ಕರ್ನಾಟಕ

karnataka

ETV Bharat / sports

ಇಂಗ್ಲೆಂಡ್​ ಗೆಲುವಿಗೆ ಬೇಕು 8 ವಿಕೆಟ್​: ರೋಚಕ ಹಂತದಲ್ಲಿ ಕೊನೆಯ ಟೆಸ್ಟ್​ - ಜೇಮ್ಸ್​ ಆ್ಯಂಡರ್ಸನ್​ ವಿಶ್ವದಾಖಲೆ

ಮೊದಲ ಇನ್ನಿಂಗ್ಸ್​ನಲ್ಲಿ ಇಂಗ್ಲೆಂಡ್​ ತಂಡ 583 ರನ್​ಗಳಿಸಿ ನಿವೃತ್ತಿ ಘೋಷಿಸಿಕೊಂಡಿದೆ. ಇದಕ್ಕುತ್ತರವಾಗಿ ಮೊದಲ ಇನ್ನಿಂಗ್ಸ್​ನಲ್ಲಿ 273ಕ್ಕೆ ಆಲೌಟ್ ಆದ ಪಾಕ್​ ತಂಡ ಫಾಲೋಆನ್​ಗೂ ಗುರಿಯಾಗಿದೆ. ಇದೀಗ 310 ರನ್​ಗಳೊಂದಿಗೆ ಎರಡನೇ ಇನ್ನಿಂಗ್ಸ್​ ಆರಂಭಿಸಿದ ಪಾಕ್​ 100 ರನ್​ಗಳಿಸಿ 2 ವಿಕೆಟ್​ ಕಳೆದುಕೊಂಡಿದೆ.

ಇಂಗ್ಲೆಂಡ್​ - ಪಾಕಿಸ್ತಾನ 3ನೇ ಟೆಸ್ಟ್​
ಇಂಗ್ಲೆಂಡ್​ - ಪಾಕಿಸ್ತಾನ 3ನೇ ಟೆಸ್ಟ್​

By

Published : Aug 25, 2020, 1:55 PM IST

ಸೌತಾಂಪ್ಟನ್​:ಪಾಕಿಸ್ತಾನ ಮತ್ತು ಇಂಗ್ಲೆಂಡ್​ ನಡುವಿನ ಮೂರನೇ ಹಾಗೂ ಅಂತಿಮ ಟೆಸ್ಟ್​ ಬಹಳ ರೋಹತ ಹಂತಕ್ಕೆ ತಲುಪಿದ್ದು, ಅಂತಿಮ ದಿನ ಇಂಗ್ಲೆಂಡ್​ ಗೆಲ್ಲಲು 8ವಿಕೆಟ್ ಅಗತ್ಯವಿದ್ದರೆ, ಪಾಕ್​ ಡ್ರಾ ಸಾಧಿಸಲು ಹೋರಾಟ ನಡೆಸಲು ಸಜ್ಜಾಗಿದೆ.

ಮೊದಲ ಇನ್ನಿಂಗ್ಸ್​ನಲ್ಲಿ ಇಂಗ್ಲೆಂಡ್​ ತಂಡ 583 ರನ್​ಗಳಿಸಿ ನಿವೃತ್ತಿ ಘೋಷಿಸಿಕೊಂಡಿದೆ. ಇದಕ್ಕುತ್ತರವಾಗಿ ಮೊದಲ ಇನ್ನಿಂಗ್ಸ್​ನಲ್ಲಿ 273ಕ್ಕೆ ಆಲೌಟ್ ಆದ ಪಾಕ್​ ತಂಡ ಫಾಲೋಆನ್​ಗೂ ಗುರಿಯಾಗಿದೆ. ಇದೀಗ 310 ರನ್​ಗಳೊಂದಿಗೆ ಎರಡನೇ ಇನ್ನಿಂಗ್ಸ್​ ಆರಂಭಿಸಿದ ಪಾಕ್​ 100 ರನ್​ಗಳಿಸಿ 2 ವಿಕೆಟ್​ ಕಳೆದುಕೊಂಡಿದೆ.

ಇಂದು ಕೊನೆಯ ದಿನವಾಗಿದ್ದು ಇಂಗ್ಲೆಂಡ್ ತಂಡ ಗೆಲುವು ಸಾಧಿಸಲು ಪಾಕಿಸ್ತಾನದ ಉಳಿದ 8 ವಿಕೆಟ್​ ಪಡೆಯಬೇಕಿದೆ. ಆ್ಯಂಡರ್ಸನ್​ ಮತ್ತು ಸ್ಟುವರ್ಟ್​ ಬ್ರಾಡ್​ ಅತ್ಯುತ್ತಮ ಫಾರ್ಮ್​ನಲ್ಲಿರುವುದರಿಂದ ಗೆಲುವಿನ ಸಾಧ್ಯತೆ ಹೆಚ್ಚಿದೆ.

ಇನ್ನು ಪಾಕಿಸ್ತಾನ ಫಾಲೋ ಆನ್​ಗೆ ಒಳಗಾದ ಕಳೆದ ಎಲ್ಲಾ 10 ಟೆಸ್ಟ್​ಗಳಲ್ಲೂ ಸೋಲು ಕಂಡಿದೆ. ಕೊನೆಯ ದಿನ ಬೌಲರ್​ಗಳಿಗೆ ನೆರವು ನೀಡುವುದರಿಂದ ಪಾಕಿಸ್ತಾನಕ್ಕೆ ಸೋಲು ತಪ್ಪಿಸಿಕೊಳ್ಳಲು ಹರ ಸಾಹಸ ಪಡಬೇಕಿದೆ. ಈಗಾಗಲೆ 4 ನೇ ದಿನ ಮಳೆ ಹಾಗೂ ಮಂದಬೆಳಕು ಅಡ್ಡಪಡಿಸಿರುವುದರಿಂದ ಪಾಕಿಸ್ತಾನ 5ನೇ ದಿನವೂ ಕೂಡ ಇದೇ ವಾತಾವರಣವನ್ನು ಎದುರು ನೋಡುತ್ತಿದೆ.

ಆ್ಯಂಡರ್ಸನ್​ ವಿಶ್ವದಾಖಲೆಗೆ ಬೇಕು ಒಂದು ವಿಕೆಟ್:

ಇಂಗ್ಲೆಂಡ್ ತಂಡದ ಬೌಲರ್​ ಜೇಮ್ಸ್​ ಆ್ಯಂಡರ್ಸನ್ ಒಂದು ವಿಕೆಟ್​ ಪಡೆದರೆ ಟೆಸ್ಟ್​ ಕ್ರಿಕೆಟ್​ನಲ್ಲಿ 600 ವಿಕೆಟ್​ ಪಡೆದ ಮೊದಲ ಬೌಲರ್​ ಎಂಬ ವಿಶ್ವದಾಖಲೆಗೆ ಪಾತ್ರರಾಗಲಿದ್ದಾರೆ. ಕೊನೆಯ ದಿನವಾದ ಇಂದು ಅವರು ವಿಶ್ವದಾಖಲೆಯ ವಿಕೆಟ್​ ಯಾರಾಗಲಿದ್ದಾರೆ ಎಂಬುದು ಕುತೂಹಲಕಾರಿಯಾಗಿದೆ.

ABOUT THE AUTHOR

...view details