ದುಬೈ :ಐಪಿಎಲ್ನಿಂದ ಹೊರಬಂದಿದ್ದಕ್ಕೆ ಪರೋಕ್ಷವಾಗಿ ಕಿಡಿಕಾರಿದ್ದ ಬಿಸಿಸಿಐ ಮಾಜಿ ಅಧ್ಯಕ್ಷ ಹಾಗೂ ಸಿಎಸ್ಕೆ ಮಾಲೀಕ ತಮ್ಮ ಹೇಳಿಕೆಯನ್ನು ವಿಷಯದಿಂದಾಚೆಗೆ ಕೊಂಡೊಯ್ದು ಅರ್ಥೈಸಲಾಗುತ್ತಿದೆ. ಸಿಎಸ್ಕೆ ಯಾವಾಗಲೂ ರೈನಾರೊಂದಿಗೆ ನಿಲ್ಲಲಿದೆ ಎಂದು ತಿಳಿಸಿದ್ದಾರೆ.
ರೈನಾ ಕುರಿತು ಹಿಂದೆ ನೀಡಿದ್ದ ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದ್ದಂತೆಯೇ ಟೈಮ್ಸ್ ಆಫ್ ಇಂಡಿಯಾಗೆ ನೀಡಿದ ಸಂದರ್ಶನದಲ್ಲಿ "ನನ್ನ ಹೇಳಿಕೆಯನ್ನು ಸಂದರ್ಭದಿಂದ ಹೊರತೆಗೆದು ಋಣಾತ್ಮಕವಾಗಿ ಅರ್ಥೈಸಲಾಗುತ್ತಿದೆ" ಎಂದಿದ್ದಾರೆ.
"ರೈನಾ ಚೆನ್ನೈ ಸೂಪರ್ ಕಿಂಗ್ಸ್ ಪ್ರಾಂಚೈಸಿಗೆ ಅಪಾರ ಕೊಡುಗೆ ನೀಡಿದ್ದಾರೆ. 2008ರಿಂದಲೂ ಅವರ ಸಾಧನೆ ಅತ್ಯುತ್ತಮವಾಗಿದೆ. ಕಳೆದ 10 ವರ್ಷಗಳಿಂದ ಈ ಹುಡುಗರೆಲ್ಲಾ ಕುಟುಂಬದವರಂತೆ ಇದ್ದಾರೆ. ಈಗ ಅವರ(ರೈನಾ) ವೈಯಕ್ತಿಕ ನಿರ್ಧಾರವನ್ನು ಪ್ರಾಂಚೈಸಿ ಗೌರವಿಸಲಿದೆ. ಅಲ್ಲದೆ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಸಿಎಸ್ಕೆ ಕುಟುಂಬ ರೈನಾ ಬೆಂಬಲಕ್ಕೆ ನಿಲ್ಲಲಿದೆ. ಅವರ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಅವರಿಗೆ ಸಮಯವನ್ನು ನೀಡಬೇಕಿದೆ ಎಂದು ತಿಳಿಸಿದ್ದಾರೆ.
ಇದಕ್ಕೂ ಮೊದಲು,"ಪ್ರಸ್ತುತ ವ್ಯವಸ್ಥೆಗೆ ಬಗ್ಗೆ ಅಸಮಾಧಾನವಿರುವವರು ತಂಡದಿಂದ ಹೊರ ಹೋಗಬಹುದು. ಕೆಲವೊಮ್ಮೆ ಯಶಸ್ಸು ತಲೆಗೆ ಹತ್ತಿದರೆ ಈ ರೀತಿ ನಿರ್ಧಾರ ತೆಗೆದುಕೊಳ್ಳುತ್ತಾರೆ" ಎಂದಿದ್ದ ಶ್ರೀನಿವಾಸನ್, ರೈನಾ ತಂಡಕ್ಕೆ ಮರಳದಿದ್ದರೆ, ಅವರ ಬದಲು ಯುವ ಆಟಗಾರ ಋತುರಾಜ್ ಗಾಯಕ್ವಾಡ್ರನ್ನು ತಂಡದಲ್ಲಿ ಆಡಿಸುವುದಾಗಿ ಹಾಗೂ ಈ ಬಾರಿ ರೈನಾ ಸಿಎಸ್ಕೆಯಿಂದ ಪಡೆಯಬೇಕಿರುವ 11 ಕೋಟಿ ರೂ. ವೇತನವನ್ನು ಕಳೆದುಕೊಳ್ಳಲಿದ್ದಾರೆ ಎಂದು ಹೇಳಿದ್ದರು.
2008ರಲ್ಲಿ ಸಿಎಸ್ಕೆ ತಂಡ ಸೇರಿಕೊಂಡಿದ್ದ ಸುರೇಶ್ ರೈನಾ ನಿಷೇಧವಾಗಿದ್ದ 2 ವರ್ಷಗಳನ್ನು ಹೊರೆತುಪಡಿಸಿ ಎಲ್ಲಾ ಆವೃತ್ತಿಗಳಲ್ಲೂ ಸಿಎಸ್ಕೆ ಪರ ಆಡಿದ್ದಾರೆ. ಅಲ್ಲದೆ ಸಿಎಸ್ಕೆ ತಂಡದ ಯಶಸ್ಸಿನಲ್ಲಿ ಸಿಂಹಪಾಲನ್ನು ರೈನಾ ಪಡೆದಿದ್ದಾರೆ. ಮಿಸ್ಟರ್ ಐಪಿಎಲ್ ಖ್ಯಾತಿಯ ರೈನಾ ಅತಿ ಹೆಚ್ಚು(193) ಪಂದ್ಯಗಳನ್ನಾಡಿರುವ ಆಟಗಾರನಾಗಿದ್ದು, 38 ಅರ್ಧಶತಕಗಳ ಸಹಿತ 5368 ರನ್ಗಳಿಸಿದ್ದಾರೆ.