ಮುಂಬೈ:ರಿಷಭ್ ಪಂತ್ ಮುಂಬರುವ ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಹೆಚ್ಚುವರಿಯಾಗಿ ಬಂದಿರುವ ನಾಯಕತ್ವದ ಜವಾಬ್ದಾರಿಯನ್ನು ಆನಂದಿಸಲಿದ್ದಾರೆ ಎಂದು ಮುಖ್ಯ ಕೋಚ್ ರಿಕಿ ಪಾಂಟಿಂಗ್ ಭಾವಿಸಿದ್ದಾರೆ.
ಖಾಯಂ ನಾಯಕ ಶ್ರೇಯಸ್ ಅಯ್ಯರ್ ಇಂಗ್ಲೆಂಡ್ ವಿರುದ್ಧದ ಸರಣಿ ವೇಳೆ ಭುಜದ ಗಾಯದಿಂದ ಹೊರಬಿದ್ದ ಹಿನ್ನಲೆ ಡೆಲ್ಲಿ ಕ್ಯಾಪಿಟಲ್ಸ್ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ರಿಷಭ್ ಪಂತ್ರನ್ನು ನಾಯಕನನ್ನಾಗಿ ನೇಮಿಸಿದೆ.
" ಹೆಚ್ಚುವರಿ ಜವಾಬ್ದಾರಿ ಅವರೊಂದಿಗೆ ಚೆನ್ನಾಗಿ ಹೊಂದಿಕೊಳ್ಳಲಿದೆ ಎಂದು ನಾನು ಭಾವಿಸುತ್ತೇನೆ. ಪಂತ್ ಜವಾಬ್ದಾರಿಯನ್ನು ಇಷ್ಟಪಡುವ, ಮುಖ್ಯ ವ್ಯಕ್ತಿಯಾಗಲು ಬಯಸುವ ಮತ್ತು ನಾಯಕನಾಗಲು ಬಯಸುವ ವ್ಯಕ್ತಿಯಾಗಿದ್ದಾರೆ. ಆದ್ದರಿಂದ ನಾನೂ ಕೂಡ ಅವರು ಈ ಹೇಗೆ ನಾಯಕನಾಗಿ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ನೋಡಲು ನಿಜವಾಗಿಯೂ ಉತ್ಸುಕನಾಗಿದ್ದೇನೆ " ಎಂದು ರಿಕಿ ಪಾಂಟಿಂಗ್ ತಿಳಿಸಿದ್ದಾರೆ.