ಹೈದರಾಬಾದ್: ಬ್ರಿಸ್ಬೇನ್‌ನಲ್ಲಿ ನಡೆದ ನಾಲ್ಕನೇ ಮತ್ತು ಅಂತಿಮ ಟೆಸ್ಟ್‌ನಲ್ಲಿ ಭಾರತದ ಐತಿಹಾಸಿಕ ಗೆಲುವಿನಲ್ಲಿ ರಿಷಭ್ ಪಂತ್ ಮತ್ತು ಶುಬ್ಮನ್ ಗಿಲ್ ಮತ್ತು ಹೊಸ 'ವಾಲ್' ಚೇತೇಶ್ವರ್ ಪೂಜಾರ ಅವರ ಕಾಣಿಕೆ ಮತ್ತು ನಿರ್ಭೀತ ಬ್ಯಾಟಿಂಗ್ ಬಗ್ಗೆ ಬಹುತೇಕ ಎಲ್ಲ ಭಾರತೀಯ ಅಭಿಮಾನಿಗಳು ಮತ್ತು ಪಂಡಿತರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಸಮಯದಲ್ಲಿ, ಪೂಜಾರ ಒಟ್ಟು 928 ಎಸೆತಗಳನ್ನು ಎದುರಿಸಿದ್ದಾರೆ. 29 ಬೌಂಡರಿಗಳ ಸಹಾಯದಿಂದ 33.88 ಸ್ಟ್ರೈಕ್ ದರದಲ್ಲಿ ಒಟ್ಟು 271 ರನ್ ಗಳಿಸಿದರು. 562 ಚೆಂಡು ಎದುರಿಸುವ ರಹಾನೆ 268 ರನ್ ಗಳಿಸಿ ಹೆಚ್ಚಿನ ಎಸೆತಗಳನ್ನು ಎದುರಿಸಿದವರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದರೆ, ಶುಬ್ಮನ್ ಗಿಲ್ 427 ಎಸೆತ ಎದುರಿಸಿ 259 ರನ್ ಗಳಿಸಿದ್ದಾರೆ. ಸರಣಿಯಲ್ಲಿ ಭಾರತದ ಅಗ್ರ ಸ್ಕೋರರ್ ಆಗಿ ಹೊರಹೊಮ್ಮಿದ ಪಂತ್ 392 ಎಸೆತಗಳಲ್ಲಿ 274 ರನ್ ಗಳಿಸಿದ್ದಾರೆ.
ಆಸ್ಟ್ರೇಲಿಯಾದಲ್ಲಿ ನಡೆದ 2018-19 ಸರಣಿಯ ಅವಧಿಯಲ್ಲಿ, ಪೂಜಾರ ಒಟ್ಟು 1,258 ಎಸೆತಗಳನ್ನು ಎದುರಿಸಿದ್ದರು ಮತ್ತು 74.43 ರ ಸರಾಸರಿಯಲ್ಲಿ 50 ಬೌಂಡರಿ ಮತ್ತು ಎರಡು ಸಿಕ್ಸರ್‌ಗಳ ಸಹಾಯದಿಂದ 41.21 ಸ್ಟ್ರೈಕ್ ರೇಟ್ನಲ್ಲಿ 521 ರನ್ ಗಳಿಸಿದ್ದರು.