ನವದೆಹಲಿ: 74 ನೇ ಸ್ವಾತಂತ್ರ್ಯ ದಿನಾಚರಣೆಯಂದು ಸಚಿನ್ ತೆಂಡೂಲ್ಕರ್ ನಿಮ್ಮ ಮಕ್ಕಳನ್ನು ದೈನಂದಿನ ಹೀರೋಗಳನ್ನಾಗಿ ಮಾಡಿ ಎಂದು ಪೋಷಕರಿಗೆ ಕರೆ ನೀಡಿದ್ದಾರೆ.
ನಿಮ್ಮ ಮಕ್ಕಳನ್ನು ದೈನಂದಿನ ಹೀರೋಗಳನ್ನಾಗಿ ಮಾಡಿ: ಸಚಿನ್ ತೆಂಡೂಲ್ಕರ್
ಟ್ವೀಟ್ ಸಂದೇಶದಲ್ಲಿ ಸಚಿನ್, ಕೋವಿಡ್-19 ಸಾಂಕ್ರಾಮಿಕದ ಮಧ್ಯೆ ಮಾರಕ ಕಾಯಿಲೆಯ ಬಗ್ಗೆ ಮಕ್ಕಳ ಪ್ರಶ್ನೆಗಳಿಗೆ ನಾವು ಉತ್ತರಿಸಬೇಕು ಎಂದು ಹೇಳಿದ್ದಾರೆ.
ಸಚಿನ್ ತೆಂಡೂಲ್ಕರ್
ಮಕ್ಕಳು ಭಾರತದ ಭವಿಷ್ಯ ಮತ್ತು ಅವರೇ ನಮ್ಮ ರಾಷ್ಟ್ರವನ್ನು ಮುಂದಕ್ಕೆ ಸಾಗಿಸುವವರು. ಅವರು ‘ದೈನಂದಿನ ಹೀರೋಸ್’ ಆಗಿರಲಿ ಮತ್ತು ಅದಕ್ಕಾಗಿ ಸರಿಯಾದ ವಾತಾವರಣವನ್ನು ಸೃಷ್ಟಿಸೋಣ ಎಂದು ಅವರು ಟ್ವೀಟ್ ಮಾಡಿದ್ದಾರೆ.
ಇದರ ಜೊತೆಗೆ, ಕೋವಿಡ್-19 ಸಾಂಕ್ರಾಮಿಕದ ಮಧ್ಯೆ ಮಾರಕ ಕಾಯಿಲೆಯ ಕುರಿತಾಗಿ ಮಕ್ಕಳ ಪ್ರಶ್ನೆಗಳಿಗೆ ನಾವು ಉತ್ತರಿಸಬೇಕು ಎಂದು ಹೇಳಿದ್ದಾರೆ.