ಕರ್ನಾಟಕ

karnataka

ETV Bharat / sports

ಐದು ಪಂದ್ಯಗಳ ಟೆಸ್ಟ್​ ಸರಣಿಗೆ ಆಸೀಸ್ ಇಂಗಿತ.. ನಿರ್ಧಾರಕ್ಕೆ ಇದು ಸೂಕ್ತ ಸಮಯವಲ್ಲ ಎಂದ ಬಿಸಿಸಿಐ

ವರ್ಷಾಂತ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿ ಬಗ್ಗೆ ಈಗಲೇ ನಿರ್ಧಾರ ತೆಗೆದು ಕೊಳ್ಳಲು ಸಾಧ್ಯವಿಲ್ಲ ಎಂದು ಬಿಸಿಸಿಐ ತಿಳಿಸಿದೆ.

BCCI official reacts to Cricket Australias proposal
ಐದು ಪಂದ್ಯಗಳ ಟೆಸ್ಟ್​ ಸರಣಿಗೆ ಆಸೀಸ್ ಇಂಗಿತ

By

Published : Apr 25, 2020, 8:20 PM IST

ಮುಂಬೈ:ಕೊರೊನಾ ಸೊಂಕಿನ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 30ರ ವರೆಗೆ ಆಸ್ಟ್ರೇಲಿಯಾ ಅಂತಾರಾಷ್ಟ್ರೀಯ ಗಡಿ ಮುಚ್ಚಿದೆ. ಆದಾಗ್ಯೂ ಕ್ರಿಕೆಟ್ ಆಸ್ಟ್ರೇಲಿಯಾ ಅಕ್ಟೋಬರ್​ನಲ್ಲಿ ಟಿ-20 ವಿಶ್ವಕಪ್ ಟೂರ್ನಿ ಮತ್ತು ಭಾರತದ ವಿರುದ್ದ ಟೆಸ್ಟ್ ಸರಣಿ ಆಯೋಜಿಸಲು ಉತ್ಸುಕವಾಗಿದೆ.

ವರ್ಷದ ಕೊನೆಯಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ 4 ಪಂದ್ಯಗಳ ಬದಲು 5 ಪಂದ್ಯಗಳ ಟೆಸ್ಟ್ ಸರಣಿ ಆಯೋಜನೆ ಬಗ್ಗೆ ಆಸ್ಟ್ರೇಲಿಯಾ ಸಿಇಒ, ಕೆವಿನ್ ರಾಬರ್ಟ್ಸ್​ ಇಂಗಿತ ವ್ಯಕ್ತಪಡಿಸಿದ್ದರು. ಆದರೆ ಬಿಸಿಸಿಐ, ಈ ಸಮಯದಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳಲು ಸಿದ್ಧವಿಲ್ಲ ಎಂದಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಸಿಸಿಐ ಅಧಿಕಾರಿಯೊಬ್ಬರು, ವರ್ಷದ ಕೊನೆಯಲ್ಲಿ ಆಸ್ಟ್ರೇಲಿಯಾದಲ್ಲಿ ಐದು ಟೆಸ್ಟ್ ಪಂದ್ಯಗಳನ್ನು ಆಡಲು ತೀರ್ಮಾನ ತೆಗೆದುಕೊಳ್ಳಲು ಇದು ತುಂಬಾ ಬೇಗ ಎನಿಸುತ್ತದೆ. ಈಗಿನ ಪರಿಸ್ಥಿತಿ ಉತ್ತಮವಾಗಿಲ್ಲ, ಅಕ್ಟೋಬರ್​ನಲ್ಲಿ ಎಂತಹ ಪರಿಸ್ಥಿತಿ ಇರುತ್ತದೆ ಎಂದು ಯಾರು ತಿಳಿದಿದ್ದಾರೆ ಎಂದಿದ್ದಾರೆ.

ಈ ವರ್ಷಾಂತ್ಯಕ್ಕೆ 5 ಪಂದ್ಯಗಳ ಟೆಸ್ಟ್ ಸರಣಿ ನಡೆಸಲು ಉತ್ಸುಕವಾಗಿದ್ದೇವೆ ಎಂದು ಕ್ರಿಕೆಟ್​ ಆಸ್ಟ್ರೇಲಿಯಾದ ಮುಖ್ಯ ಕಾರ್ಯನಿರ್ವಾಹಕ ಕೆವಿನ್​ ರಾಬರ್ಟ್ಸ್​ ಹೇಳಿದ್ದರು. ಮೈದಾನದೊಳಗೆ ಪ್ರೇಕ್ಷಕರು ಇರಲಿ ಬಿಡಲಿ, ನಾವು ಬಿಸಿಸಿಐ, ಭಾರತೀಯ ಆಟಗಾರರು ಹಾಗೂ ಅವರ ಸಿಬ್ಬಂದಿಯ ಜೊತೆಗೆ ಕ್ರಿಕೆಟ್​ ಜಗತ್ತನ್ನೇ ಪ್ರೇರೇಪಿಸುವಂತಹ ಸರಣಿ ಹಮ್ಮಿಕೊಳ್ಳಲು ಬಯಸುತ್ತೇವೆ ಎಂದಿದ್ದರು.

ABOUT THE AUTHOR

...view details