ಹೈದರಾಬಾದ್ :ಅತಿ ಹೆಚ್ಚು ಟ್ರೋಫಿ ಗೆದ್ದಿರುವ ಮುಂಬೈ ಇಂಡಿಯನ್ಸ್ ಭಾರತ ಸೇರಿ ವಿಶ್ವದ ವಿವಿಧ ತಂಡಗಳಿಂದ ಅತ್ಯುತ್ತಮ ಆಟಗಾರರನ್ನು ಆಯ್ದು ಮಾಡಿದ ತಂಡವಾಗಿದೆ. ಇಲ್ಲಿ ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್ ಎಲ್ಲಾ ವಿಭಾಗದಲ್ಲೂ ಅತ್ಯುತ್ತಮ ಆಟಗಾರರೇ ಇದ್ದಾರೆ. 5 ಟ್ರೋಫಿ ಗೆಲ್ಲುವ ಮೂಲಕ ಅತ್ಯಂತ ಯಶಸ್ವಿ ತಂಡವಾಗಿರುವ ರೋಹಿತ್ ಬಳಗ ಇದೀಗ ಹ್ಯಾಟ್ರಿಕ್ ಪ್ರಶಸ್ತಿ ಗೆದ್ದ ಮೊದಲ ತಂಡ ಎನಿಸಿಕೊಳ್ಳಲು ಸಿದ್ಧವಾಗುತ್ತಿದೆ.
ಮುಂಬೈ ತಂಡವನ್ನು ನೋಡಿದಾಗ ಅದು ಪ್ರಶಸ್ತಿ ಗೆಲ್ಲಲು ಸಮರ್ಥ ತಂಡ ಎಂದು ಹೇಳುವುದಕ್ಕೆ ಯಾವುದೇ ಹಿಂಜರಿಕೆ ಬರುವುದಿಲ್ಲ. ಯಾಕೆಂದರೆ, ಅವರು ತಮ್ಮ ಬಹುಪಾಲು ತಂಡವನ್ನು ರೀಟೈನ್ ಮಾಡಿಕೊಂಡಿದೆ. ರೋಹಿತ್ ಶರ್ಮಾ, ಕ್ವಿಂಟನ್ ಡಿಕಾಕ್, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಕೀರನ್ ಪೊಲಾರ್ಡ್ ಮತ್ತು ಪಾಂಡ್ಯ ಬ್ರದರ್ಸ್ರನ್ನೊಳಗೊಂಡಿದ್ದು, ಯಾವುದೇ ತಂಡದ ಬೌಲರ್ಗಳನ್ನು ಸಮರ್ಥವಾಗಿ ಎದುರಿಸುವ ತಾಕತ್ತನ್ನು ಹೊಂದಿದ್ದಾರೆ.
ಅದರಲ್ಲೂ ಕಿಶನ್,ಡಿಕಾಕ್ ಮತ್ತು ಸೂರ್ಯ ಕುಮಾರ್ ಯಾದವ್ ಕಳೆದ ಐಪಿಎಲ್ನಲ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ತೋರಿದ್ದರು. ಅವರು ಕ್ರಮವಾಗಿ 516, 503 ಮತ್ತು 480 ರನ್ಗಳಿಸಿದ್ದರು. ಆಲ್ರೌಂಡರ್ ಮತ್ತು ಫಿನಿಶರ್ಸ್ :ಆರಂಭಿಕ ಕ್ರಮಾಂಕದಲ್ಲಿ ಸ್ಥಿರತೆಯುಳ್ಳ ಬ್ಯಾಟ್ಸ್ಮನ್ಗಳಿರುವುದು ಒಂದು ಕಡೆಯಾದರೆ, ಮಧ್ಯಮ ಕ್ರಮಾಂಕದಲ್ಲಿ ವಿಶ್ವಶ್ರೇಷ್ಠ ಫಿನಿಶರ್ಗಳಿದ್ದಾರೆ. ವೆಸ್ಟ್ ಇಂಡೀಸ್ ನಾಯಕ ಕೀರನ್ ಪೊಲಾರ್ಡ್ ಮುಂಬೈ ಮಧ್ಯಮ ಕ್ರಮಾಂಕದ ಬಲವಾಗಿದ್ದಾರೆ. ಇವರ ಜೊತೆ ಹಾರ್ದಿಕ್ ಪಾಂಡ್ಯ, ಕೃನಾಲ್ ಪಾಂಡ್ಯ ಹಾಗೂ ಈ ವರ್ಷದ ಹರಾಜಿನಲ್ಲಿ ಖರಿದೀಸಿರುವ ಜಿಮ್ಮಿ ನೀಶಮ್ ಕೂಡ ಅತ್ಯುತ್ತಮ ಫಿನಿಶರ್ ಆಗಿದ್ದಾರೆ.
ಶ್ರೇಷ್ಠ ವೇಗದ ಬೌಲರ್ಗಳ ದಂಡು :ಮುಂಬೈ ಇಂಡಿಯನ್ಸ್ ಐಪಿಎಲ್ನಲ್ಲೇ ಶ್ರೇಷ್ಠ ಬೌಲಿಂಗ್ ದಾಳಿ ಹೊಂದಿದೆ. ಭಾರತ ಜಸ್ಪ್ರೀತ್ ಬುಮ್ರಾ ಮತ್ತು ನ್ಯೂಜಿಲ್ಯಾಂಡ್ನ ಟ್ರೆಂಟ್ ಬೌಲ್ಟ್ ಪವರ್ ಪ್ಲೇ ಮತ್ತು ಡೆತ್ ಓವರ್ ಸ್ಪೆಷಲಿಸ್ಟ್ಗಳಾಗಿದ್ದಾರೆ. ಮತ್ತೊಬ್ಬ ನ್ಯೂಜಿಲ್ಯಾಂಡ್ ವೇಗಿ ಆ್ಯಡಂ ಮಿಲ್ನೇ ಕೂಡ ಈ ವರ್ಷ ಮತ್ತೆ ಮುಂಬೈ ಸೇರಿಕೊಂಡಿದ್ದು, ಇವರಿಗೆ ಸಾಥ್ ನೀಡಲಿದ್ದಾರೆ.
ಸ್ಪಿನ್ನರ್ಗಳ ಕೊರತೆ :ಮುಂಬೈ ಇಂಡಿಯನ್ಸ್ ತಂಡದ ಏಕೈಕ ದೌರ್ಬಲ್ಯವೆಂದರೆ ಮಧ್ಯಮ ಓವರ್ ಜವಾಬ್ದಾರಿ ನಿರ್ವಹಿಸಬೇಕಾಗಿರುವ ಸ್ಪಿನ್ನರ್ಗಳ ಅಲಭ್ಯತೆ. ಕಳೆದ ಆವೃತ್ತಿಯಲ್ಲಿ 15 ವಿಕೆಟ್ ಪಡೆದಿರುವ ರಾಹುಲ್ ಚಹಾರ್ ಹೊರೆತುಪಡಿಸಿದರೆ, ತಂಡದಲ್ಲಿರುವ ಉಳಿದ ಸ್ಪಿನ್ನರ್ಗಳ ಸಾಧನೆ ಅಷ್ಟಕ್ಕಷ್ಟೇ.. ಕೃನಾಲ್ ಪಾಂಡ್ಯ ಇಡೀ ಟೂರ್ನಿಯಲ್ಲಿ ಕೇವಲ 6 ವಿಕೆಟ್ ಪಡೆದರೆ, ಜಯಂತ್ ಯಾದವ್ 2 ಪಂದ್ಯಗಳಲ್ಲಿ ಅವಕಾಶ ಪಡೆದು ಕೇವಲ ಒಂದು ವಿಕೆಟ್ ಪಡೆದಿದ್ದರು. ಈ ವರ್ಷದ ಹರಾಜಿನಲ್ಲಿ ಪಿಯೂಷ್ ಚಾವ್ಲಾ ತಂಡ ಸೇರಿಕೊಂಡಿರುವುದರಿಂದ ಸ್ಪಿನ್ ವಿಭಾಗದ ಕೊರತೆ ತಕ್ಕಮಟ್ಟಿನ ಸಮಾಧಾನ ತಂದಿದೆ.
ತಂಡದ ಬಲಾಬಲವನ್ನು ಗಮನಿಸಿದರೆ ಮುಂಬೈ ಲೀಗ್ನಲ್ಲಿನ ಉಳಿದ 7 ತಂಡಗಳಿಗಿಂತ ಬಲಿಷ್ಠ ಎನ್ನುವುದರಲ್ಲಿ ಎರಡು ಮಾತಿಲ್ಲ. ಯಾಕೆಂದರೆ, 2013ಕ್ಕೂ ಹಿಂದಿನ 5 ಆವೃತ್ತಿಗಳಲ್ಲಿ ಟ್ರೋಫಿ ಎತ್ತಿ ಹಿಡಿಯುವಲ್ಲಿ ವಿಫಲವಾಗಿದ್ದ ಮುಂಬೈ ನಂತರದ 8 ಆವೃತ್ತಿಗಳಲ್ಲಿ 5 ಬಾರಿ ಟ್ರೋಫಿಗೆ ಮುತ್ತಿಕ್ಕಿದೆ. ಅಲ್ಲದೆ ಕಳೆದ 6 ವರ್ಷಗಳಲ್ಲಿ ಹೆಚ್ಚುಕಡಿಮೆ ಅದೇ ತಂಡವನ್ನು ಉಳಿಸಿಕೊಂಡು ಬರುತ್ತಿರುವುದು ಅದರ ಯಶಸ್ಸಿಗೆ ಕಾರಣವಾಗಿದೆ.
ತಂಡ :ರೋಹಿತ್ ಶರ್ಮಾ (ನಾಯಕ),ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್ (ವಿಕೆಟ್ ಕೀಪರ್),ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್),ಕ್ರಿಸ್ ಲಿನ್, ಹಾರ್ದಿಕ್ ಪಾಂಡ್ಯ,ಅ್ಯಡಮ್ ಮಿಲ್ನೆ, ಆದಿತ್ಯ ತಾರೆ, ಅನ್ಮೋಲ್‌ಪ್ರೀತ್ ಸಿಂಗ್, ಅನುಕುಲ್ ರಾಯ್, ಅರ್ಜುನ್ ತೆಂಡೂಲ್ಕರ್, ಧವಲ್ ಕುಲಕರ್ಣಿ, ಜೇಮ್ಸ್ ನೀಶಮ್, ಜಸ್ಪ್ರೀತ್ ಬುಮ್ರಾ, ಜಯಂತ್ ಪೊಲಾರ್ಡ್, ಕೀರನ್ ಪೊಲಾರ್ಡ್, ಕ್ರುನಾಲ್ ಪಾಂಡ್ಯ, ಮಾರ್ಕೊ ಜಾನ್ಸೆನ್, ಮೊಹ್ಸಿನ್ ಖಾನ್, ನಥನ್ ಕೌಲ್ಟರ್-ನೈಲ್, ಪಿಯೂಷ್ ಚಾವ್ಲಾ, ರಾಹುಲ್ ಚಹರ್, ಸೌರಭ್ ತಿವಾರಿ, ಟ್ರೆಂಟ್ ಬೌಲ್ಟ್, ಯುಧ್ವೀರ್ ಸಿಂಗ್