ಕರ್ನಾಟಕ

karnataka

By

Published : Feb 8, 2021, 6:04 PM IST

ETV Bharat / sports

ಚೆನ್ನೈ ಟೆಸ್ಟ್​ ಗೆಲ್ಲಲು ಬೇಕು 381ರನ್..​ ಕೊಹ್ಲಿ ಪಡೆಯಿಂದ 2008ರ ಸಾಧನೆ ಮರುಕಳಿಸುವುದೇ!?

ಕೊನೆಯ ದಿನ 90 ಓವರ್​ಗಳ ಆಟ ನಡೆಯಲಿದ್ದು, ಭಾರತಕ್ಕೆ ಗೆಲ್ಲಲು 381 ರನ್​ಗಳ ಅವಶ್ಯಕತೆಯಿದೆ. ಪ್ರಸ್ತುತ ಚೇತೇಶ್ವರ್ ಪೂಜಾರ ಅಜೇಯ 12 ಮತ್ತು ಶುಭಮನ್​ ಗಿಲ್​ ಅಜೇಯ 15 ರನ್​​ಗಳಿಸಿ ಕೊನೆಯ ದಿನಕ್ಕೆ ಬ್ಯಾಟಿಂಗ್ ಕಾಯ್ದಿರಿಸಿದ್ದಾರೆ..

ಭಾರತ vs ಇಂಗ್ಲೆಂಡ್ ಟೆಸ್ಟ್​ ಸರಣಿ
ಭಾರತ vs ಇಂಗ್ಲೆಂಡ್ ಟೆಸ್ಟ್​ ಸರಣಿ

ಚೆನ್ನೈ :ಇಂಗ್ಲೆಂಡ್​ ವಿರುದ್ಧ ಚೆನ್ನೈನ ಎಂ ಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್​ ಪಂದ್ಯ ರೋಚಕ ಘಟ್ಟ ತಲುಪಿದೆ. 420 ರನ್​ಗಳ ಗುರಿ ಬೆನ್ನತ್ತಿರುವ ಭಾರತ ತಂಡ 31ರನ್​ಗಳಿಗೆ ಒಂದು ವಿಕೆಟ್​ ಕಳೆದುಕೊಂಡು ಆಘಾತ ಎದುರಿಸಿದೆ.

3ನೇ ದಿನ 257 ರನ್​ಗಳಿಸಿದ್ದ ಭಾರತ ತಂಡ ಇಂದು ಆ ಮೊತ್ತಕ್ಕೆ 70 ರನ್​ ಸೇರಿಸಿ 337ರನ್​ಗಳಿಗೆ ಆಲೌಟ್ ​ಆಯಿತು. ನಿನ್ನೆ 33 ರನ್​ಗಳಿಸಿದ್ದ ವಾಷಿಂಗ್ಟನ್ ಸುಂದರ್ ಅಜೇಯ 85 ರನ್​ಗಳಿಸಿದರೆ, ಅಶ್ವಿನ್ 31 ರನ್​ಗಳಿಸಿದ್ದರು. ಇಂಗ್ಲೆಂಡ್ ಪರ ಆರ್ಚರ್​ 2, ಬೆಸ್​ 4, ಜ್ಯಾಕ್ ಲೀಚ್ 2, ಆಂರ್ಡಸನ್ 2 ವಿಕೆಟ್​ ಪಡೆದು ಮಿಂಚಿದರು.

ಇನ್ನು, ಬರೋಬ್ಬರಿ 241 ರನ್​ಗಳ ಬೃಹತ್ ಮುನ್ನಡೆಯೊಂದಿಗೆ 2ನೇ ಇನ್ನಿಂಗ್ಸ್​ ಆರಂಭಿಸಿದ ಇಂಗ್ಲೆಂಡ್ ತಂಡ ಅಶ್ವಿನ್​ ಬೌಲಿಂಗ್ ದಾಳಿಗೆ ತತ್ತರಿಸಿ ರನ್​ಗಳಿಸಲು ಪರದಾಡಿ ಕೇವಲ 178ರನ್​ಗಳಿಗೆ ಆಲೌಟ್ ಆಯಿತು. ರೂಟ್​ 40ರನ್​ಗಳಿಸಿದ್ದೇ ತಂಡದ ಗರಿಷ್ಠ ಮೊತ್ತವಾಯಿತು. ಆಲ್ಲಿ ಪೋಪ್​ 28, ಜಾಸ್ ಬಟ್ಲರ್​ 24, ಡೊಮಿನಿಕ್ ಥೀಮ್​ 25 ರನ್​ಗಳಿಸಿದರು. ಇಂಗ್ಲೆಂಡ್​ 46.3 ಓವರ್​ಗಳಿಗೆ 178 ಆಲೌಟ್ ಆಗುವ ಮೂಲಕ ಭಾರತಕ್ಕೆ 420 ರನ್​ಗಳ ಟಾರ್ಗೆಟ್ ನೀಡಿದೆ.

ಭಾರತದ ಪರ ಅಶ್ವಿನ್ 4, ಶಹಬಾಜ್ ನದೀಮ್ 3, ಇಶಾಂತ್ ಶರ್ಮಾ ಮತ್ತು ಜಸ್ಪ್ರೀತ್ ಬುಮ್ರಾ ತಲಾ 1 ವಿಕೆಟ್ ಪಡೆದರು. 420 ರನ್​ಗಳ ಬೃಹತ್ ಗುರಿ ಬೆನ್ನತ್ತಿದ ಭಾರತ ತಂಡ 39ರನ್​ಗಳಿಗೆ ಒಂದು ವಿಕೆಟ್ ಕೇಳದುಕೊಂಡಿದೆ. 12 ರನ್​ಗಳಿಸಿದ್ದ ರೋಹಿತ್ ಶರ್ಮಾ ಜ್ಯಾಕ್ ಲೀಚ್​ಗೆ ವಿಕೆಟ್‌ವೊಪ್ಪಿಸಿ ನಿರಾಶೆ ಮೂಡಿಸಿದರು.

ಕೊನೆಯ ದಿನ 90 ಓವರ್​ಗಳ ಆಟ ನಡೆಯಲಿದ್ದು, ಭಾರತಕ್ಕೆ ಗೆಲ್ಲಲು 381 ರನ್​ಗಳ ಅವಶ್ಯಕತೆಯಿದೆ. ಪ್ರಸ್ತುತ ಚೇತೇಶ್ವರ್ ಪೂಜಾರ ಅಜೇಯ 12 ಮತ್ತು ಶುಭಮನ್​ ಗಿಲ್​ ಅಜೇಯ 15 ರನ್​​ಗಳಿಸಿ ಕೊನೆಯ ದಿನಕ್ಕೆ ಬ್ಯಾಟಿಂಗ್ ಕಾಯ್ದಿರಿಸಿದ್ದಾರೆ.

ಇದೇ ಕ್ರೀಡಾಂಗಣದಲ್ಲಿ 387ರನ್​ ಚಚ್ಚಿ ಗೆದ್ದಿದ್ದ ಭಾರತ

ಭಾರತ ತಂಡ 2008ರಲ್ಲಿ ಇದೇ ಕ್ರೀಡಾಂಗಣದಲ್ಲಿ ನಡೆದಿದ್ದ ಇಂಗ್ಲೆಂಡ್ ವಿರುದ್ಧದ ಟೆಸ್ಟ್​ ಪಂದ್ಯದಲ್ಲಿ ಭಾರತ ತಂಡ 387 ರನ್​ಗಳನ್ನು ಯಶಸ್ವಿಯಾಗಿ ಚೇಸ್​ ಮಾಡಿ ಗೆಲುವು ಸಾಧಿಸಿತ್ತು. ಗಂಭೀರ್​ 66, ವಿರೇಂದ್ರ ಸೆಹ್ವಾಗ್​ (83) ಸಚಿನ್ ಅಜೇಯ 103, ಯುವರಾಜ್ ಸಿಂಗ್​ ಅಜೇಯ 85 ರನ್​ಗಳಿಸಿ ಗಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಹೀಗಾಗಿ, ನಾಳಿನ ಪಂದ್ಯ ತೀವ್ರ ಕುತೂಹಲ ಮೂಡಿಸಿದೆ.

ABOUT THE AUTHOR

...view details