ಲಾಹೋರ್ : ಅನನುಭವಿಗಳ ತಂಡದ ನೇತೃತ್ವವಹಿಸಿ ಪಾಕಿಸ್ತಾನ ಪ್ರವಾಸ ಕೈಗೊಂಡಿದ್ದ ಶ್ರೀಲಂಕಾದ ತಂಡದ ದಸುನ್ ಶನಕಾ ನಾಯಕನಾಗಿ ಪದಾರ್ಪಣೆ ಮಾಡಿದ ಸರಣಿಯಲ್ಲೇ ಪಾಕ್ ತಂಡದ ವಿರುದ್ಧ 3-0ಯಲ್ಲಿ ಕ್ಲೀನ್ಸ್ವೀಪ್ ಸಾಧಿಸಿ, ಧೋನಿ, ಮೈಕಲ್ ಕ್ಲಾರ್ಕ್ ದಾಖಲೆ ಸರಿಗಟ್ಟಿದ್ದಾರೆ.
ಟಿ20 ತಂಡದ ನಾಯಕ ಮಲಿಂಗಾ ಭದ್ರತೆಯ ಕಾರಣ ಪಾಕ್ ಪ್ರವಾಸದಿಂದ ಹೊರಗುಳಿದಿದ್ದರಿಂದ ಯುವ ಆಲ್ರೌಂಡರ್ ದಸುನ್ ಶನಕಾರನ್ನು ನಾಯಕನನ್ನಾಗಿ ನೇಮಿಸಲಾಗಿತ್ತು. ಲಂಕಾ ಯುವ ತಂಡ ಟಿ20 ಕ್ರಿಕೆಟ್ನಲ್ಲಿ ನಂಬರ್ ಒನ್ ಸ್ಥಾನದಲ್ಲಿದ್ದ ಬಲಿಷ್ಠ ಪಾಕಿಸ್ತಾನವನ್ನು ಅವರ ನೆಲದಲ್ಲೆ 3-0ಯಲ್ಲಿ ಸೋಲಿಸಿ ಇತಿಹಾಸ ಬರೆದಿತ್ತು.