ಕರ್ನಾಟಕ

karnataka

ETV Bharat / sports

ಟೆಸ್ಟ್​​​ನಲ್ಲಿ ಸ್ಟುವರ್ಟ್​​ ಬ್ರಾಡ್ 500 ವಿಕೆಟ್​ ಸಾಧನೆ: ಬೆಳ್ಳಿ ಸ್ಟಂಪ್​ ನೀಡಿ ಗೌರವಿಸಿದ ಇಸಿಬಿ

ಟೆಸ್ಟ್​​ ಕ್ರಿಕೆಟ್​ನಲ್ಲಿ 500 ವಿಕೆಟ್​ ಸಾಧನೆ ಮಾಡಿರುವ ಇಂಗ್ಲೆಂಡ್​ ವೇಗಿ ಸ್ಟುವರ್ಟ್​ ಬ್ರಾಡ್​ ಅವರನ್ನು ಅಲ್ಲಿನ ಕ್ರಿಕೆಟ್​ ಮಂಡಳಿ ವಿಶೇಷವಾಗಿ ಗೌರವಿಸಿದೆ.

Stuart Broad
Stuart Broad

By

Published : Aug 21, 2020, 4:10 PM IST

ಸೌತಾಂಪ್ಟನ್​: ಇಂಗ್ಲೆಂಡ್​ ತಂಡದ ವೇಗಿ ಸ್ಟುವರ್ಟ್​​ ಬ್ರಾಡ್​​ ಟೆಸ್ಟ್​​​ ಕ್ರಿಕೆಟ್​ನಲ್ಲಿ 500 ವಿಕೆಟ್​ ಸಾಧನೆ ಮಾಡಿದ್ದು, ಇಂಗ್ಲೆಂಡ್​​ & ವೇಲ್ಸ್​​​ ಕ್ರಿಕೆಟ್​ ಬೋರ್ಡ್​(ಇಸಿಬಿ) ಅವರಿಗೆ ವಿಶೇಷ ಸ್ಮರಣಿಕೆ ನೀಡಿ ಗೌರವಿಸಿದೆ.

ಇಂದಿನಿಂದ ಪಾಕ್​​-ಇಂಗ್ಲೆಂಡ್​ ತಂಡಗಳ ನಡುವೆ ಮೂರನೇ ಹಾಗೂ ಅಂತಿಮ ಟೆಸ್ಟ್​​ ಕ್ರಿಕೆಟ್​ ಪಂದ್ಯ ಆರಂಭಗೊಂಡಿದೆ. ಅದಕ್ಕೂ ಮುಂಚಿತವಾಗಿ ಸ್ಟುವರ್ಟ್​ ಬ್ರಾಡ್​ಗೆ ಬೆಳ್ಳಿ ಸ್ಟಂಪ್​​ ನೀಡಿ ಗೌರವಿಸಲಾಗಿದೆ. ವೆಸ್ಟ್​ ಇಂಡೀಸ್​ ವಿರುದ್ಧದ ಮೂರನೇ ಟೆಸ್ಟ್​​ ಪಂದ್ಯದ ಕೊನೆಯ ದಿನ ಬ್ರಾಥ್​ವೈಟ್​ ವಿಕೆಟ್​ ಪಡೆದುಕೊಳ್ಳುವ ಮೂಲಕ ಅವರು 500 ವಿಕೆಟ್​ ಸಾಧನೆ ಮಾಡಿದ್ದಾರೆ.

ಟೆಸ್ಟ್​​ನಲ್ಲಿ 500 ವಿಕೆಟ್​ ಪಡೆದುಕೊಂಡಿರುವ ರೆಕಾರ್ಡ್​ ಈಗಾಗಲೇ ಇಂಗ್ಲೆಂಡ್​ನ ಮತ್ತೋರ್ವ ಬೌಲರ್​ ಜೇಮ್ಸ್ ಆ್ಯಂಡರ್ಸನ್​ ಹೆಸರಿನಲ್ಲಿದೆ.

142 ಟೆಸ್ಟ್​ ಪಂದ್ಯಗಳನ್ನಾಡಿರುವ ಬ್ರಾಡ್​ 261 ಇನ್ನಿಂಗ್ಸ್​ ಮೂಲಕ 511 ವಿಕೆಟ್​ ಪಡೆದಿದ್ದಾರೆ. ಇದರಲ್ಲಿ 18 ಸಲ 5 ವಿಕೆಟ್​​ ಗಳಿಸಿದ್ದು ಸಾಧನೆ ಮಾಡಿದ್ದಾರೆ. ಉಳಿದಂತೆ ಏಕದಿನ ಪಂದ್ಯಗಳಿಂದ 121 ವಿಕೆಟ್ ಹಾಗೂ ಟಿ-20 ಕ್ರಿಕೆಟ್​​ನಿಂದ 55 ವಿಕೆಟ್​ ಕಬಳಿಸಿದ್ದಾರೆ.

ಪಾಕಿಸ್ತಾನ ವಿರುದ್ಧದ ಮೂರು ಟೆಸ್ಟ್​ ಪಂದ್ಯಗಳ ಸರಣಿಯಲ್ಲಿ ಇಂಗ್ಲೆಂಡ್​ ಈಗಾಗಲೇ 1-0 ಅಂತರದ ಮುನ್ನಡೆ ಪಡೆದುಕೊಂಡಿದೆ. ಇಂದಿನಿಂದ ಆರಂಭಗೊಂಡಿರುವ ಪಂದ್ಯದಲ್ಲಿ ಟಾಸ್​ ಗೆದ್ದ ಇಂಗ್ಲೆಂಡ್​ ಬ್ಯಾಟಿಂಗ್​​ ಆಯ್ದುಕೊಂಡಿದೆ.

ABOUT THE AUTHOR

...view details