ಬೆಂಗಳೂರು: ಸಚಿನ್ ತೆಂಡೂಲ್ಕರ್ ಅಭಿಮಾನಿಯಾಗಿರುವ ಬಿಹಾರ ಮೂಲದ ಸುಧೀರ್ ಕುಮಾರ್ಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಫ್ಯಾನ್ ಪೇಜ್ ಅಡ್ಮಿನ್ ಪ್ರಭು ದಾಮೋದರ್ ವಂಚನೆ ಎಸಗಿದ್ದಾರೆ ಎಂದು ಹೇಳಲಾಗುತ್ತಿದೆ.
ಸಚಿನ್ ತೆಂಡೂಲ್ಕರ್ ಅಭಿಮಾನಿಗೆ CSK ಫ್ಯಾನ್ ಪೇಜ್ ಅಡ್ಮಿನ್ನಿಂದ ಲಕ್ಷ ಲಕ್ಷ ದೋಖಾ... ಹೇಗಂತ ಗೊತ್ತಾ?
ಸಚಿನ್ ತೆಂಡುಲ್ಕರ್ ಅಭಿಮಾನಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಫ್ಯಾನ್ ಪೇಜ್ ಅಡ್ಮಿನ್ ಮಹಾ ದೋಖಾ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ದೇಶದ ಹಲವೆಡೆ ಅಭಿಮಾನಿಗಳ ಬಳಗ ಹೊಂದಿರುವ ಸುಧೀರ್ ಕುಮಾರ್ಗೆ ಒಂದು ದಿನ ಚೆನ್ನೈ ಸೂಪರ್ ಕೀಂಗ್ ಫ್ಯಾನ್ ಪೇಜ್ ಅಡ್ಮಿನ್ ಪ್ರಭು ದಾಮೋದರ್ ಪರಿಚಯವಾಗಿ. ಸುಧೀರ್ ಜೊತೆ ಸ್ನೇಹ ಬೆಳೆಸಿದ್ದಾನೆ. ಸಾಮಾಜಿಕ ಜಾಲತಾಣದಲ್ಲಿ ಪ್ರಮೋಷನ್ ಮಾಡುವುದಾಗಿ ತಿಳಿಸಿ ಸುಧೀರ್ ಕುಮಾರ್ ಹೆಸರಿನಲ್ಲಿ ಇನ್ಸ್ಟಗ್ರಾಮ್ ಹಾಗೂ ಫೇಸ್ಬುಕ್ ಪೇಜ್ ಫೋಟೋ ಮ್ಯಾಚ್ ಕುರಿತು ಜಾಹಿರಾತು ನೀಡಿ ಇದರಲ್ಲಿ ಲಕ್ಷ ಲಕ್ಷ ಹಣ ಸಂಪಾದನೆ ಮಾಡುತ್ತಿದ್ದ.
ಈ ವಿಚಾರ ಸುಧೀರ್ ಕುಮಾರ್ ಅವರಿಗೆ ಮೊದಲು ಗೊತ್ತಾಗಿರಲಿಲ್ಲ. ಇತ್ತೀಚೆಗೆ ಕೊಲ್ಕತ್ತಾದಲ್ಲಿ ನ್ಯೂಜಿಲೆಂಡ್ ಸ್ನೇಹಿತರು ಸಿಕ್ಕಿದ್ದು, ಈ ವೇಳೆ ಇನ್ಸ್ಟಾಗ್ರಾಮ್ ಹಾಗೂ ಫೇಸ್ ಬುಕ್ನಲ್ಲಿ ಹಣ ಗಳಿಸಬಹುದೆಂದು ಹೇಳಿದಾಗ ಸುಧೀರ್ ಕುಮಾರ್, ಪ್ರಭು ದಾಮೋದರ್ಗೆ ಕರೆ ಮಾಡಿ ಇನ್ಸ್ಟಾಗ್ರಾಮ್ ಹಾಗೂ ಫೇಸ್ಬುಕ್ ಪಾಸ್ ವರ್ಡ್ ಕೇಳಿದ್ದಾರೆ. ಈ ವೇಳೆ ಪ್ರಭು ಕೊಡಲು ನಿರಕಾರಣೆ ಮಾಡಿದ್ದು ಸದ್ಯ ಲಕ್ಷ ಲಕ್ಷ ಹಣ ಲಪಾಟಯಿಸಿರುವ ವಿಚಾರ ಬೆಳಕಿಗೆ ಬಂದಿದೆ. ಇದೀಗ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಿಸಲು ಸುಧೀರ್ ಕುಮಾರ್ ಮುಂದಾಗಿದ್ದಾರೆ.