ಕರ್ನಾಟಕ

karnataka

ETV Bharat / sports

ಟಿ-20 ಕ್ರಿಕೆಟ್: 100ನೇ ಪಂದ್ಯವಾಡಿ ಮಾರ್ಗನ್ ವಿನೂತನ ದಾಖಲೆ - Eoin Morgan

ಭಾರತದ ಪರ ಮೂರನೇ ಟಿ-20 ಪಂದ್ಯವನ್ನಾಡುವ ಮೂಲಕ ಆಂಗ್ಲರ ತಂಡದ ಕ್ಯಾಪ್ಟನ್​ ಮಾರ್ಗನ್​ ಹೊಸ ದಾಖಲೆ ನಿರ್ಮಾಣ ಮಾಡಿದ್ದಾರೆ.

Eoin Morgan
Eoin Morgan

By

Published : Mar 16, 2021, 8:22 PM IST

ಅಹಮದಾಬಾದ್​:ಇಂಗ್ಲೆಂಡ್​ ತಂಡದ ನಿಗದಿತ ಓವರ್​ಗಳ ಕ್ಯಾಪ್ಟನ್​​ ಇಯಾನ್ ಮಾರ್ಗನ್​​ ಮತ್ತೊಂದು ದಾಖಲೆ ನಿರ್ಮಾಣ ಮಾಡಿದ್ದು, ಇಂಗ್ಲೆಂಡ್​ ತಂಡದ ಪರ 100 ಟಿ-20 ಪಂದ್ಯಗಳನ್ನಾಡಿರುವ ಮೊದಲ ಕ್ರಿಕೆಟ್​ ಪ್ಲೇಯರ್​ ಎಂಬ ರೆಕಾರ್ಡ್​ ಬರೆದಿದ್ದಾರೆ.

ಅಹಮದಾಬಾದ್​ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾರತದ ವಿರುದ್ಧ ನಾಲ್ಕನೇ ಟಿ-20 ಪಂದ್ಯದಲ್ಲಿ ಈ ದಾಖಲೆ ನಿರ್ಮಾಣ ಮಾಡಿದ್ದಾರೆ. ಇದರ ಜತೆಗೆ ನ್ಯೂಜಿಲ್ಯಾಂಡ್​ ತಂಡದ ರಾಸ್ ಟೇಲರ್​, ಪಾಕಿಸ್ತಾನ ಕ್ರಿಕೆಟರ್ ಶೋಯೆಬ್​ ಮಲಿಕ್​ ಹಾಗೂ ಟೀಂ ಇಂಡಿಯಾ ಆರಂಭಿಕ ರೋಹಿತ್​ ಶರ್ಮಾ ದಾಖಲೆ ಸರಿಗಟ್ಟಿದ್ದಾರೆ. ಟಿ-20 ಕ್ರಿಕೆಟ್​ನಲ್ಲಿ ಮಾರ್ಗನ್​​ 2,306 ರನ್​ಗಳಿಕೆ ಮಾಡಿದ್ದು, ಇದರಲ್ಲಿ 14 ಅರ್ಧಶತಕ ಸೇರಿಕೊಂಡಿವೆ.

ಇದನ್ನೂ ಓದಿ: ಕೆ.ಎಲ್‌.ರಾಹುಲ್‌ ಸತತ ಬ್ಯಾಟಿಂಗ್‌ ವೈಫಲ್ಯ: ನಾಲ್ಕು ಇನ್ನಿಂಗ್ಸ್​​ನಲ್ಲಿ 3 ಸಲ ಶೂನ್ಯಕ್ಕೆ ಔಟ್​

34 ವರ್ಷದ ಮಾರ್ಗನ್​ ಈ ಸಾಧನೆ ಮಾಡಿರುವ 4ನೇ ಪ್ಲೇಯರ್​​ ಆಗಿದ್ದು, ಪಾಕಿಸ್ತಾನದ ಮಲಿಕ್​ ಟಿ-20 ಕ್ರಿಕೆಟ್​ನಲ್ಲಿ ಅತಿ ಹೆಚ್ಚು 116 ಪಂದ್ಯಗಳನ್ನಾಡಿದ್ದು, ರೋಹಿತ್​ ಶರ್ಮಾ 109 ಪಂದ್ಯಗಳಲ್ಲಿ ಭಾಗಿಯಾಗಿದ್ದಾರೆ.

ABOUT THE AUTHOR

...view details