ಕರ್ನಾಟಕ

karnataka

ETV Bharat / sports

ಭಾರತ ವಿರುದ್ಧದ ಮೊದಲೆರಡು ಟೆಸ್ಟ್​ ಪಂದ್ಯಗಳಿಗೆ 16 ಸದಸ್ಯರ ಬಲಿಷ್ಠ ತಂಡ ಪ್ರಕಟಿಸಿದ ಇಸಿಬಿ

ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಭಾಗವಾಗಿರುವ ಈ ಟೂರ್ನಿ ಫೆಬ್ರವರಿ 5ರಿಂದ ಚೆನ್ನೈನ ಎಂ.ಚಿದಂಬರಂ ಕ್ರೀಡಾಂಗಣದಲ್ಲಿ ಆರಂಭವಾಗಲಿದೆ. ಮೊದಲ ಎರಡು ಟೆಸ್ಟ್​ ಪಂದ್ಯಗಳು ಇಲ್ಲೇ ನಡೆಯಲಿವೆ.

ಇಂಗ್ಲೆಂಡ್​ vs ಭಾರತ ಟೆಸ್ಟ್​
ಇಂಗ್ಲೆಂಡ್​ vs ಭಾರತ ಟೆಸ್ಟ್​

By

Published : Jan 21, 2021, 8:57 PM IST

ಲಂಡನ್​: ಭಾರತ ತಂಡದ ವಿರುದ್ಧ ಫೆಬ್ರವರಿಯಲ್ಲಿ ನಡೆಯಲಿರುವ ಟೆಸ್ಟ್ ಸರಣಿಯ ಮೊದಲೆರಡು ಪಂದ್ಯಗಳಿಗೆ ಇಂಗ್ಲೆಂಡ್ ಮತ್ತು ವೇಲ್ಸ್​ ಕ್ರಿಕೆಟ್​ ಬೋರ್ಡ್​ 16 ಸದಸ್ಯರ ಬಲಿಷ್ಠ ಇಂಗ್ಲೆಂಡ್​ ತಂಡವನ್ನು ಪ್ರಕಟಿಸಿದೆ.

ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಭಾಗವಾಗಿರುವ ಈ ಟೂರ್ನಿ ಫೆಬ್ರವರಿ 5ರಿಂದ ಚೆನ್ನೈನ ಎಂ.ಚಿದಂಬರಂ ಕ್ರೀಡಾಂಗಣದಲ್ಲಿ ಆರಂಭವಾಗಲಿದೆ. ಮೊದಲ ಎರಡು ಟೆಸ್ಟ್​ ಪಂದ್ಯಗಳು ಇಲ್ಲೇ ನಡೆಯಲಿವೆ.

ಶ್ರೀಲಂಕಾ ವಿರುದ್ಧದ ಟೆಸ್ಟ್​ ಸರಣಿಯಲ್ಲಿ ವಿಶ್ರಾಂತಿ ಪಡೆದಿದ್ದ ಜೋಫ್ರಾ ಆರ್ಚರ್, ಬೆನ್​ ಸ್ಟೋಕ್ಸ್​ ಹಾಗೂ ಪಿತೃತ್ವ ರಜೆ ಪಡೆದಿದ್ದ ರೋನಿ ಬರ್ನ್ಸ್​ ತಂಡಕ್ಕೆ ಮರಳಿದ್ದಾರೆ. ಇನ್ನು ಸರ್ರೆ ತಂಡದ ಓಲಿ ಪೋಪ್​ ಫಿಟ್​ನೆಸ್ ಪರೀಕ್ಷೆಯಲ್ಲಿ ತೇರ್ಗಡೆಯಾದರೆ ಮಾತ್ರ ಭಾರತಕ್ಕೆ ಪ್ರವಾಸ ಮಾಡಲಿದ್ದಾರೆ. ಅವರು ಪಾಕಿಸ್ತಾನ ವಿರುದ್ಧದ ಸರಣಿ ವೇಳೆ ಭುಜದ ಗಾಯಕ್ಕೆ ಒಳಗಾಗಿದ್ದರು.

ಇನ್ನು ಪ್ರಸ್ತುತ ಶ್ರೀಲಂಕಾ ಪ್ರವಾಸದಲ್ಲಿರುವ ಸ್ಯಾಮ್ ಕರ್ರನ್, ಜಾನಿ ಬೈರ್ಸ್ಟೋವ್​ ಹಾಗೂ ಮಾರ್ಕ್​ವುಡ್​ಗೆ ಮೊದಲ ಎರಡು ಟೆಸ್ಟ್​ ಪಂದ್ಯಗಳಿಗೆ ವಿಶ್ರಾಂತಿ ನೀಡಲಾಗಿದೆ.

16 ಸದಸ್ಯರ ಇಂಗ್ಲೆಂಡ್ ತಂಡ

ಜೋ ರೂಟ್ (ನಾಯಕ), ಜೋಫ್ರಾ ಆರ್ಚರ್, ಮೊಯೀನ್ ಅಲಿ, ಜೇಮ್ಸ್ ಆಂಡರ್ಸನ್, ಡೊಮ್ ಬೆಸ್, ಸ್ಟುವರ್ಟ್ ಬ್ರಾಡ್, ರೋರಿ ಬರ್ನ್ಸ್, ಜೋಸ್ ಬಟ್ಲರ್, ಜಾಕ್ ಕ್ರಾಲೆ, ಬೆನ್ ಫೋಕ್ಸ್, ಡಾನ್ ಲಾರೆನ್ಸ್, ಜ್ಯಾಕ್ ಲೀಚ್, ಡೊಮ್ ಸಿಬ್ಲಿ, ಬೆನ್ ಸ್ಟೋಕ್ಸ್, ಓಲಿ ಸ್ಟೋನ್, ಕ್ರಿಸ್ ವೋಕ್ಸ್.

ರಿಸರ್ವ್​ ಆಟಗಾರರು

ಜೇಮ್ಸ್ ಬ್ರೇಸಿ, ಮ್ಯಾಸನ್ ಕ್ರೇನ್ ಸಕಿಬ್ ಮಹಮೂದ್, ಮ್ಯಾಥ್ಯೂ ಪರ್ಕಿನ್ಸನ್, ಓಲಿ ರಾಬಿನ್ಸನ್, ಅಮರ್ ವಿರ್ಡಿ.

ABOUT THE AUTHOR

...view details