ಕರ್ನಾಟಕ

karnataka

ETV Bharat / sports

2 ಬಾರಿ ಕೋವಿಡ್​ ಟೆಸ್ಟ್​ನಲ್ಲಿ ನೆಗೆಟಿವ್​, ಸಿಎಸ್​ಕೆ ತಂಡ ಸೇರಿಕೊಳ್ಳಲಿದ್ದಾರೆ ದೀಪಕ್​ ಚಹಾರ್​ - ಐಪಿಎಲ್​ ಟಿ20

ದೀಪಕ್​ ಚಹಾರ್​ ಎರಡು ಟೆಸ್ಟ್​ನಲ್ಲೂ ನೆಗೆಟಿವ್ ಬಂದಿದ್ದು, ಅವರೂ ಬಯೋಬಬಲ್​ನಲ್ಲಿರುವ ಸಿಎಸ್​ಕೆ ತಂಡಕ್ಕೆ ಮರಳಲಿದ್ದಾರೆ ಎಂದು ಸಿಎಸ್​ಕೆ ಸಿಎಒ ವಿಶ್ವನಾಥನ್​ ಬುಧವಾರ ತಿಳಿಸಿದ್ದಾರೆ.

ಸಿಎಸ್​ಕೆ ತಂಡ ಸೇರಿಕೊಳ್ಳಲಿದ್ದಾರೆ ದೀಪಕ್​ ಚಹಾರ್​
ಸಿಎಸ್​ಕೆ ತಂಡ ಸೇರಿಕೊಳ್ಳಲಿದ್ದಾರೆ ದೀಪಕ್​ ಚಹಾರ್​

By

Published : Sep 9, 2020, 11:27 PM IST

ಹೈದರಾಬಾದ್​: ಎರಡು ವಾರಗಳ ಹಿಂದೆ ಕೋವಿಡ್​ 19 ಪರೀಕ್ಷೆಯಲ್ಲಿ ಪಾಸಿಟಿವ್​ ವರದಿ ಪಡೆದಿದ್ದ ಸಿಎಸ್​ಕೆ ತಂಡದ ವೇಗಿ ದೀಪಕ್​ ಚಹಾರ್​ 14 ದಿನಗಳ ಕ್ವಾರಂಟೈನ್​ ಮುಗಿಸಿದ್ದು, ಈ ವೇಳೆ 2 ಬಾರಿ ಟೆಸ್ಟ್​ನಲ್ಲೂ ನೆಗೆಟಿವ್​ ವರದಿ ಬಂದಿರುವುದರಿಂದ ಶೀಘ್ರದಲ್ಲೇ ಬಯೋಬಬಲ್​ ಸೇರಿಕೊಳ್ಳಲಿದ್ದಾರೆ.

ಐಪಿಎಲ್​ಗಾಗಿ ದುಬೈಗೆ ತೆರಳಿದ್ದ ವೇಳೆ ನಡೆಸಿದ್ದ ಕೋವಿಡ್​ ಪರೀಕ್ಷೆಯಲ್ಲೇ ತಂಡದ ಸಹ ಆಟಗಾರ ಸೇರಿದಂತೆ ಒಟ್ಟು 13 ಮಂದಿಯ ಜೊತೆ ಚಹಾರ್​ ಸಕರಾತ್ಮಕ ವರದಿ ಪಡೆದಿದ್ದರು. ಹೀಗಾಗಿ ಇವರೆಲ್ಲರನ್ನು ಆಟಗಾರರಿಂದ ಬೇರ್ಪಡಿಸಿ ಬೇರೊಂದು ಹೋಟೆಲ್​ನಲ್ಲಿ ಕ್ವಾರಂಟೈನ್​ನಲ್ಲಿರಿಸಲಾಗಿತ್ತು.

ದೀಪಕ್​ ಚಹಾರ್​ ಎರಡು ಟೆಸ್ಟ್​ನಲ್ಲೂ ನೆಗೆಟಿವ್ ಬಂದಿದ್ದು, ಅವರೂ ಬಯೋಬಬಲ್​ನಲ್ಲಿರುವ ಸಿಎಸ್​ಕೆ ತಂಡಕ್ಕೆ ಮರಳಲಿದ್ದಾರೆ ಎಂದು ಸಿಎಸ್​ಕೆ ಸಿಎಒ ವಿಶ್ವನಾಥನ್​ ಬುಧವಾರ ತಿಳಿಸಿದ್ದಾರೆ.

ದೀಪಕ್​ ಚಹಾರ್​ ಬಿಸಿಸಿಐ ಪ್ರೋಟೋಕಾಲ್​ ಪ್ರಕಾರ, ಹೃದಯ ರಕ್ತನಾಳದ ಪರೀಕ್ಷೆಗೆ ಒಳಗಾಗಬೇಕಿದೆ. ಅದು ಅವರು ಚೇತರಿಸಿಕೊಂಡಿದ್ದಾರೆ ಎಂಬುದನ್ನು ಖಾತ್ರಿಪಡಿಸುತ್ತದೆ. ನಂತರ ಮತ್ತೊಂದು ಕೋವಿಡ್​ ಪರೀಕ್ಷೆಯಲ್ಲಿ ನೆಗೆಟಿವ್​ ಪಡೆದ ನಂತರ ಅವರು ತರಬೇತಿ ಆರಂಭಿಸಬಹುದು ಎಂದು ವಿಶ್ವನಾತನ್​ ಹೇಳಿದ್ದಾರೆ.

ABOUT THE AUTHOR

...view details