ಕರ್ನಾಟಕ

karnataka

ETV Bharat / sports

ಕೊಹ್ಲಿಯ ಆ ಒಂದು ನಿರ್ಧಾರ ಪಂದ್ಯದ ಗತಿಯನ್ನೇ ಬದಲಿಸಿತು: ಚಹಾಲ್

ಸಿರಾಜ್ ಈ ಪಂದ್ಯದಲ್ಲಿ 4 ಓವರ್​ಗಳಲ್ಲಿ 2 ಮೇಡನ್ ತೆಗೆದಿದ್ದಲ್ಲೆ ಕೇವಲ 8 ರನ್​ ನೀಡಿ 3 ವಿಕೆಟ್ ಪಡೆದು ಮಿಂಚಿದರು.

ಕೆಕೆಆರ್​ -ಆರ್​ಸಿಬಿ
ಕೆಕೆಆರ್​ -ಆರ್​ಸಿಬಿ

By

Published : Oct 21, 2020, 10:54 PM IST

ಅಬುಧಾಬಿ: ಕೆಕೆಆರ್ ತಂಡದ ವಿರುದ್ಧ ಆರ್​ಸಿಬಿ ಉತ್ತಮ ಬೌಲಿಂಗ್ ಪ್ರದರ್ಶನ ತೋರುವ ಮೂಲಕ ಕೇವಲ 84 ರನ್​ಗಳಿಗೆ ನಿಯಂತ್ರಿಸಿದೆ. ಇದಕ್ಕೆಲ್ಲಾ ಕಾರಣ ನಾಯಕ ಕೊಹ್ಲಿ ತೆಗೆದುಕೊಂಡ ದಿಢೀರ್ ನಿರ್ಧಾರ ಎಂದು ಸ್ಪಿನ್ನರ್ ಯುಜುವೇಂದ್ರ ಚಹಾಲ್ ಹೇಳಿದ್ದಾರೆ.

ಟಾಸ್​ ಗೆದ್ದ ಕೆಕೆಆರ್​ ಬ್ಯಾಟಿಂಗ್ ನಡೆಸಲು ತೀರ್ಮಾನಿಸಿತ್ತು. ಕೊಹ್ಲಿ ಮೊದಲ ಓವರ್​ಅನ್ನು ಕ್ರಿಸ್ ಮೋರಿಸ್​ಗೆ ನೀಡಿದರು. ಮೋರಿಸ್ ಕೇವಲ 3 ರನ್​ ನೀಡಿದ್ದರು. ನಂತರದ ಓವರ್ ಅನ್ನು ಸುಂದರ್ ಬದಲಿಗೆ ಸಿರಾಜ್​ಗೆ ನೀಡಿದರು. ಸಿರಾಜ್ ಆ ಓವರ್​ನಲ್ಲಿ​ 2 ವಿಕೆಟ್ ಪಡೆದಿದ್ದಲ್ಲದೆ ಮೇಡನ್ ಮಾಡಿದರು.

ಕೆಕೆಆರ್ ಇನ್ನಿಂಗ್ಸ್​ ನಂತರ ಮಾತನಾಡಿದ ಚಹಾಲ್, ಮೋರಿಸ್​ ಬೌಲಿಂಗ್ ಮುಗಿಸಿದ ಮೇಲೆ ಎಂದಿನಂತೆ ಸುಂದರ್​ 2ನೇ ಓವರ್​ ಮಾಡಲು ಬಂದರೂ, ಆದರೆ ಕೊಹ್ಲಿ ಭಯ್ಯ ಈ ದಿನ ಸಿರಾಜ್​ಗೆ ಬೌಲಿಂಗ್ ಮಾಡಲು ಹೇಳಿದರು ಎಂದು ತಿಳಿಸಿದ್ದಾರೆ.

ಇದೇ ಮಾತನ್ನು ಕೋಚ್ ಕೂಡ ಹೇಳಿದ್ದು ಸಿರಾಜ್​ಗೆ 2ನೇ ಓವರ್​ ಬೌಲಿಂಗ್ ನೀಡುವ ಯೋಜನೆ ಕೊಹ್ಲಿ ಆನ್​ಫೀಲ್ಡ್​ನಲ್ಲಿ ತೆಗೆದುಕೊಂಡ ನಿರ್ಧಾರ ಎಂದು ನಾಯಕನನ್ನು ಮೆಚ್ಚಿಕೊಂಡಿದ್ದಾರೆ.

ನಾಯಕನ ನಿರ್ಧಾರವನ್ನು ಸಮರ್ಥಿಸಿಕೊಂಡ ಸಿರಾಜ್ ಈ ಪಂದ್ಯದಲ್ಲಿ 4 ಓವರ್​ಗಳಲ್ಲಿ 2 ಮೇಡನ್ ತೆಗೆದಿದ್ದಲ್ಲೆ ಕೇವಲ 8 ರನ್​ ನೀಡಿ 3 ವಿಕೆಟ್ ಪಡೆದು ಮಿಂಚಿದರು.

ಟೂರ್ನಿಯಲ್ಲೇ ಅದ್ಭುತವಾಗಿ ಬೌಲಿಂಗ್ ಮಾಡಿದ ಆರ್​ಸಿಬಿ ಬೌಲರ್​ಗಳು ಕೆಕೆಆರ್ ತಂಡವನ್ನು ಅವರ ಐಪಿಎಲ್​ನ 2ನೇ ಕನಿಷ್ಠ ಮೊತ್ತಕ್ಕೆ ಕುಸಿಯುವಂತೆ ಮಾಡಿದರು. ಈ ಮೂಲಕ 2017ರಲ್ಲಿ ಕೆಕೆಆರ್ ತಂಡ 49ಕ್ಕೆ ಆಲೌಟ್ ಮಾಡಿದ್ದಕ್ಕೆ ಸೇಡು ತೀರಿಸಿಕೊಂಡಿತು.

ABOUT THE AUTHOR

...view details