ಕರ್ನಾಟಕ

karnataka

ETV Bharat / sports

ಧೋನಿ ನಂ.4ರಲ್ಲಿ ಆಡಬೇಕೆಂದುಕೊಂಡಿದ್ದರು: ಆದರೆ ತಂಡಕ್ಕೋಸ್ಕರ ಕೆಳ ಕ್ರಮಾಂಕದಲ್ಲಿ ಫಿಕ್ಸ್​ ಆದ್ರು! - ಧೋನಿ ಬಗ್ಗೆ ಆರ್​ಪಿ ಸಿಂಗ್​ ಮೆಚ್ಚುಗೆ

ಕೂಲ್ ಕ್ಯಾಪ್ಟನ್​ ವೃತ್ತಿ ಜೀವನದಲ್ಲಿ 5 ಮತ್ತು 6ನೇ ಕ್ರಮಾಂಕದಲ್ಲೇ ಹೆಚ್ಚಿನ ಪಂದ್ಯಗಳನ್ನಾಡಿದ್ದಾರೆ. ಆದರೆ, ನಿಜವಾಗಿಯೂ ಅವರೂ ನಾಲ್ಕನೇ ಕ್ರಮಾಂಕದಲ್ಲಿ ಆಡಲು ಬಯಸಿದ್ದರು. ಆದರೆ, ಆಡಳಿತ ಮಂಡಳಿ ಒತ್ತಡವನ್ನು ನಿಭಾಯಿಸಿ ಆಡಲು ಧೋನಿಗಿಂತ ಉತ್ತಮ ಆಟಗಾರರಿಲ್ಲ ಎಂದು ನಂಬಿದ್ದರಿಂದ ಅವರ ಹೆಚ್ಚು ಕೆಳಕ್ರಮಾಂಕದಲ್ಲಿ ಆಡಬೇಕಾಯಿತು ಎಂದು ಆರ್​ಪಿ ಸಿಂಗ್​ ಹೇಳಿದ್ದಾರೆ.

ಎಂಎಸ್​ ಧೋನಿ
ಎಂಎಸ್​ ಧೋನಿ

By

Published : Aug 27, 2020, 4:29 PM IST

Updated : Aug 27, 2020, 4:50 PM IST

ಮುಂಬೈ: ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್​ ಧೋನಿಗೆ ನಾಲ್ಕನೇ ಕ್ರಮಾಂಕದಲ್ಲಿ ಆಡಬೇಕು ಎಂಬ ಬಯಕೆ ಹೊಂದಿದ್ದರು. ಆದರೆ, ಗೇಮ್​ ಫಿನಿಶಿಂಗ್ ಮಾಡಲು ಧೋನಿಗಿಂತ ಬೇರೆ ಆಟಗಾರರಿಲ್ಲ ಎಂಬ ಕಾರಣಕ್ಕೆ ಆಡಳಿತ ಮಂಡಳಿ ಕೆಳ ಕ್ರಮಾಂಕದಲ್ಲಿ ಆಡಲು ಸೂಚಿಸಿತ್ತು ಎಂದು ಮಾಜಿ ಕ್ರಿಕೆಟಿಗ ಆರ್​ಪಿ ಸಿಂಗ್ ನೆನಪಿಸಿಕೊಂಡಿದ್ದಾರೆ.

ಕೂಲ್ ಕ್ಯಾಪ್ಟನ್​ ವೃತ್ತಿ ಜೀವನದಲ್ಲಿ 5 ಮತ್ತು 6ನೇ ಕ್ರಮಾಂಕದಲ್ಲೇ ಹೆಚ್ಚಿನ ಪಂದ್ಯಗಳನ್ನಾಡಿದ್ದಾರೆ. ಆದರೆ, ನಿಜವಾಗಿಯೂ ಅವರೂ ನಾಲ್ಕನೇ ಕ್ರಮಾಂಕದಲ್ಲಿ ಆಡಲು ಬಯಸಿದ್ದರು. ಆದರೆ, ಆಡಳಿತ ಮಂಡಳಿ ಒತ್ತಡವನ್ನು ನಿಭಾಯಿಸಿ ಆಡಲು ಧೋನಿಗಿಂತ ಉತ್ತಮ ಆಟಗಾರರಿಲ್ಲ ಎಂದು ನಂಬಿದ್ದರಿಂದ ಅವರ ಹೆಚ್ಚು ಕೆಳಕ್ರಮಾಂಕದಲ್ಲಿ ಆಡಬೇಕಾಯಿತು ಎಂದು ಆರ್​ಪಿ ಸಿಂಗ್​ ಹೇಳಿದ್ದಾರೆ.

ನಾನೇನು ತಪ್ಪಾಗಿ ಹೇಳುತ್ತಿಲ್ಲ, ಸ್ವತಃ ಧೋನಿಯೇ ಈ ಮಾತನ್ನು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಆದರೆ, ಕೆಳಕ್ರಮಾಂದಲ್ಲಿ ಒತ್ತಡ ನಿಭಾಯಿಸಿಕೊಂಡು ಆಡುವ ಉತ್ತಮ ಬ್ಯಾಟ್ಸ್​ಮನ್​ಗಳು ಯಾರೂ ಇಲ್ಲ ಎಂದು ತಂಡ ಭಾವಿಸಿತ್ತು ಎಂದು ಅವರು ಖಾಸಗಿ ಮಾಧ್ಯಮಕ್ಕೆ ತಿಳಿಸಿದ್ದಾರೆ.

ಇತಿಹಾಸದ ಬಗ್ಗೆ ಮಾತನಾಡಿದರೆ ಧೋನಿಯಂತಹ ಪಂದ್ಯವನ್ನು ಗೆಲ್ಲಿಸಿರುವ ಆಟಗಾರನನ್ನು ನೀವು ಎಂದಿಗೂ ಕಂಡಿರುವುದಿಲ್ಲ. ನಾವು ಮೈಕಲ್​ ಬೆವೆನ್ ಮತ್ತು ಕೆಲವರ ಬಗ್ಗೆ ಮಾತನಾಡಬಹುದು. ಆದರೆ ಧೋನಿ ಎಲ್ಲರಿಗಿಂತ ಸಂಪೂರ್ಣ ಭಿನ್ನವಾಗಿದ್ದ ಬ್ಯಾಟ್ಸ್​ಮನ್​ ಎಂದು ಆರ್​ಪಿ ಸಿಂಗ್​ ಹೇಳಿದ್ದಾರೆ.

Last Updated : Aug 27, 2020, 4:50 PM IST

ABOUT THE AUTHOR

...view details