್ಯ ಜೀವನದಲ್ಲಿ ಬಿರುಕು ಬಿಟ್ಟಿದ್ದು, ಇದೀಗ ಹೆಂಡತಿಗೆ ವಿಚ್ಛೇದನ ನೀಡಲು ನಿರ್ಧರಿಸಿದ್ದಾರೆ.
2015ರಲ್ಲಿ ಆಸ್ಟ್ರೇಲಿಯಾ ವಿಶ್ವಕಪ್ ಗೆಲುವಿನ ತಂಡದ ಕ್ಯಾಪ್ಟನ್ ಆಗಿದ್ದ ಇವರು, 115 ಟೆಸ್ಟ್, 245 ಏಕದಿನ ಹಾಗೂ 34 ಟಿ-20 ಪಂದ್ಯಗಳಲ್ಲಿ ಭಾಗಿಯಾಗಿದ್ದಾರೆ. 2012ರಲ್ಲಿ ಕೈಲಿ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಕ್ಲಾರ್ಕ್ಗೆ ಐದು ವರ್ಷದ ಮಗಳಿದ್ದಾಳೆ.
ಮಾಡೆಲ್ ಹಾಗೂ ಟಿವಿ ನಿರೂಪಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಕೈಲಿ ಇದೀಗ ತಾವು ಕ್ಲಾರ್ಕ್ ಅವರಿಂದ ಬೇರೆಯಾಗುತ್ತಿರುವುದಾಗಿ ತಿಳಿಸಿದ್ದು, ಇಬ್ಬರ ನಡುವೆ ಮಾತುಕತೆ ನಡೆದ ಬಳಿಕ ಈ ನಿರ್ಧಾರ ಕೈಗೊಂಡಿರುವುದಾಗಿ ಮಾಹಿತಿ ನೀಡಿದ್ದಾರೆ. ವಿಚ್ಛೇದನ ಪಡೆದುಕೊಳ್ಳುವ ಮೊದಲು ಇಬ್ಬರ ನಡುವೆ ಹಣಕಾಸಿನ ಹೊಂದಾಣಿಕೆ ಸಹ ನಡೆಯಲಿದೆ ಎಂದು ತಿಳಿದು ಬಂದಿದೆ.